ಸಾರ್ವಜನಿಕರ ಸಹಕಾರದಿಂದ ಅಭಿವೃದ್ಧಿ

ಶಾಸಕ ರಾಜುಗೌಡ ಪಾಟೀಲ ಹೇಳಿಕೆ ವಿವಿಧ ಕಾಮಗಾರಿಗಳಿಗೆ ಚಾಲನೆ
ದೇವರಹಿಪ್ಪರಗಿ: ಸರ್ಕಾರ ಒದಗಿಸಿರುವ ಅನುದಾನ ಉಪಯೋಗಿಸಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿ, ಸಾರ್ವಜನಿಕರ ಸಹಕಾರದಿಂದ ಅಭಿವೃದ್ಧಿ ಮಾಡುತ್ತಿದ್ದೇನೆ ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಅಂದಾಜು 150 ಲಕ್ಷ ರೂ., ಮೊತ್ತದ ದೇವರಹಿಪ್ಪರಗಿ ಕ್ರಾಸ್‌ನಿಂದ ರಾಷ್ಟ್ರೀಯ ಹೆದ್ದಾರಿ-218ರ ಮೂಲಕ ಹರನಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ರಸ್ತೆ ಸುಧಾರಣೆಯಿಂದ ದೇವರಹಿಪ್ಪರಗಿ ಹಾಗೂ ಹರನಾಳ ಸೇರಿ ಸುತ್ತಮುತ್ತಲಿನ ಗ್ರಾಮಗಳ ಜನರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.

ಪಟ್ಟಣದ ಮಲ್ಲಯ್ಯ ದೇವರ ದೇವಸ್ಥಾನದ ಹತ್ತಿರದ ಹಳ್ಳಕ್ಕೆ ಬ್ರಿಡ್ಜ್ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗೆ 45 ಲಕ್ಷ ರೂ. ಅಂದಾಜು ವೆಚ್ಚ ನಿಗದಿಪಡಿಸಲಾಗಿದ್ದು, ಮಳೆಗಾಲದಲ್ಲಿ ನೀರು ಹರಿಯುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಂಟಾಗುವ ತೊಂದರೆಗಳನ್ನು ಕಡಿಮೆ ಮಾಡಬಹುದಾಗಿದೆ. 

2024-25ನೇ ಸಾಲಿನ ಮುಖ್ಯಮಂತ್ರಿಯವರ ಅಭಿವೃದ್ಧಿ ಯೋಜನೆಯಡಿ ಪಟ್ಟಣದ ಶಾದಿಮಹಲ್ ಬಳಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ 10 ಲಕ್ಷ ರೂ. ಹಾಗೂ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ 10 ಲಕ್ಷ ರೂ. ಅನುದಾನ ನಿಗದಿಪಡಿಸಿಲಾಗಿದ್ದು, ಪಟ್ಟಣ ಹಾಗೂ ಗ್ರಾಮೀಣ ಭಾಗಗಳ ಮೂಲಸೌಕರ್ಯ ಅಭಿವೃದ್ಧಿಗೆ ಇದರಿಂದ ಮತ್ತಷ್ಟು ವೇಗ ಸಿಗುವ ನಿರೀಕ್ಷೆಯಿದೆ. ಮತಕ್ಷೇತ್ರದ ಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಬಸಪ್ಪ ದೇವಣಗಾವ, ರಮೇಶ ಮಸಬಿನಾಳ, ಮುಖ್ಯಾಧಿಕಾರಿ ಅಪ್ರೋಜ್ ಅಮ್ಮದ ಪಟೇಲ್, ಗುತ್ತಿಗೆದಾರ ರಮೇಶ ಕವಲಗಿ, ಯುಕೆಪಿ ಸಹಾಯಕ ಕಾರ್ಯಪಾಲಕ ಅಭಿಯಂತ ವಿಶ್ವನಾಥ ಚವಾಣ್, ಕಾಸುಗೌಡ ಜಲಕತ್ತಿ, ಚನ್ನವೀರಪ್ಪ ಕುದುರಿ, ಅಜೀಜ್ ಯಲಗಾರ, ಪ್ರಕಾಶ್ ಮಲ್ಲಾರಿ, ವಿನೋದಗೌಡ ಪಾಟೀಲ, ಲಾಲಸಾಬ ಮಳಖೇಡ, ಆಬಿದ್ ಹಳ್ಳಿ, ಹಾಜಿಲಾಲ್ ಕರ್ನಾಚಿ, ಎ.ಡಿ. ಮುಲ್ಲಾ, ಉಸ್ಮಾನಸಾಬ ಹಚ್ಯಾಳ, ಭಾಷಾಸಾಬ ಹಳ್ಳಿ ಇತರರಿದ್ದರು.
ದೇವರಹಿಪ್ಪರಗಿ ಪಟ್ಟಣದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ರಾಜುಗೌಡ ಪಾಟೀಲ ಚಾಲನೆ ನೀಡಿದರು. ಬಸಪ್ಪ ದೇವಣಗಾವ, ರಮೇಶ ಮಸಬಿನಾಳ, ಅಪ್ರೋಜ್ ಅಮ್ಮದ ಪಟೇಲ್, ರಮೇಶ ಕವಲಗಿ ಇತರರಿದ್ದರು.
Published on: 

