ಜನರ ಋಣ ತೀರಿಸಲು ಸಾಧ್ಯವಿಲ್ಲ...! ಸಂಸದ ರಮೇಶ ಜಿಗಜಿಣಗಿ ಭಾವುಕ

ವಿಜಯಪುರ ಗಣೇಶನಗರದ ಹೊರವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ 6 ಪಥದ ಕೆಳಸೇತುವೆ ನಿರ್ಮಾಣ ಕಾಮಗಾರಿಯನ್ನು ಸಂಸದ ರಮೇಶ ಜಿಗಜಿಣಗಿ ಪರಿಶೀಲನೆ ನಡೆಸಿದರು. ಮುಖಂಡರಾದ ಭೀಮಾಶಂಕರ ಹದನೂರ, ಉಮೇಶ ಕೋಳಕೂರ, ಸಂಜೀವ ಐಹೊಳಿ ಮತ್ತಿತರರಿದ್ದಾರೆ.
ವಿಜಯಪುರ ಗಣೇಶನಗರದ ಹೊರವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ 6 ಪಥದ ಕೆಳಸೇತುವೆ ನಿರ್ಮಾಣ ಕಾಮಗಾರಿಯನ್ನು ಸಂಸದ ರಮೇಶ ಜಿಗಜಿಣಗಿ ಪರಿಶೀಲನೆ ನಡೆಸಿದರು. ಮುಖಂಡರಾದ ಭೀಮಾಶಂಕರ ಹದನೂರ, ಉಮೇಶ ಕೋಳಕೂರ, ಸಂಜೀವ ಐಹೊಳಿ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಕೆಳಸೇತುವೆ ಕಾಮಗಾರಿ ಪರಿಶೀಲನೆ
  • ಗಣೇಶನಗರದ ಹೊರವಲಯದಲ್ಲಿ ನಿರ್ಮಾಣ
  • ಬಹುದಿನದ ಕನಸು ನನಸು

ವಿಜಯಪುರ: ‘ನಾನೊಬ್ಬ ದಲಿತ ವ್ಯಕ್ತಿ ಕಳೆದ 45 ವರ್ಷಗಳಿಂದ ನಾನು ಕೇಳದೆ ಮತ ಹಾಕಿ ನನ್ನನ್ನು ಗೆಲ್ಲಿಸಿಕೊಂಡು ಇಷ್ಟು ಎತ್ತರಕ್ಕೆ ಬೆಳೆಸಿರುವ ಜಿಲ್ಲೆಯ ಜನರ ಋಣ ತೀರಿಸಲು ಸಾಧ್ಯವಿಲ್ಲ. ಆದರೆ ಅವರ ಹೃದಯದಲ್ಲಿ ಶಾಶ್ವತವಾಗಿ ಉಳಿಯುವ ಕೆಲಸಗಳನ್ನು ಮಾಡುತ್ತೇನೆ’ ಎಂದು ಸಂಸದ ರಮೇಶ ಜಿಗಜಿಣಗಿ ಭಾವುಕರಾಗಿ ನುಡಿದರು.

ಇಲ್ಲಿನ ಗಣೇಶನಗರದ ಹೊರವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ 6 ಪಥದ ಕೆಳಸೇತುವೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ಮಾಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಬೆಂಗಳೂರು-ಸೊಲ್ಲಾಪುರ ಎನ್‌ಎಚ್-50 ದಾಟುವಾಗ ರೈತರಿಗೆ, ಶಾಲೆ-ಕಾಲೇಜು ಮಕ್ಕಳಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಬಹಳಷ್ಟು ಬೈಕ್ ಸವಾರರು ಅಪಘಾತದಿಂದ ಸಾವನ್ನಪ್ಪಿದ್ದಾರೆ. ಇಬ್ರಾಹೀಂಪುರದ ರೈತರು ತಮ್ಮ ಹೊಲಗಳಿಗೆ ಹೋಗಲು ತೊಂದರೆಯಾಗುತ್ತಿದೆ ಎನ್ನುವುದು ನನ್ನ ಗಮನಕ್ಕೆ ಬರುತ್ತಿದ್ದಂತೆ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಮುಂದೆ ