ಅಂಬೇಡ್ಕರ್​ ಕಾನೂನಿದೆ, ನಿಜಾಮನ ಆಳ್ವಿಕೆಯಲ್ಲ: ಕಲಬುರಗಿಯಲ್ಲಿ ಘರ್ಜಿಸಿದ ಶ್ರೀಕಾಂತ ಶೆಟ್ಟಿ

ಹಿಂದೂ ಮಹಾಗಣಪತಿ ಬಳಿ ಭಾಷಣಕ್ಕೆ ಹೈಕೋರ್ಟ್​ ಅನುಮತಿ
ಕಲಬುರಗಿಯಲ್ಲಿ ಹಿಂದೂ ಮಹಾಗಣಪತಿಯಲ್ಲಿ  ಶ್ರೀಕಾಂತ ಶೆಟ್ಟಿ ದಿಕ್ಸೂಚಿ ಭಾಷಣ
ಕಲಬುರಗಿಯಲ್ಲಿ ಹಿಂದೂ ಮಹಾಗಣಪತಿಯಲ್ಲಿ ಶ್ರೀಕಾಂತ ಶೆಟ್ಟಿ ದಿಕ್ಸೂಚಿ ಭಾಷಣ
Published on: 

ಕಲಬುರಗಿ: ಕಲ್ಯಾಣ ಕರ್ನಾಟಕವನ್ನು ಶತಮಾನಗಳ ಕಾಲ ನಿಜಾಮರು ಆಳಿದರು. ಆಗ ಹಿಂದೂಗಳನ್ನು ಧಮನ ಮಾಡಲಾಯಿತು. 1923ರಲ್ಲಿ ನಿಜಾಮನು ಐದಕ್ಕಿಂತ ಹೆಚ್ಚು ಜನ ಸೇರಬಾರದು, ಗಂಟೆ ಹೊರಗೆ ಕೇಳಬಾರದು, ಭಜನೆ ಬೇಡ, ನಿಜಾಮನ ವಿರುದ್ಧ ಮಾತಾಡಬಾರದು ಎಂದು ಆದೇಶ ಹೊರಡಿಸಿದ್ದ. ಸುದೈವಶಾತ ಪಟೇಲರು ಸಾರ್ವಭೌಮತ್ವಕ್ಕೆ ತಂದರು. ನಂತರ ದೇಶದಲ್ಲಿ ಬಾಬಾ ಸಾಹೇಬ್​ ಡಾ.ಬಿ.ಆರ್​.ಅಂಬೇಡ್ಕರ್​ ಕಾನೂನು ಬಂದಿದ್ದು, ಯಾರೋ ಒಬ್ಬನ, ನಿಜಾಮನ ಆಳ್ವಿಕೆ ನಡೆಯುತ್ತಿಲ್ಲ, ಮಾತನಾಡಲು ಕೋರ್ಟ್​ ಅವಕಾಶ ನೀಡಿದೆ ಎಂದು ಹಿಂದು ಜಾಗರಣ ವೇದಿಕೆ ಮುಖಂಡ ಶ್ರೀಕಾಂತ ಶೆಟ್ಟಿ ಹೇಳಿದರು.

