ನವರಾತ್ರಿ ಉತ್ಸವಕ್ಕೆ ಯಾದಗಿರಿ ಸಜ್ಜು

ಅಬ್ಬೆತುಮಕೂರಿನಲ್ಲಿ ಭಘಳಾಂಬಿಕಾ ದೇವಿ ಪೂಜೆ | ಗಂಗಾಧರ ಶ್ರೀಗಳ ಸಾನ್ನಿಧ್ಯದಲ್ಲಿ ಕರ‍್ಯಕ್ರಮ
ಯಾದಗಿರಿ ಸಮೀಪದ ಅಬ್ಬೆತುಮಕೂರಿನ ವಿಶ್ವಾರಾಧ್ಯರ ಮಠದಲ್ಲಿ ಭಾನುವಾರದಿಂದ ಆರಂಭಗೊಳ್ಳಲಿರುವ ಜಗನ್ಮಾಥೆ ಭಘಳಾಂಬಿಕಾ ದೇವಿ ನವರಾತ್ರಿ ಉತ್ಸವಕ್ಕೆ ಸಿದ್ಧವಾಗಿರುವ ದೇವಿ ಮಂಟಪ.
ಯಾದಗಿರಿ ಸಮೀಪದ ಅಬ್ಬೆತುಮಕೂರಿನ ವಿಶ್ವಾರಾಧ್ಯರ ಮಠದಲ್ಲಿ ಭಾನುವಾರದಿಂದ ಆರಂಭಗೊಳ್ಳಲಿರುವ ಜಗನ್ಮಾಥೆ ಭಘಳಾಂಬಿಕಾ ದೇವಿ ನವರಾತ್ರಿ ಉತ್ಸವಕ್ಕೆ ಸಿದ್ಧವಾಗಿರುವ ದೇವಿ ಮಂಟಪ.
Published on: 

ಯಾದಗಿರಿ: ನವರಾತ್ರಿಯ 10 ದಿನಗಳ ಉತ್ಸವ ಜಿಲ್ಲೆಯಾದ್ಯಂತ ನಡೆಸಲು ಭಕ್ತರು ಎಲ್ಲೆಡೆ ಸಿದ್ಧತೆ ಮಾಡಿಕೊಂಡಿದ್ದು, ಅಬ್ಬೆತುಮಕೂರಿನಲ್ಲಿ ಭಘಳಾಂಬಿಕಾ ದೇವಿ ಪೂಜೆ, ಕಕ್ಕೇರಾದಲ್ಲಿ ದೇವಿ ಪುರಾಣ, ದೋರನಹಳ್ಳಿಯಲ್ಲಿ ದಸರಾ ಉತ್ಸವ ಹಾಗೂ ಹಿಂದೂ ಸೇವಾ ಸಮಿತಿಯಿಂದ ಅದ್ದೂರಿ ದೇವಿ ಉತ್ಸವ ಆಚರಣೆಗೆ ಈಗಾಗಲೇ ಸಿದ್ಧತೆ ಪೂರ್ಣಗೊಂಡಿದೆ.

ನವರಾತ್ರಿ ಉತ್ಸವಕ್ಕೆ ಅಬ್ಬೆತಮಕೂರಿನ ವಿಶ್ವಾರಾಧ್ಯ ಮಠ ಮದುವಣಗಿತ್ತಿಯಂತೆ ಸಿಂಗಾರಗೊAಡಿದ್ದು, ಭಾನುವಾರದಿಂದ ಅ.21ರವರೆಗೆ ಪೀಠಾಽಪತಿ ಪರಮಪೂಜ್ಯ ಡಾ.ಗಂಗಾಧರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಮಠದ ಸಂಪೂರ್ಣ ಪ್ರಾಗಂಣ ಮತ್ತು ಅಷ್ಠಸಿದ್ದಿ ಕಟ್ಟೆ, ಎದುರಿನ ಜಾಗ ಎಲ್ಲವೂ ದೀಪಾಂಲಕಾರ, ಹಸಿರು ತೊರಣ, ಬೃಹತ್ ವೇದಿಕೆ ಹೂಗಳಿಂದ ಅಲಂಕಾರ ಮಾಡಲಾಗಿದೆ ಎಂದು ಮಠದ ಮಾಧ್ಯಮ ವಕ್ತಾರ ಡಾ.ಸುಭಾಷಚಂದ್ರ ಕೌಲಗಿ ಮಾಹಿತಿ ನೀಡಿದರು.

ಮಠದ ಸುತ್ತಲು ಮತ್ತು ಮುಖ್ಯ ದ್ವಾರದಲ್ಲಿ ಭಕ್ತರನ್ನು ಸ್ವಾಗತಿಸುವ ಕಮಾನು, ಬ್ಯಾನರ್‌ಗಳು ರಾರಾಜಿಸುತ್ತಿವೆ. ಬರುವ ಭಕ್ತರ ಪ್ರಸಾದ ವ್ಯವಸ್ಥೆಗಾಗಿ ಬಾಣಸಿಗರು ಅಡುಗೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ದಸರಾ ಹಬ್ಬದ ನಿಮಿತ್ತ ಜಗನ್ಮಾಥೆ ಭಘಳಾಂಬಿಕಾ ದೇವಿ ನವರಾತ್ರಿ ಪೂಜೆ, ಪಾರಾಯಣ, ಪುರಾಣ ಮತ್ತು ಮಹತ್ವದ ಪಂಚಮಂಗಳಾರುತಿ ಮತ್ತು ಉಡಿ ತುಂಬುವ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದರು.

ಪ್ರತಿನಿತ್ಯ ಬೆಳಗ್ಗೆ ವಿಶ್ವಾರಾಧ್ಯರ ಗದ್ದುಗೆ ವಿಶೇಷ ಅಭಿಷೇಕ, ಪೂಜೆ ನಡೆದು ನಂತರ 10.30ರಿಂದ ಮಧ್ಯಾಹ್ನ 12.30ರವರೆಗೆ ಮಠದ ಆವರಣದ ಅಷ್ಟಸಿದ್ದಿಕಟ್ಟೆಯ ಮೇಲಿರುವ ದೇವಿ ಮಂದಿರ ಎದುರಿಗೆ ಈ ಎಲ್ಲ ಕಾರ್ಯಕ್ರಮಗಳು ಜರುಗಲಿವೆ.

ದೇವಿ ಪಾರಾಯಣ ಮತ್ತು ಪುರಾಣದ ನಂತರ ಸಂಗೀತ ವೈಭವದೊಂದಿಗೆ ಪೀಠಾಽಪತಿ ಡಾ.ಗಂಗಾದರ ಸ್ವಾಮೀಜಿ ಅವರಿಂದ ಪಂಚಮಂಗಳಾರುತಿ ಜರುಗುವುದು. ಈ ಎಲ್ಲ ಕಾರ್ಯಕ್ರಮಗಳಲ್ಲಿ ಮಠದ ಕಿರಿಯ ಸ್ವಾಮೀಜಿ ಶಿವಶೇಖರ ವಿಶ್ವಾರಾಧ್ಯರು ಉಪಸ್ಥಿತರಿರುವರು. ಪ್ರತಿನಿತ್ಯವು ವಿವಿಧ ಊರುಗಳ ಭಕ್ತರಿಂದ ನಿತ್ಯವೂ ಧಾರ್ಮಿಕ, ಸಾಂಸ್ಕೃತಿಕ ಮತ್ತು ಜಾನಪದ ಕಾರ್ಯಕ್ರಮಗಳು ನಡೆಯಲಿವೆ.