ದೇವರಹಿಪ್ಪರಗಿ: ಸರ್ಕಾರ ಒದಗಿಸಿರುವ ಅನುದಾನ ಉಪಯೋಗಿಸಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿ, ಸಾರ್ವಜನಿಕರ ಸಹಕಾರದಿಂದ ಅಭಿವೃದ್ಧಿ ಮಾಡುತ್ತಿದ್ದೇನೆ ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಅಂದಾಜು 150 ಲಕ್ಷ ರೂ., ಮೊತ್ತದ ದೇವರಹಿಪ್ಪರಗಿ ಕ್ರಾಸ್‌ನಿಂದ ರಾಷ್ಟ್ರೀಯ ಹೆದ್ದಾರಿ-218ರ ಮೂಲಕ ಹರನಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ರಸ್ತೆ ಸುಧಾರಣೆಯಿಂದ ದೇವರಹಿಪ್ಪರಗಿ ಹಾಗೂ ಹರನಾಳ ಸೇರಿ ಸುತ್ತಮುತ್ತಲಿನ ಗ್ರಾಮಗಳ ಜನರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.

ಪಟ್ಟಣದ ಮಲ್ಲಯ್ಯ ದೇವರ ದೇವಸ್ಥಾನದ ಹತ್ತಿರದ ಹಳ್ಳಕ್ಕೆ ಬ್ರಿಡ್ಜ್ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗೆ 45 ಲಕ್ಷ ರೂ. ಅಂದಾಜು ವೆಚ್ಚ ನಿಗದಿಪಡಿಸಲಾಗಿದ್ದು, ಮಳೆಗಾಲದಲ್ಲಿ ನೀರು ಹರಿಯುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಂಟಾಗುವ ತೊಂದರೆಗಳನ್ನು ಕಡಿಮೆ ಮಾಡಬಹುದಾಗಿದೆ.

2024-25ನೇ ಸಾಲಿನ ಮುಖ್ಯಮಂತ್ರಿಯವರ ಅಭಿವೃದ್ಧಿ ಯೋಜನೆಯಡಿ ಪಟ್ಟಣದ ಶಾದಿಮಹಲ್ ಬಳಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ 10 ಲಕ್ಷ ರೂ. ಹಾಗೂ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ 10 ಲಕ್ಷ ರೂ. ಅನುದಾನ ನಿಗದಿಪಡಿಸಿಲಾಗಿದ್ದು, ಪಟ್ಟಣ ಹಾಗೂ ಗ್ರಾಮೀಣ ಭಾಗಗಳ ಮೂಲಸೌಕರ್ಯ ಅಭಿವೃದ್ಧಿಗೆ ಇದರಿಂದ ಮತ್ತಷ್ಟು ವೇಗ ಸಿಗುವ ನಿರೀಕ್ಷೆಯಿದೆ. ಮತಕ್ಷೇತ್ರದ ಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಬಸಪ್ಪ ದೇವಣಗಾವ, ರಮೇಶ ಮಸಬಿನಾಳ, ಮುಖ್ಯಾಧಿಕಾರಿ ಅಪ್ರೋಜ್ ಅಮ್ಮದ ಪಟೇಲ್, ಗುತ್ತಿಗೆದಾರ ರಮೇಶ ಕವಲಗಿ, ಯುಕೆಪಿ ಸಹಾಯಕ ಕಾರ್ಯಪಾಲಕ ಅಭಿಯಂತ ವಿಶ್ವನಾಥ ಚವಾಣ್, ಕಾಸುಗೌಡ ಜಲಕತ್ತಿ, ಚನ್ನವೀರಪ್ಪ ಕುದುರಿ, ಅಜೀಜ್ ಯಲಗಾರ, ಪ್ರಕಾಶ್ ಮಲ್ಲಾರಿ, ವಿನೋದಗೌಡ ಪಾಟೀಲ, ಲಾಲಸಾಬ ಮಳಖೇಡ, ಆಬಿದ್ ಹಳ್ಳಿ, ಹಾಜಿಲಾಲ್ ಕರ್ನಾಚಿ, ಎ.ಡಿ. ಮುಲ್ಲಾ, ಉಸ್ಮಾನಸಾಬ ಹಚ್ಯಾಳ, ಭಾಷಾಸಾಬ ಹಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net