

ಯಾದಗಿರಿ: ಅಬ್ಬೆತುಮಕೂರಿನ ವಿಶ್ವಾರಾಧ್ಯ ಸಿದ್ದಸಂಸ್ಥಾನ ಮಠದಲ್ಲಿ ದಸರಾ ಹಬ್ಬದ ನವರಾತ್ರಿ ಉತ್ಸವದಂಗವಾಗಿ ಎಂಟು ದಿನಗಳಿಂದ ನಡೆದಿರುವ ಜಗನ್ಮಾತೆ ಭಳಾಂಬಿಕೆ ದೇವಿ ನವರಾತ್ರಿ ಪೂಜೆ, ಉಡಿ ತುಂಬುವ ಮತ್ತು ಪಂಚ ಮಹಾ ಮಂಗಳಾರತಿ ಕಾರ್ಯಕ್ರಮಕ್ಕೆ ನಾಡಿನ ಮೂಲೆ ಮೂಲೆಗಳಿಂದ ಭಕ್ತಸಾಗರ ಹರಿದು ಬರುತ್ತಿದೆ.
ಪೀಠಾಧಿಪತಿ ಶ್ರೀ ಡಾ.ಗಂಗಾಧರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅಷ್ಟಸಿದ್ಧಿ ಕಟ್ಟೆಯಲ್ಲಿರುವ ಜಗನ್ಮಾತೆ ಭಳಾಂಬಿಕೆ ದೇವಿ ಮಂದಿರದ ಮುಂದಿನ ಹಸಿರು ತೋರಣದ ವೇದಿಕೆಯಲ್ಲಿ ದೇವಿ ಪಾರಾಯಣ, ಪುರಾಣ ಮತ್ತು ಪಂಚ ಮಹಾ ಮಂಗಳಾರತಿ ಮತ್ತು ಉಡಿ ತುಂಬುವ ಕಾರ್ಯಗಳು ಸಾಂಗೋಪಾಂಗವಾಗಿ ಸಾಗುತ್ತಿರುವುದನ್ನು ಕಣ್ತುಂಬಿಕೊಳ್ಳಲು ಜನರು ಬರುತ್ತಿದ್ದಾರೆ.
ಭಾನುವಾರ ಬೆಳಗ್ಗೆ ವಿಶ್ವಾರಾಧ್ಯರ ಗದ್ದುಗೆಗೆ ವಿಶೇಷ ಪೂಜೆ, ಹಿರಿಯ ಪುರಾಣಿಕ ಮಲ್ಲಿಕಾರ್ಜುನ ಶಾಸಿ ಐನಾಪುರ ಅವರಿಂದ ದೇವಿ ಪಾರಾಯಣ, ಪುರಾಣ ಜರುಗಿತು. ನಂತರ ಶ್ರೀಗಳಾದ ಡಾ.ಗಂಗಾಧರ ಸ್ವಾಮೀಜಿ ಮತ್ತು ಶಿವಶೇಖರ ವಿಶ್ವಾರಾಧ್ಯ ಸ್ವಾಮೀಜಿ ದೇವಿಗೆ ಕುಂಕುಮಾರ್ಚನೆ ನೆರವೇರಿಸಿದರು.
ಬಳಿಕ ಸಂಗೀತ ನಿನಾದ, ದೇವಿ ಹಾಡು, ಂಟಾನಾದದ ನಡುವೆ ಉಭಯ ಪೂಜ್ಯರಿಂದ ಜರುಗಿದ ಪಂಚ ಮಹಾಮಂಗಳಾರತಿ ಸಾಾತ್ ದೇವಿಯನ್ನೇ ಧರೆಗಿಳಿಸಿದಂತಹ ಸನ್ನಿವೇಶ ಸೃಷ್ಟಿಸಿತು.
ಶಾಸಕ ಶರಣಗೌಡ ಕಂದಕೂರ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ, ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೌಳೂರ ಹಳಿಮನಿ, ಡಾ.ಎಸ್.ಬಿ. ಕಾಮರಡ್ಡಿ, ಡಾ.ಪ್ರತಿಮಾ ಕಾಮರಡ್ಡಿ, ಡಾ.ಸುಭಾಷಚಂದ್ರ ಕೌಲಗಿ, ಯುವ ಉದ್ಯಮಿ ಶಿವರೆಡ್ಡಿಗೌಡ ಪಾಲಪ್ ಚಿತ್ತಾಪುರ, ಡಾ.ವೀರೇಶ ಜಾಕಾ, ಡಾ.ಶ್ವೇತಾ ಜಾಕಾ, ರಾಜು ಮಾಳಿಕೇರಿ ಬಾಂಬೆ, ಸಾರಿಗೆ ಮಂಜುನಾಥ, ಮಲ್ಲಿಕಾರ್ಜುನ ರೆಡ್ಡಿ ಇಜಾರ ಇತರರಿದ್ದರು. ನಂತರ ಅಬ್ಬೆತುಮಕೂರು ಮತ್ತು ಸುತ್ತಮುತ್ತಲಿನ ಗ್ರಾಮದ ಮಕ್ಕಳಿಂದ ನಡೆದ ವೈವಿಧ್ಯಮಯ ಸಾಂಸತಿಕ ಕಾರ್ಯಕ್ರಮಗಳು ಮನ ರಂಜಿಸಿದವು.
ನವರಾತ್ರಿ ಉತ್ಸವದಲ್ಲಿ ಸೋಮವಾರ ಮತ್ತು ಮಂಗಳವಾರವೂ ಪೂಜ್ಯರ ಸಾನ್ನಿಧ್ಯದಲ್ಲಿ ಎಲ್ಲ ಕಾರ್ಯಕ್ರಮಗಳು ಜರುಗಲಿದ್ದು, ಬುಧವಾರ ವಿಜಯದಶಮಿ ಆಚರಿಸಲಾಗುವುದು ಮಾಧ್ಯಮ ವಕ್ತಾರ ಡಾ.ಸುಭಾಷಚಂದ್ರ ಕೌಲಗಿ ತಿಳಿಸಿದ್ದಾರೆ.