ಜಗನ್ಮಾಥೆ ಭಘಳಾಂಬಿಕಾ ದೇವಿಯನ್ನು ವಿಶ್ವಾರಾಧ್ಯರು ಒಲಿಸಿಕೊಂಡು ಆ ಮೂಲಕ ಅಷ್ಟಸಿದ್ಧಿ ಶ್ರೀಮಠದಲ್ಲಿ ಸ್ಥಾಪಿಸಿದ್ದರು. ಕಳೆದ ಮೂರುವರೆ ದಶಕಗಳಿಂದ ಮಠದಲ್ಲಿ ಪ್ರತಿವರ್ಷ ಭಘಳಾಂಬಿಕಾ ದೇವಿ ನವರಾತ್ರಿ ಪೂಜೆ, ಪಾರಾಯಣ, ಪುರಾಣ, ಪಂಚಮಂಗಳಾರುತಿ ಮತ್ತು ಉಡಿ ತುಂಬುವ ಕಾರ್ಯಕ್ರಮಗಳು ಮಾಡಿಕೊಂಡು ಬರಲಾಗುತ್ತಿದೆ. ಈ ಮೂಲಕ ದೇವಿ ಹಾಗೂ ವಿಶ್ವಾರಾಧ್ಯರ ಅನುಗ್ರಹ ಮಠದ ಭಕ್ತರ ಮೇಲಿರಲಿ. | ಡಾ.ಗಂಗಾಧರ ಸ್ವಾಮೀಜಿ ಪೀಠಾಽಪತಿಗಳು ಶ್ರೀಕ್ಷೇತ್ರ ಅಬ್ಬೆತುಮಕೂರು

ಯಾದಗಿರಿ ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಹಿಂದೂ ಸೇವಾ ಸಮಿತಿ ಆಚರಿಸಲಿರುವ ನವರಾತ್ರಿ ಉತ್ಸವಕ್ಕೆ ಸಜ್ಜಾಗಿರುವ ಸ್ವಾಗತ ಕಮಾನ್.
ಯಾದಗಿರಿ ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಹಿಂದೂ ಸೇವಾ ಸಮಿತಿ ಆಚರಿಸಲಿರುವ ನವರಾತ್ರಿ ಉತ್ಸವಕ್ಕೆ ಸಜ್ಜಾಗಿರುವ ಸ್ವಾಗತ ಕಮಾನ್.

ಹಿಂದೂ ಸೇವಾ ಸಮಿತಿಯಿಂದ ನವರಾತ್ರಿ ಉತ್ಸವ

ಯಾದಗಿರಿ: ದಸರಾ ಹಬ್ಬದ ನವರಾತ್ರಿ ಉತ್ಸವ ನಿಮಿತ್ತ ಇಲ್ಲಿನ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಹಿಂದೂ ಸೇವಾ ಸಮಿತಿ ದೇವಿ ಮೂರ್ತಿ ಸ್ಥಾಪನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಒಂಬತ್ತು ದಿನಗಳ ಕಾಲ ದೇವಿ ಆರಾಧನೆ, ದುರ್ಗಾದೇವಿಗೆ ವಿಶೇಷ ಪೂಜೆ ನಡೆಯಲಿವೆ. ದೀಪ ಬೆಳಗಿಸುವುದು, ಹೂವಿನ ಅಲಂಕಾರ, ಭಜನೆ ಹಾಗೂ ಉಪವಾಸ ವ್ರತ ಆಚರಣೆ ಹಬ್ಬದ ಪ್ರಮುಖ ಭಾಗವಾಗಿವೆ. ದುರ್ಗಾದೇವಿ ಮಹಿಷಾಸುರನನ್ನು ಸಂಹರಿಸಿ ದುಷ್ಟಶಕ್ತಿಯ ವಿರುದ್ಧ ವಿಜಯ ಸಾಽಸಿದ ನೆನಪಿನಲ್ಲಿ ನವರಾತ್ರಿ ಆಚರಿಸಲಾಗುತ್ತದೆ. ಒಂಬತ್ತು ದಿನಗಳ ಕಾಲ ದೇವಿಯ ವಿವಿಧ ಸ್ವರೂಪಗಳನ್ನು ಆರಾಽಸುವ ಮೂಲಕ ಭಕ್ತರು ಸುಖ, ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ. ನವರಾತ್ರಿ ಉತ್ಸವದಲ್ಲಿ ಅಷ್ಟಮಿ ಹಾಗೂ ನವಮಿಗೆ ವಿಶೇಷ ಮಹತ್ವವಿದೆ. ಬಳಿಕ ವಿಜಯದ ಸಂಕೇತವಾದ ವಿಜಯದಶಮಿ ಆಚರಿಸಲಾಗುತ್ತದೆ. ಈ ಬಾರಿ ಅ.21ರಂದು ವಿಜಯದಶಮಿ ಹಬ್ಬ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net