ರೈತರ ಸಂಪೂರ್ಣ ಸಾಲ ಮನ್ನಾಮಾಡಿ

ಮಾದರಿಯಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದು ಹಾಗೂ ವಿವಿಧ ರೈತಪರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಬಿಜೆಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು ಒಣಗಿದ ಪೈರು ಮತ್ತು ಬೆಳೆಗಳನ್ನು ಪ್ರದರ್ಶಿ
ಮಹಾರಾಷ್ಟç ಮಾದರಿಯಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದ ಕಾರ್ಯಕತರು ವಿಜಯಪುರದಲ್ಲಿ ಜಿಲ್ಲಾಽಕಾರಿ ಡಾ. ಆನಂದ ಕೆ. ಅವರಿಗೆ ಮನವಿ ಸಲ್ಲಿಸಿದರು. ಗುರುಲಿಂಗಪ್ಪ ಅಂಗಡಿ, ಉಮೇಶ ಕಾರಜೋಳ, ಅಪ್ಪಾಸಾಹೇಬ  ಪಟ್ಟಣಶೆಟ್ಟಿ ಮತ್ತಿತರರಿದ್ದಾರೆ.
ಮಹಾರಾಷ್ಟç ಮಾದರಿಯಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದ ಕಾರ್ಯಕತರು ವಿಜಯಪುರದಲ್ಲಿ ಜಿಲ್ಲಾಽಕಾರಿ ಡಾ. ಆನಂದ ಕೆ. ಅವರಿಗೆ ಮನವಿ ಸಲ್ಲಿಸಿದರು. ಗುರುಲಿಂಗಪ್ಪ ಅಂಗಡಿ, ಉಮೇಶ ಕಾರಜೋಳ, ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮತ್ತಿತರರಿದ್ದಾರೆ.
Published on: 

ವಿಜಯಪುರ: ಮಹಾರಾಷ್ಟ್ರಮಾದರಿಯಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದು ಹಾಗೂ ವಿವಿಧ ರೈತಪರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಬಿಜೆಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು ಒಣಗಿದ ಪೈರು ಮತ್ತು ಬೆಳೆಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಜಿಲ್ಲಾಽಕಾರಿ ಕಚೇರಿ ಬಳಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಸೇರಿ ಮುಂತಾದವರು ರೈತರ ಉಡುಪಿನಲ್ಲಿಯೇ ಆಗಮಿಸಿದ್ದರು. ಸಾಲಮನ್ನಾ ಮಾಡಲು ಘೋಷಣೆ ಕೂಡಿದರು. ನಂತರ ಜಿಲ್ಲಾಽಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ರಾಜ್ಯ ಸರ್ಕಾರ ಕೇವಲ 2500 ರೂ. ಇನ್‌ಪುಟ್ ಸಬ್ಸಿಡಿ ನೀಡುವ ಮೂಲಕ ಸಂಕಷ್ಟದಲ್ಲಿರುವ ರೈತ ಕುಲಕ್ಕೆ ಅಪಮಾನ ಮಾಡಿದೆ. ಕೂಡಲೇ ಮಹಾರಾಷ್ಟç ಮಾದರಿಯಲ್ಲಿ ಸಂಪೂರ್ಣ ಸಾಲಮನ್ನಾ ಮಾಡಿ ರೈತನಿಗೆ ಅಭಯ ನೀಡಬೇಕು ಎಂದರು.

ಕೈಯಲ್ಲಿರುವ ಒಣಗಿದ ಬೆಳೆ ವಿಜಯಪುರ ಜಿಲ್ಲೆಯ ರೈತರ ಇಂದಿನ ದುಸ್ಥಿತಿಯ ಸಂಕೇತವಾಗಿದೆ. ನಾನು ಬಿಜೆಪಿ ಜಿಲ್ಲಾಧ್ಯಕ್ಷನಾಗಿದ್ದರೂ, ಇಂದು ಯಾವುದೇ ಪಕ್ಷದ ಪದಾಽಕಾರಿಯಾಗಿ ಅಥವಾ ರಾಜಕೀಯ ಮುಖಂಡನಾಗಿ ಇಲ್ಲಿಗೆ ಬಂದಿಲ್ಲ. ಬದಲಾಗಿ, ಕಷ್ಟದಲ್ಲಿರುವ ರೈತರ ಪ್ರತಿನಿಽಯಾಗಿ, ಒಬ್ಬ ಸಾಮಾನ್ಯ ರೈತನಾಗಿ ಈ ಮನವಿಯನ್ನು ಸರ್ಕಾರಕ್ಕೆ ಮಾಡುತ್ತಿರುವೆ ಎಂದರು.

