ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಡಿ.ಜಿ. ಬಿರಾದಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಸುನೀಲ ಬಿರಾದಾರ, ಕಾರ್ಯದರ್ಶಿ ಎಸ್.ಎಚ್. ಚೂರಿ, ಶ್ರೀ ಟಿ.ಕೆ. ಪಾಟೀಲ (ಬೆನಕಟ್ಟಿ) ಚಾರಿಟೇಬಲ್ ಟ್ರಸ್ಟ್ ಶಿವಗಿರಿಯ ಆಡಳಿತಾಧಿಕಾರಿ ಆರತಿ ಪಾಟೀಲ, ಎಂ.ಆರ್. ಪಾಟೀಲ, ನ್ಯಾಯವಾದಿ ದೇವೇಂದ್ರ ಪರ್ಸನಳ್ಳಿ, ಡಾ.ರವಿ ಬಿರಾದಾರ, ಶರದ್ ರೋಡಗಿ, ಬಾಬುರಾವ ತಳವಾರ, ಧುರೀಣರಾದ ಖುಷರಾಜ ಪರಣ್ಣವರ, ಗಿರೀಶ ಪಾಟೀಲ, ಶ್ರೀನಿವಾಸ ಕುಲಕರ್ಣಿ, ಈರಣ್ಣ ಜಾಲವಾಡಗಿ, ಬಾಬು ಹಿಪ್ಪರಗಿ, ಶಿವಾನಂದ ಸಾವಳಗಿ, ಎಸ್.ಎಸ್. ಹಂಜಗಿ ಮತ್ತಿತರರಿದ್ದರು. ನ್ಯಾಯವಾದಿ ದಾನೇಶ ಅವಟಿ ನಿರೂಪಿಸಿ ವಂದಿಸಿದರು. ಮಹಿಳಾ ನ್ಯಾಯವಾದಿಗಳಾದಿಯಾಗಿ 50ಕ್ಕೂ ಅಧಿಕ ನ್ಯಾಯವಾದಿಗಳು ರಕ್ತ ದಾನ ಮಾಡಿದರು.