ವಿದ್ಯಾರ್ಥಿಗಳು ಗುಣ ಗ್ರಾಹಿಯಾಗಿರಬೇಕು

ಯಾದಗಿರಿ ಸರ್ಕಾರಿ ಪದವಿ ಮಹಾವಿದ್ಯಾಲಯಲ್ಲಿ ಶುಕ್ರವಾರ ಆಯೋಜಸಿದ್ದ ಪ್ರಸಕ್ತ ಸಾಲಿನ ವಿವಿಧ ಚಟುವಟಿಕೆಯನ್ನು ನಿವೃತ್ತ ಪ್ರಾಧ್ಯಾಪಕ ವೆಂಕಣ್ಣ ಡೊಣ್ಣೆಗೌಡ್ರು ಉದ್ಘಾಟಿಸಿದರು. ಪ್ರಾಧ್ಯಾಪಕಿ ಡಾ.ಜ್ಯೋತಿಲತಾ ತಡಿಬಿಡಿಮಠ, ಪ್ರಾಚಾರ್ಯ ಡಾ.ಸುಭಾಷಚಂದ್ರ ಕೌಲಗಿ, ಪ್ರಹ್ಲಾದ ಜೋಷಿ, ಡಾ.ಗುರುಲಿಂಗಪ್ಪ, ಕವಿತಾ.ಕೆ, ಪಂಪಾಪತಿರೆಡ್ಡಿ ಪಾಟೀಲ್​, ಡಾ.ಬಸವಪ್ರಸಾದ, ಡಾ.ಉಮೇಶ ತೇಜಪ್ಪ, ಡಾ.ಚಂದ್ರಶೇಖರ ಕೊಂಕಲ್​, ಡಾ.ಜಯಶ್ರೀಬಿ.ಶೆಟ್ಟಿ ಇತರರಿದ್ದರು.
ಯಾದಗಿರಿ ಸರ್ಕಾರಿ ಪದವಿ ಮಹಾವಿದ್ಯಾಲಯಲ್ಲಿ ಶುಕ್ರವಾರ ಆಯೋಜಸಿದ್ದ ಪ್ರಸಕ್ತ ಸಾಲಿನ ವಿವಿಧ ಚಟುವಟಿಕೆಯನ್ನು ನಿವೃತ್ತ ಪ್ರಾಧ್ಯಾಪಕ ವೆಂಕಣ್ಣ ಡೊಣ್ಣೆಗೌಡ್ರು ಉದ್ಘಾಟಿಸಿದರು. ಪ್ರಾಧ್ಯಾಪಕಿ ಡಾ.ಜ್ಯೋತಿಲತಾ ತಡಿಬಿಡಿಮಠ, ಪ್ರಾಚಾರ್ಯ ಡಾ.ಸುಭಾಷಚಂದ್ರ ಕೌಲಗಿ, ಪ್ರಹ್ಲಾದ ಜೋಷಿ, ಡಾ.ಗುರುಲಿಂಗಪ್ಪ, ಕವಿತಾ.ಕೆ, ಪಂಪಾಪತಿರೆಡ್ಡಿ ಪಾಟೀಲ್​, ಡಾ.ಬಸವಪ್ರಸಾದ, ಡಾ.ಉಮೇಶ ತೇಜಪ್ಪ, ಡಾ.ಚಂದ್ರಶೇಖರ ಕೊಂಕಲ್​, ಡಾ.ಜಯಶ್ರೀಬಿ.ಶೆಟ್ಟಿ ಇತರರಿದ್ದರು.
Published on: 

ಯಾದಗಿರಿ: ವ್ಯಾಸಂಗ ನಿರತ ವಿದ್ಯಾರ್ಥಿಗಳು ಉತ್ತಮ ಮೌಲ್ಯ ಅಳವಡಿಸಿಕೊಂಡು, ಒಳ್ಳೆಯ ಗುಣ ಗ್ರಾಹಿಯಾಗಿರಬೇಕು ಎಂದು ನಿವೃತ್ತ ಪ್ರಾಧ್ಯಾಪಕ ವೆಂಕಣ್ಣ ಡೊಣ್ಣೆಗೌಡ್ರು ಹೇಳಿದರು.

ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಪ್ರಸಕ್ತ ಸಾಲಿನ ವಿವಿಧ ಚಟುವಟಿಕೆಗಳ ಉದ್ಘಾಟನೆ ಮತ್ತು ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಕಿರಿಯ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಸ್ವಾಗತ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿ ಎಂದರೆ ವಿದ್ಯೆಯನ್ನು ಅರ್ಥ ಮಾಡಿಕೊಳ್ಳುವವನು ಎಂದರ್ಥ. ಅಧ್ಯಾಪಕರು ಹೇಳುವ ಪಾಠ ವಿದ್ಯಾರ್ಥಿಗಳು ಚೆನ್ನಾಗಿ ತಿಳಿದುಕೊಳ್ಳಬೇಕು. ವಿದ್ಯೆಯನ್ನು ಅರಿತುಕೊಳ್ಳಬೇಕಾದರೆ ಉತ್ತಮ ಗುಣಗ್ರಾಹಿ ಆಗಿದ್ದಾಗ ಮಾತ್ರ ಇದು ಸಾಧ್ಯ ಎಂದರು.

ತಂದೆ, ತಾಯಿಗಳು ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡು ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಕಳಹಿಸುತ್ತಾರೆ. ಅವರ ಕನಸುಗಳನ್ನು ನನಸುಗೊಳಿಸಬೇಕಾದರೆ ಶ್ರದ್ಧೆ ಮತ್ತು ನಿಷ್ಠೆಯಿಂದ ಅಧ್ಯಯನ ಮಾಡಬೇಕು. ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನವಹಿಸಿ ಗುರಿ ಸಾಧಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.'

ಗುರುಮಠಕಲ್​ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕಿ ಡಾ.ಜ್ಯೋತಿಲತಾ ತಡಿಬಿಡಿಮಠ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಪ್ರಾಚಾರ್ಯ ಡಾ.ಸುಭಾಶಚಂದ್ರ ಕೌಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಸೆಣಸಾಟ ತೀವ್ರವಾಗಿದೆ. ರಾಜ್ಯಮಟ್ಟದಲ್ಲಿ ನಮ್ಮ ಭಾಗದ ವಿದ್ಯಾರ್ಥಿಗಳು ಸ್ಪರ್ಧೆಯನ್ನು ಎದುರಿಸುವಲ್ಲಿ ಬಹಳ ವಿಫಲರಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದರು.

ಕಲ್ಯಾಣ ಕರ್ನಾಟಕ ಹಿಂದುಳಿದ ಭಾಗವೆಂಬ ಹಣೆಪಟ್ಟಿಯನ್ನು ಅಳಿಸಿ ಹಾಕಬೇಕಾದ ಜವಾಬ್ದಾರಿ ಇಂದಿನ ವಿದ್ಯಾರ್ಥಿಗಳ ಮೇಲಿದೆ. ಇದು ಸಾಧ್ಯವಾಗಬೇಕಾದರೆ ವಿದ್ಯಾರ್ಥಿಗಳೆಲ್ಲ ಚೆನ್ನಾಗಿ ಓದಿ, ಉತ್ತಮ ಫಲಿತಾಂಶ ಪಡೆದು, ಒಳ್ಳೆಯ ಉದ್ಯೋಗ ಪಡೆದಾಗ ಮಾತ್ರ ನಿಜವಾಗಲೂ ಕಲ್ಯಾಣವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪ್ರಹ್ಲಾದ ಜೋಷಿ, ಡಾ.ಗುರುಲಿಂಗಪ್ಪ, ಕವಿತಾ.ಕೆ, ಪಂಪಾಪತಿರೆಡ್ಡಿ ಪಾಟೀಲ್​, ಡಾ.ಬಸವಪ್ರಸಾದ, ಡಾ.ಉಮೇಶ ತೇಜಪ್ಪ, ಡಾ.ಚಂದ್ರಶೇಖರ ಕೊಂಕಲ್​, ಡಾ.ಜಯಶ್ರೀಬಿ.ಶೆಟ್ಟಿ, ಶರಣಪ್ಪ, ಡಾ.ಭಾಗ್ಯಜ್ಯೋತಿ, ಪಂತ್ರಾಕಿತ ವ್ಯವಸ್ಥಾಪಕಿ ಈರಮ್ಮ ಭಾವಿಕಟ್ಟಿ , ಗ್ರಂಥಪಾಲಕಿ ಸುಜಾತಾ ಇತರರಿದ್ದರು. ಭವಾನಿ ಪ್ರಾರ್ಥಿಸಿದರು. ಡಾ.ಶಿವಪ್ಪ ಮುದ್ನಾಳ ಸ್ವಾಗತಿಸಿದರು. ಡಾ.ಜಗದೀಶ ನೂಲಿನವರ್​ ನಿರೂಪಿಸಿದರು. ಸಾಂಸ್ಕೃತಿಕ ಸಂಚಾಲಕ ನಾಗಪ್ಪ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net