ಕೂಡಲೇ ಬೆಳೆ ಹಾನಿಯ ಕುರಿತು ವೈಜ್ಞಾನಿಕ ಸಮೀಕ್ಷೆ ನಡೆಸಿ, ರೈತರು ಅನುಭವಿಸಿದ ನಷ್ಟಕ್ಕೆ ತಕ್ಕಂತೆ ಯೋಗ್ಯ ಪರಿಹಾರ ಒದಗಿಸಬೇಕು, ಕೇವಲ ಮಳೆಯ ಅಂಕಿ-ಅAಶಗಳನ್ನು ಮಾತ್ರ ಆಧಾರವಾಗಿಟ್ಟುಕೊಳ್ಳದೆ; ಬಿತ್ತನೆ ಪ್ರಮಾಣ, ಮಣ್ಣಿನ ತೇವಾಂಶ, ಉಪಗ್ರಹ ಆಧಾರಿತ ಬೆಳೆಯ ಸ್ಥಿತಿ ಮತ್ತು ಜಲ ವೈಜ್ಞಾನಿಕ ಅಂಶಗಳನ್ನು ಪರಿಗಣಿಸಿ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಸಾಲ ಮನ್ನಾ ವಿಚಾರ ಬಂದಾಗ, ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವುದು ಸರಿಯಲ್ಲ. ರಾಜ್ಯ ಸರ್ಕಾರ ಮೊದಲು ತನ್ನ ಪಾಲಿನ ಜವಾಬ್ದಾರಿ ನಿಭಾಯಿಸಿ, ರೈತರಿಗೆ ನೆರವು ನೀಡಬೇಕು. ಆನಂತರ ಕೇಂದ್ರದ ಬಳಿ ಹೆಚ್ಚಿನ ಅನುದಾನ ಕೇಳುವುದು ಸೂಕ್ತ ಎಂದರಲ್ಲದೆ, ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿಜಾರಿಗೊಳಿಸಿರುವ `ಅಹಲ್ಯಾಬಾಯಿ ಹೋಳ್ಕರ್ ಕರ್ಜ್ ಮುಕ್ತಿ ಯೋಜನೆ- 2026' ಮಾದರಿಯಲ್ಲಿ ರಾಜ್ಯದಲ್ಲೂ ಸಾಲ ಮನ್ನಾ ಆಗಬೇಕೆಂದು ಆಗ್ರಹಿಸಿದರು.

ಮುಖಂಡರಾದ ವಿಜುಗೌಡ ಪಾಟೀಲ, ಉಮೇಶ ಕಾರಜೋಳ, ಬಾಲರಾಜ್‌ರೆಡ್ಡಿ, ಸುರೇಶ ರೆಡ್ಡಿ, ಸಂದೀಪ ಪಾಟೀಲ, ಭರತಕೋಳಿ, ಎಸ್.ಎ. ಪಾಟೀಲ, ಚಿದಾನಂದ ಚಲವಾದಿ, ಮಹೇಂದ್ರ ನಾಯಕ, ವಿಜಯ ಜೋಶಿ, ಕೃಷ್ಣಾ ಗುನ್ನಾಳಕರ, ಉಮೇಶ ಕೋಳಕೂರ, ವಿಕಾಸ ಪದಕಿ, ಜಗದೀಶ ಮುಚ್ಚಂಡಿ, ಈರಣ್ಣ ರಾವೂರ, ರಜನಿ ಸಂಬಣ್ಣಿ, ಸಿದ್ದು ಮಲ್ಲಿಕಾರ್ಜುನ ಮಠ, ಸಿದ್ಧಣಗೌಡ ಬಿರಾದಾರ, ಮಲ್ಲು ಕಲಾದಗಿ, ರಾಜಶೇಖರ ಡೊಳ್ಳಿ, ಶ್ರೀಕಾಂತ ಶಿಂದೆ, ರವಿ ಅರ್ಧವೂರ, ಸಚಿನ ಬೊಂಬಳೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net