

ಯಾದಗಿರಿ: ಅಬ್ಬೆತುಮಕೂರಿನ ವಿಶ್ವಾರಾಧ್ಯರ ಸಿದ್ಧ ಸಂಸ್ಥಾನ ಮಠದಲ್ಲಿ ದಸರಾ ಉತ್ಸವ ನಿಮಿತ್ತ ಸೋಮವಾರ ಬ್ರಹ್ಮಚಾರಿಣಿ ದೇವಿ ಪೂಜೆ, ದೇವಿ ಪಾರಾಯಣ, ಮತ್ತು ಪಂಚ ಮಹಾ ಮಂಗಳಾರತಿ ಮಠದ ಪೀಠಾಧಿಪತಿ ಪರಮ ಪೂಜ್ಯ ಡಾ.ಗಂಗಾಧರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅದ್ದೂರಿಯಾಗಿ ನಡೆಯಿತು.
ಬೆಳಗ್ಗೆ ವಿಶ್ವಾರಾಧ್ಯರ ಗದ್ದುಗೆಗೆ ಪೂಜೆ, ಅಭಿಷೇಕ ನಡೆಯಿತು. ಮಠದ ಒಡೆಯ ಡಾ.ಗಂಗಾಧರ ಶಿವಾಚಾರ್ಯರು ಕಿರಿಯ ಸ್ವಾಮಿಗಳಾದ ಶಿವಶೇಖರ ವಿಶ್ವಾರಾಧ್ಯರ ಸಮ್ಮುಖದಲ್ಲಿ ಪ್ರವಚನಕಾರರಾದ ಮಲ್ಲಿಕಾರ್ಜುನ ಶಾಸಿಗಳು ದುಷ್ಟ ಶಿಣ ಶಿಷ್ಟ ರಣ ಮಾಡುವ ದೇವಿಯ ಅನಂತ ಲೀಲೆಗಳನ್ನು ಅನೇಕ ದೃಷ್ಟಾಂತಗಳ ಸಹಿತ ವಿವರಿಸಿದರು. ನಂತರ ಶ್ವೇತಧಾರಿಗಳಾಗಿದ್ದ ಪೀಠಾಧಿಪತಿ ಡಾ.ಗಂಗಾಧರ ಮಹಾಸ್ವಾಮಿಗಳು, ಕಿರಿಯ ಸ್ವಾಮಿಗಳಿಂದ ಪಂಚ ಮಂಗಳಾರತಿ ಅತ್ಯಂತ ವೈಭವದಿಂದ ಜರುಗಿತು.
ನಂತರ ಆಶೀರ್ವಚನ ನೀಡಿದ ಅವರು, ನವರಾತ್ರಿಯ ಈ ಪರ್ವ ಕಾಲದಲ್ಲಿ ದೇವಿ ಪುರಾಣವನ್ನು ಪಾರಾಯಣ ಮಾಡುವುದರಿಂದ ಮತ್ತು ಭಕ್ತಿಯಿಂದ ಆಲಿಸುವುದರಿಂದ ದೇವಿ ಒಲುಮೆ ಉಂಟಾಗಿ ಸಂಸಾರಿಕ ಜೀವನದ ಕಷ್ಟ ಕಾರ್ಪಣ್ಯಗಳು ದೂರವಾಗಲು ಸಾಧ್ಯ ಎಂದರು.
ನಂತರ ಬೇರೆ, ಬೇರೆ ಊರುಗಳಿಂದ ಬಂದ ಭಕ್ತರಿಯಿಂದ ವಿವಿಧ ಜಾನಪದ ನೃತ್ಯಗಳು ನೆರೆದ ಭಕ್ತರ ಜನಮನ ಸೂರೆಗೊಂಡವು. ಈ ವೇಳೆ ಮಾಧ್ಯಮ ವಕ್ತಾರ ಡಾ.ಸುಭಾಷಚಂದ್ರ ಕೌಲಗಿ, ಚನ್ನಪ್ಪಗೌಡ ಮೊಸಂಬಿ, ವಿಶ್ವನಾಥ ಶಿರವಾರ, ರಾಮಶಟ್ಟಿ ಹುಗ್ಗಿ ಇತರರಿದ್ದರು.