ವಸತಿ ನಿಲಯಕ್ಕೆ ಅಧಿಕಾರಿ ಬಿರಾದಾರ ಭೇಟಿ

ಕೆಂಭಾವಿ ಪಟ್ಟಣದ ಸರ್ಕಾರಿ ಮಹಿಳಾ ವಸತಿ ನಿಲಯಕ್ಕೆ ಸೊಮಶೇಖರ ಬಿರಾದಾರ ದಿಢೀರ್ ಭೇಟಿ ನೀಡಿ
ಕೆಂಭಾವಿ ಪಟ್ಟಣದ ಸರ್ಕಾರಿ ಮಹಿಳಾ ವಸತಿ ನಿಲಯಕ್ಕೆ ಬುಧವಾರ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸೊಮಶೇಖರ ಬಿರಾದಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಶೀಲಾ ತಳ್ಳಳ್ಳಿ, ಶಾಹೀದಾ, ಈರಮ್ಮ ಇತರರಿದ್ದರು.
ಕೆಂಭಾವಿ ಪಟ್ಟಣದ ಸರ್ಕಾರಿ ಮಹಿಳಾ ವಸತಿ ನಿಲಯಕ್ಕೆ ಬುಧವಾರ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸೊಮಶೇಖರ ಬಿರಾದಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಶೀಲಾ ತಳ್ಳಳ್ಳಿ, ಶಾಹೀದಾ, ಈರಮ್ಮ ಇತರರಿದ್ದರು.
Published on: 

ಕೆಂಭಾವಿ: ಪಟ್ಟಣದ ಸರ್ಕಾರಿ ಮಹಿಳಾ ವಸತಿ ನಿಲಯಕ್ಕೆ ಬುಧವಾರ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸೊಮಶೇಖರ ಬಿರಾದಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ವಸತಿ ನಿಲಯದ ಅವ್ಯವಸ್ಥೆ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದು ಮಹಿಳೆಯರಿಗೆ ಸಮರ್ಪಕವಾಗಿ ಕಿಟ್ ವಿತರಣೆ ಮಾಡಿಲ್ಲ ಎಂದು ಅಲ್ಲಿದ್ದ ಮಹಿಳೆಯರು ದೂರಿದರು. ಸ್ಥಳದಲ್ಲಿಯೇ ತಾಲೂಕು ಸಮಾಜ ಕಲ್ಯಾಣಽಕಾರಿಗೆ ದೂರವಾಣಿ ಮೂಲಕ ಮಾತನಾಡಿ ಕಿಟ್ ವಿತರಿಸುವಂತೆ ತಾಕೀತು ಮಾಡಿದರು. ವಿದ್ಯುತ್ ಸಮಸ್ಯೆ ಸೇರಿ ಹಲವು ಸಮಸ್ಯೆಗಳ ಬಗ್ಗೆ ಅಲ್ಲಿದ್ದ ಮಹಿಳೆಯರು ಅಧಿಕಾರಿಗಳ ಗಮನಕ್ಕೆ ತಂದರು. ವಸತಿ ನಿಲಯದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಇಲ್ಲಿರುವ ವಿದ್ಯಾರ್ಥಿನಿಯರಿಗೆ ಸರಿಯಾದ ಸಮಯಕ್ಕೆ ಮೆನು ಪ್ರಕಾರ ಪೌಷ್ಟಿಕ ಆಹಾರ ನೀಡಬೇಕು ಎಂದು ತಾಕೀತು ಮಾಡಿ, ಖುದ್ದಾಗಿ ಊಟದ ಗುಣಮಟ್ಟವನ್ನು ಪರಿಶೀಲಿಸಿದರು. ನಂತರ ವಿದ್ಯಾರ್ಥಿನಿಯರೊಂದಿಗೆ ಚರ್ಚೆ ನಡೆಸಿ ಸಮಸ್ಯೆಗಳ ಬಗ್ಗೆ ಮತ್ತು ಅಗತ್ಯ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ವಸತಿ ನಿಲಯದ ಮೇಲ್ವಿಚಾರಕಿ ಶೀಲಾ ತಳ್ಳಳ್ಳಿ, ಶಾಹೀದಾ, ಈರಮ್ಮ, ಸಂಗೀತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net