ನಗರದ ಐತಿಹಾಸಿಕ ಕೋಟೆ ಎದುರು ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ಸಮಿತಿಯಲ್ಲಿ ಗುರುವಾರ ಏರ್ಪಡಿಸಿದ್ದ "ಕಲ್ಯಾಣ ಕರ್ನಾಟಕ ವಿಮೋಚನೆ' ಕುರಿತ ವಿಶೇಷ ಉಪನ್ಯಾಸ ನೀಡಿ, ಕಲ್ಯಾಣ ಕರ್ನಾಟಕವನ್ನು ಶತಮಾನಗಳ ಕಾಲ ಆಳಿದ ನಿಜಾಮನ ರಜಾಕಾರರ ರಕ್ಕಸ ಪಡೆಯೂ ಹಿಂದೂಗಳನ್ನು ಬರ್ಬರವಾಗಿ ದೌರ್ಜನ್ಯ ನಡೆಸಿತು. ಅದರ ವಿರುದ್ಧ ಎಲ್ಲರೂ ಹೋರಾಟ, ಪ್ರತಿರೋಧ ಒಡ್ಡಿದರು. ಸರ್ದಾರ್​ ವಲ್ಲಭಬಾಯಿ ಪಟೇಲರ ದಿಟ್ಟತನ, ಪ್ರಥಮ ಕಾನೂನು ಸಚಿವ ಡಾ.ಬಿ.ಆರ್​.ಅಂಬೇಡ್ಕರ್​ ಪ್ರಯತ್ನದ ಲದಿಂದ ಆಪರೇಷನ್​ ಪೋಲೋ ಕಾರ್ಯಾಚರಣೆ ನಡೆಸಿದ್ದರಿಂದ ಸ್ವಾತಂತ್ರ$್ಯ ದೊರೆಯಿತು ಎಂದರು.

ದೇಶದಲ್ಲಿ ಹಿಂದೂ ಸಮಾಜದಿಂದ ದಲಿತರನ್ನು ಪ್ರತ್ಯೇಕಿಸುವ ಹುನ್ನಾರ ನಡೆದಿದೆ. ಅಂಬೇಡ್ಕರ್​, ಸಾವರ್ಕರ್​, ಆರ್ಯ ಸಮಾಜ ಸಮಾನತೆ ತರಲು ಶ್ರಮಿಸಿದರು. ಮಡಿವಂತರ ಮನಸ್ಸಿನಲ್ಲಿರುವ ಅಸ್ಪೃಶ್ಯತೆ ಹೋದರೆ ಹಿಂದೂಗಳನ್ನು ಎದುರಿಸುವ ಧೈರ್ಯ ಯಾರೊಬ್ಬರೂ ಮಾಡಲ್ಲ ಎಂದು ಹೇಳಿದರು.

ಪಾಕಿಸ್ತಾನದ ಪ್ರಥಮ ಕಾನೂನು ಸಚಿವ ದಲಿತರಾಗಿದ್ದ ಜೋಗೇಂದ್ರನಾಥ ಮಂಡಲ್​ರನ್ನು ಅತ್ಯಂತ ನಿಷಷ್ಟವಾಗಿ ನಡೆಸಿಕೊಳ್ಳಲಾಯಿತು. ಪಾಕಿಸ್ತಾನದಲ್ಲಿ ದಲಿತರ ದೌರ್ಜನ್ಯ ಸಹಿಸದೆ ಕೊನೇ ದಿನದಲ್ಲಿ ಭಾರತಕ್ಕೆ ಬಂದು ಅಂತಿಮ ಜೀವನ ನಿಷಷ್ಟವಾಗಿ ಕಳೆದರು ಎಂದರು.

ಮಾಜಿ ಸಂಸದ ಡಾ.ಉಮೇಶ್​ ಜಾಧವ್​, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್​, ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ಶ್ರೀಮಂತ ನವಲದಿ, ಪ್ರಮುಖರಾದ ಉಮೇಶ ಪಾಟೀಲ್​, ಡಾ.ಅಂಬಾರಾಯ ಅಷ್ಟಗಿ, ಮಲ್ಲಿಕಾರ್ಜುನ ಗಂಗಾ, ಪ್ರಶಾಂತ್​ ಗುಡ್ಡಾ, ಬಸವರಾಜ ಬೆಣ್ಣೂರಕರ್​, ವೀರೇಶ ಬಿರಾದಾರ, ಅಶ್ವಿನಕುಮಾರ, ಪ್ರಸಾದ ಜೋಶಿ, ಉಲ್ಲಾಸ ಕುಲ್ಕರ್ಣಿ, ಸಂತೋಷ ಗುತ್ತೇದಾರ ಇತರರಿದ್ದರು.

