ಮಠದಿಂದ ಅಧ್ಯಾತ್ಮ ಬಿತ್ತುವ ಕಾರ್ಯ

Untitled design(11)
Published on

ಸಿಂಧನೂರು: ತಾಲೂಕಿನ ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಮುಖ್ಯ ರಸ್ತೆಯ ಶ್ರೀ ಕರ್ತೃ ಸಿದ್ಧಲಿಂಗೇಶ್ವರ ಮಹಾದ್ವಾರ ನಿರ್ಮಾಣಕ್ಕೆ ಕನಕಗಿರಿ ಸುವರ್ಣಗಿರಿ ವಿರಕ್ತಮಠದ ಡಾ.ಚನ್ನಮಲ್ಲ ಸ್ವಾಮೀಜಿ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.

ಶ್ರೀಮಠವು ಈ ಭಾಗದಲ್ಲಿ ಆಧ್ಯಾತ್ಮವನ್ನು ಬಿತ್ತಿದೆ. ಸಿದ್ಧಲಿಂಗೇಶ್ವರ ಸ್ವಾಮಿಗಳು ಓಡಾಡಿದ ಪುಣ್ಯಭೂಮಿ ಇದಾಗಿದೆ. ಮಹಾಲಿಂಗಸ್ವಾಮೀಜಿಗಳಿಂದ ಮಠವು ಏಳ್ಗೆ ಕಾಣುವ ಜತೆಗೆ, ಅಧ್ಯಾತ್ಮವನ್ನು ಜನರಲ್ಲಿ ಬಿತ್ತಿ, ಉತ್ತಮ ಜೀವನಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರ ಸಮಾಜಮುಖಿ ಕಾರ್ಯಗಳು ಎಲ್ಲರಿಗೂ ಸ್ಫೂರ್ತಿಯಾಗಿವೆ ಎಂದು ಡಾ.ಚನ್ನಮಲ್ಲ ಸ್ವಾಮೀಜಿ ಹೇಳಿದರು.

ಮಾನ್ವಿ ಕಲ್ಮಠದ ವಿರೂಪಾಕ್ಷ ಪಂಡಿತರಾಧ್ಯ ಸ್ವಾಮೀಜಿ, ಚೀಕಲಪರ್ವಿ ಸದಾಶಿವ ಸ್ವಾಮೀಜಿ, ಅಡವಿ ಅಮರೇಶ್ವರ ತೋಂಟದಾರ್ಯಸ್ವಾಮೀಜಿ, ಕಲ್ಲೂರು ಅಡವೇಶ್ವರಮಠದ ಶಂಭುಲಿಂಗೇಶ್ವರ ಸ್ವಾಮೀಜಿ,ಅಂಕುಶದೊಡ್ಡಿ ವಾಮದೇವ ಶಿವಾಚಾರ್ಯ, ಸಿರಗುಪ್ಪ ಬಸವಾಶ್ರಮದ ಬಸವ ಭೂಷಣ ಸ್ವಾಮೀಜಿ, ಶರಣಬಸವ ದೇವರು ಅರಳಹಳ್ಳಿ, ಪ್ರಮುಖರಾದ ವೀರನಗೌಡ ಬಾದರ್ಲಿ, ಚಂದ್ರಭೂಪಾಲ ನಾಡಗೌಡ ಹಾಗೂ ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net