ಗದಗ: ರಾಜ್ಯಮಟ್ಟದ ಯುವ ಸಂಸತ್ ಸ್ಪರ್ಧೆ

25GDG08 B
Published on

ಗದಗ: ಪರಿಣಾಮಕಾರಿ ವಿಷಯ ಮಂಡನಾ ಸಾಮರ್ಥ್ಯ ಇರುವವರನ್ನು ಸಮಾಜವು ನಾಯಕ ಎಂದು ಒಪ್ಪಿಕೊಳ್ಳುತ್ತದೆ ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಹೇಳಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಸಹಯೋಗದೊಂದಿಗೆ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಜರುಗಿದ ಪ್ರೌಢಶಾಲಾ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಯುವ ಸಂಸತ್ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಮಾರೋಪ ಉದ್ಘಾಟಿಸಿ ಅವರು ಮಾತನಾಡಿದರು.

ಯುವ ಸಂಸತನಲ್ಲಿ ಪಾಲ್ಗೊಂಡವರಲ್ಲಿ ನಾಯಕತ್ವ ಗುಣ ಖಂಡಿತ ಮೂಡುತ್ತದೆ. ಅದನ್ನು ಇಂದು ನಡೆದ ಸಂಸತ್ ಕಲಾಪದಲ್ಲಿ ಸಾಭಿತುಪಡಿಸಿದ್ದಿರಿ ಎಂದರು. ಯುವ ಸಂಸತ್ ಕಾರ್ಯಕ್ರಮ ದಲ್ಲಿ ಪಾಲ್ಗೊಂಡವರು ಮುಂದೆ ಖಂಡಿತವಾಗಿ ಶಾಸಕರು, ಸಂಸದರು, ಸ್ಥಳೀಯ ಸಂಸ್ಥೆಯ, ತಾ.ಪಂ, ಜಿಪಂ ಸದಸ್ಯರು ಅಧ್ಯಕ್ಷರಾಗುತ್ತಿರಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯುವಕರು ದೇಶ ಕಟ್ಟುವ ಕಾಯಕದಲ್ಲಿ ಮಹತ್ವದ ಪಾತ್ರ ವಹಿಸಬೇಕು. ನಿಮ್ಮ ವಿಧ್ಯಾರ್ಥಿ ಜೀವನದಲ್ಲಿ ಉತ್ತಮ ಮೌಲ್ಯಗಳು, ಪ್ರಾಮಾಣಿಕತೆ ಮೈಗೂಡಿಸಿಕೊಂಡು ಸಾಮಾಜಿಕ ರಾಜಕೀಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ತಿಳಿಸಿದರು.

ಕೇವಲ‌ ಮಾಧ್ಯಮ ಗಳನ್ನು ತಲೆಯಲ್ಲಿಟ್ಡುಕೊಂಡು ರಾಜಕೀಯ ಮಾಡದೇ, ಪ್ರಾಮಾಣಿಕ,‌ ನೈತಿಕ ನೆಲೆಗಟ್ಟಿನಲ್ಲಿ ಸಾಮಾಜಿಕ‌ ಸೇವೆ ಮಾಡುವ ಮನೋಭಾವನೆ ರೂಡಿಸಿಕೊಳ್ಳಬೇಕು. ನಮ್ಮ ಯೋಜನಾ ಸಾಮರ್ಥ್ಯ ಮಹತ್ತರವಾಗಿ ಇಟ್ಟುಕೊಂಡು ಅದರ ಸಾಕಾರಕ್ಕೆ ನಿರಂತರ ಶ್ರಮ ವಹಿಸಿ, ಸಮಾಜಕ್ಕೆ ನಮ್ಮದೇ ಆದ ಸೇವೆಯನ್ನು‌ ನೀಡಲು ಯುವಕರು ಮುಂದಾಗಬೇಕು. ಜನಹಿತಕ್ಕಾಗಿ ನಿಮ್ಮ ಅಮುಲ್ಯವಾದ ಸಮಯವನ್ನು ಮಿಸಲಿಡುವ ಶಪತವನ್ನು‌ ಮಾಡುವ ಜೋತೆಗೆ, ಪ್ರಾಮಾಣಿಕ‌ ಆಡಳಿತ ಸಮಾಜಕ್ಕೆ ನೀಡುವ ದೃಡ ನಿರ್ದಾರ ನಿಮ್ಮದಾಗಿಸಿಕೊಳ್ಳಲು ಕರೆ ನೀಡಿದರು.