ಶ್ರೀಶೈಲ ಮೂಲಗೆ ನಿರೂಪಣೆ ಮಾಡಿದರು. ಶಿವರಾಜ್​ ಸಂಗೋಳಗಿ ಸ್ವಾಗತಿಸಿದರು. ಅನೀಲ ಸಿರನೂರಕರ್​ ವಂದಿಸಿದರು.

ಹೈಕೋರ್ಟ್​ ಅನುಮತಿ, ಪೊಲೀಸ್​ ಪಹರೆ

ಶ್ರೀಕಾಂತ ಶೆಟ್ಟಿ ಕಲಬುರಗಿ ಪ್ರವೇಶ ನಿಷೇಧಿಸಿ ನಗರ ಪೊಲೀಸರು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಕಲಬುರಗಿ ಹೈಕೋರ್ಟ್​ ಪೀಠದ ಮೊರೆ ಹೋಗಿದ್ದರಿಂದ ಗುರುವಾರ ಮಧ್ಯಾಹ್ನ ವಿಚಾರಣೆ ನಡೆಸಿದ ಪೀಠವೂ ವಿವಾದಾತ್ಮಕ ಭಾಷಣ ಮಾಡಬಾರದು, ರಾತ್ರಿ 8.45ರವರೆಗೆ ಕಾರ್ಯಕ್ರಮ ಮುಗಿಸಬೇಕು ಸೇರಿ ವಿವಿಧ ಕಟ್ಟಲೆಗಳನ್ನು ವಿಧಿಸಿ, ಜಿಲ್ಲೆಯ ಪ್ರವೇಶಕ್ಕೆ ಅವಕಾಶ ನೀಡಿತ್ತು. ಅದರಂತೆ ಶ್ರೀಕಾಂತ ಶೆಟ್ಟಿ ಹಿಂದೂ ಗಣಪತಿ ವೇದಿಕೆಯಲ್ಲಿ ಮಾತನಾಡಿದರು. ಈ ವೇಳೆ ಡಿಸಿಪಿ ಶಾಲೂ ನೇತೃತ್ವದಲ್ಲಿ ಎಸಿಪಿ, ಪಿಐಗಳು, ಪೊಲೀಸ್​ ಸಿಬ್ಬಂದಿಯ ಬಿಗಿ ಬಂದೋಬಸ್ತ್​ ಏರ್ಪಡಿಸಿ, ಭಾಷಣದ ಮೇಲೆ ತೀವ್ರ ಪೊಲೀಸ್​ ನಿಗಾ ಇಡಲಾಯಿತು.

ಹಿಂದೂಗಳನ್ನು ಬಲಿಷ್ಠಗೊಳಿಸಿದ್ದು ಡಾ.ಬಿ.ಆರ್​.ಅಂಬೇಡ್ಕರ್​. ಕೆಸ್ತ, ಮುಸಲ್ಮಾನ, ಯಯೂದಿ ಸೇರಿ ಅನ್ಯರಾಷ್ಟ್ರದವರೆಲ್ಲ ಹೊರತುಪಡಿಸಿ ಭಾರತದಲ್ಲಿ ಇರುವವರೆಲ್ಲರೂ ಹಿಂದೂಗಳೇ ಎಂದು ಅಂಬೇಡ್ಕರ್​ ಹೇಳಿದ್ದರು. ಪ್ರತಿ ಭಾರತೀಯನ ಹೃದಯದಲ್ಲಿ ಅಂಬೇಡ್ಕರ್​ ಇದ್ದಾರೆ. ಸಂವಿಧಾನ, ದೇಶ ಉಳಿಯಬೇಕೆಂದರೆ ಹಿಂದೂಗಳು ಬಲಿಷ್ಠವಾಗಿ ಇರಬೇಕು.

ಶ್ರೀಕಾಂತ ಶೆಟ್ಟಿ, ಹಿಂದೂ ಜಾಗರಣ ವೇದಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net