ಸದಾಶಿವ ಕುಲಾಲ್​ಗೆ 'ಸರ್ಪಂಗಳ' ಪ್ರಶಸ್ತಿ

Sarpangala
Published on

ಪಿ.ಸುರೇಶ ಕಾಮತ್​ಗೆ ಕಲಾಸೇವಾ ಪುರಸ್ಕಾರ ಪ್ರದಾನ

ವಿಜಯವಾಣಿ ಸುದ್ದಿಜಾಲ ಉಡುಪಿ

ಜೀವವಿಮಾ ನಿಗಮದ ನಿವೃತ್ತ ಅಧಿಕಾರಿ, ಕಲಾಪೋಷಕರೂ ಆಗಿದ್ದ ಸರ್ಪಂಗಳ ಸುಬ್ರಹ್ಮಣ್ಯ ಭಟ್​ ಸ್ಮರಣಾರ್ಥ 14ನೇ ವರ್ಷದ ಪ್ರಶಸ್ತಿ ಪ್ರದಾನ ಹಾಗೂ ಸರ್ಪಂಗಳ ಯಕ್ಷೋತ್ಸವ-2025 ಸಮಾರಂಭವು ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಶನಿವಾರ (ಅ.11) ಸಂಜೆ ನೆರವೇರಿತು.

ಸುರತ್ಕಲ್​, ಹನುಮಗಿರಿ ಮುಂತಾದ ವಿವಿಧ ಯಕ್ಷಗಾನ ಮೇಳಗಳಲ್ಲಿ 54 ವರ್ಷ ತಿರುಗಾಟ ಮಾಡಿರುವ ಹಿರಿಯ ಕಲಾವಿದ ವೇಣೂರು ಸದಾಶಿವ ಕುಲಾಲ್​ ಅವರಿಗೆ ಕಲಾಪೋಷಕ ಶ್ರೀ ಸರ್ಪಂಗಳ ಸುಬ್ರಹ್ಮಣ್ಯ ಭಟ್​ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೂರು ದಶಕಗಳ ಕಾಲ ಚಕ್ರ ತಾಳ ಕಲಾವಿದರಾಗಿ ಸೇವೆ ಸಲ್ಲಿಸಿದ ಪ್ರಸಿದ್ಧ ವಾದಕ ಸುರತ್ಕಲ್​ನ ಪಿ.ಸುರೇಶ ಕಾಮತ್​ ಅವರಿಗೆ ಶ್ರೀ ಸರ್ಪಂಗಳ ಕಲಾಸೇವಾ ಪುರಸ್ಕಾರ' ನೀಡಿ ಗೌರವಿಸಲಾಯಿತು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್​, ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಸರ್ಪಂಗಳ ಯಕ್ಷೋತ್ಸವದ ಮಾರ್ಗದರ್ಶಕಿ ನಳಿನಿ ಸುಬ್ರಹ್ಮಣ್ಯ ಭಟ್​ ಮತ್ತು ಮಕ್ಕಳು ಕಾರ್ಯಕ್ರಮ ಪ್ರಾಯೋಜಿಸಿದ್ದರು. ಡಾ. ಶೈಲಜಾ ಭಟ್​, ಡಾ. ನರೇಂದ್ರ ಶೆಣೈ, ಆವಂತಿಕಾ, ಅನಿರುದ್ಧ ಉಪಸ್ಥಿತರಿದ್ದರು.

ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್​ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಭೆಯ ಬಳಿಕ ಪ್ರಸಿದ್ಧ ಕಲಾವಿದರ ಒಗ್ಗೂಡುವಿಕೆಯಲ್ಲಿ ಉಷಾ ಪರಿಣಯ ಯಕ್ಷಗಾನ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net