

ಯಾದಗಿರಿ: ಮಳೆ ಇಲ್ಲದೆ ಬೆಳೆಗಳು ಒಣಗಿದ ಪರಿಣಾಮ ರಾಜ್ಯದ ರೈತರ ಪರಸ್ಥಿತಿ ತೀರಾ ಚಿಂತಾಜನಕವಾಗಿದ್ದು, ಕೂಡಲೇ ಕೇಂದ್ರ ಸರ್ಕಾರ ತನ್ನ ಪಾಲಿನ ಶೇ.50 ಪರಿಹಾರದ ಹಣ ಕೂಡಲೇ ಬಿಡುಗಡೆ ಮಾಡಬೇಕು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಆಗ್ರಹಿಸಿದರು.
ಗುರುವಾರ ವಿಶೇಷ ಅಧಿವೇಶನದಲ್ಲಿ ಬರ ಪರಸ್ಥಿತಿ ಬಗ್ಗೆ ವಿವರವಾಗಿ ಮಾತನಾಡಿದ ಅವರು, ಸರ್ಕಾರ ಈಗಾಗಲೇ 178 ತಾಲೂಕು ಬರಪೀಡಿತ ಎಂದು ಘೋಷಣೆ ಮಾಡಿದೆ. ಆದರೆ ಸಮಯ ಮೀರಿದರೇ ಇನ್ನೂ 50ಕ್ಕೂ ತಾಲೂಕುಗಳು ಸೇರಿಸಬೇಕಾಗುತ್ತದೆ, ಸುಮಾರು 40 ಲಕ್ಷ ಹೆಕ್ಟೇರ್ನಷ್ಟು ಬೆಳೆ ಹಾಳಾಗಿದೆ. ಇದಕ್ಕೆ 1852 ಲಕ್ಷ ಕೋಟಿ ರೂ. ಪರಿಹಾರ ನೀಡಬೇಕಿದೆ, ಕಾರಣ ಕೂಡಲೇ ಕೇಂದ್ರ ತನ್ನ ಪಾಲಿನ ಹಣ ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯದ ಬರ ಪರಿಸ್ಥಿತಿ ಬಗ್ಗೆ ವಿವರಿಸಲು ಸರ್ವ ಪಗಳ ನಿಯೋಗ ಕೇಂದ್ರಕ್ಕೆ ಕರೆದುಕೊಂಡು ಹೋಗಬೇಕು. ಇಲ್ಲಿನ ವಾಸ್ತವ್ಯ ಪರಿಸ್ಥರಿ ವಿವರಿಸಬೇಕು. 2023ರ ಬಾಕಿ ಇರುವ ವಿಮೆ ಹಣವೂ ಕೂಡಲೇ ಬಿಡುಗಡೆ ಮಾಡಬೇಕು. ಬರಗಾಲ ಘೋಷಿಸಲು ಕೇಂದ್ರ ಸರ್ಕಾರದ ಎನ್ಡಿಆರ್ಎಫ್ ನಿಯಮ ಸಡಿಲು ಮಾಡಿ ರೈತರಿಗೆ ತುರ್ತು ಅಗತ್ಯ ನೆರವು ನೀಡಬೇಕು ಎಂದರು.
ಕೇಂದ್ರ ತಂಡ ಪರಿಶೀಲಿನೆ ಹೋದಾಗ ಅಲ್ಲಿ ವಾಸ್ತವ್ಯ ಸ್ಥಿತಿ ಅಧ್ಯಯನ ಮಾಡಿ ಪರಿಹಾರ ನೀಡಬೇಕು. ಇದರಲ್ಲಿ ರೈತರಿಗೆ ಅನ್ಯಾಯವಾಗಬಾರದು. ಕುಡಿಯುವ ನೀರಿನ ಸೌಲಭ್ಯಕ್ಕಾಗಿ ರಾಜ್ಯ ಸರ್ಕಾರವು ಎಲ್ಲ ಕ್ಷೇತ್ರಗಳಿಗೆ ತಲಾ ಒಂದು ಕೋಟಿ ರೂ. ಬಿಡುಗಡೆ ಮಾಡಿದೆ. ಆ ಹಣದ ಜತೆಗೆ ಹೆಚ್ಚಿನ ಹಣ ಕೊಡಬೇಕು. ನಗರಸಭೆಗಳಲ್ಲಿ ಅನುದಾನ ಕೊರತೆ ಇದೆ. ಕಾರಣ ಕೊಳವೆಬಾವಿ ಕೊರೆಸಲು ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂದರು. ರೈತರಿಗೆ, ಮಹಿಳೆಯರಿಗೆ ಹೈನುಗಾರಿಕೆ ಮಾಡಲು ಕೂಡ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಪದ ಆರೋಪಕ್ಕೆ ಚಾಟಿ ಬೀಸಿದ ಶಾಸಕ ತುನ್ನೂರ, 2014ರಲ್ಲಿ ಶೂಟ್ಬೂಟ್ ಹಾಕಿಕೊಂಡವರೆ ಜೀರೋ ಅಕೌಂಟ್ ಮಾಡಿಸಿ, ಅದಕ್ಕೆ ಪ್ರತಿ ಅಕೌಂಟ್ಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ದರು. ಅವರಂತೆ ನಮ್ಮ ಪಕ್ಷ ಮತ್ತು ಸರ್ಕಾರ ಸುಳ್ಳು ಭರವಸೆ ನೀಡಿಲ್ಲ ಎಂದು ಶಾಸಕ ತುನ್ನೂರ ಜರಿದರು.