ರಾಜಕಾರಣಿಗಳ ಕೈ ಹಿಡಿದು ಉತ್ತಮ ಮಾರ್ಗದೆಡೆಗೆ ಸಾಗಿಸುವ ಶಕ್ತಿ ಯುವಜನತೆಗಿದೆ. ಅದನ್ನು ತಾವು ನಿರಂತರವಾಗಿ ಮಾಡಬೇಕು ಎಂದು ಸಚಿವ ಎಚ್. ಕೆ. ಪಾಟೀಲ ತಿಳಿಸಿದರು.

ವಿಧಾನಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ ಮಾತನಾಡಿ, ಗದಗ ಜಿಲ್ಲೆ ವಿವಿಧ ಕ್ಷೇತ್ರದಲ್ಲಿ ತನ್ನದೇ ಆದ ಸಾಧನೆ ಮಾಡಿದೆ, ಇಂತಹ ಕ್ಷೇತ್ರದಲ್ಲಿ ರಾಜ್ಯ ಮಟ್ಟದ ಯುವ ಸಂಸತ್ ಸ್ಪರ್ಧೆ ನಡೆದದ್ದು, ಹಾಗೂ ಸಂಸದೀಯ ಸಚಿವರು ಗದಗ ಜಿಲ್ಲೆಯವರು ಎಂಬುದು ಹೆಮ್ಮೆ ತಂದಿದೆ. ಯುವ ಸಂಸತ್ ಸ್ಪರ್ಧೆ ಪಾಲ್ಗೊಂಡ ಯುವಕರ ರಾಜಕೀಯ ಸಾಮಾಜಿಕ ಜೀವನಕ್ಕೆ ಸ್ಪೂರ್ತಿ ನೀಡಲಿದೆ ಎಂದರು.

ಯುವಕರಲ್ಲಿ ಕೀಳರಿಮೆ ಬೇಡ. ನಿಮ್ಮಲ್ಲಿ ದೇವರು ಒಂದಿಲ್ಲೋಂದು ಶಕ್ತಿಯನ್ನು ನೀಡಿರುತ್ತಾರೆ. ಅದನ್ನು ಸರಿಯಾಗಿ ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಂಡು ಯಶಸ್ಸು ನಿಮ್ಮದಾಗಿಸಿಕೊಳ್ಳಿ. ರಾಷ್ಟ್ರಕ್ಕೆ ನಿಮ್ಮದೇ ಆದ ಸೇವಿ ಮಾಡಬೇಕು ಎಂದರು.

ಹಾಲಕೆರೆ ಮಠದ ಮುತ್ತಿನ ಬಸವಲಿಂಗ ಶ್ರೀಗಳು ಸಾನಿಧ್ಯ ವಹಿಸಿ, ಆಶಿರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು, ಮುಖ್ಯ ಅತಿಥಿಗಳು ಯುವ ಸಂಸತ್ ಸ್ಪರ್ಧೆಯಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಣೆ‌ ಮಾಡಿದರು.

ಕಾರ್ಯಕ್ರಮದಲ್ಲಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಜಿ. ಶ್ರೀಧರ್, ಜಿಲ್ಲಾಧಿಕಾರಿ ಶ್ರೀಮತಿ ವೈಶಾಲಿ ಎಂ.ಎಲ್,. ಶಾಲಾ ಶಿಕ್ಷಣ ಇಲಾಖೆಯ ಉಪನಿದೇಶಕ ಎಂ.ಎ. ರಡ್ಡೇರ (ಆಡಳಿತ) ಹಾಗೂ ಜಿ.ಎಲ್.ಬಾರಾಟಕ್ಕೆ (ಅಭಿವೃದ್ಧಿ), ಡಿಡಿಪಿಯು ಕೃಷ್ಣಪ್ಪ ಪಿ, ರವೀಂದ್ರನಾಥ ದೊಡ್ಡಮೇಟಿ, ಎನ್. ಆರ್. ಗೌಡರ, ವಿ.ಎಸ್. ದೊತ್ರದ್, ವೈ.ಸಿ.ಪಾಟೀಲ, ಕೊಟ್ರೇಶ್ ವಿಭೂತಿ, ನೊಡಲ್ ಅಧಿಕಾರಿ ಪ್ರಭಾಕರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net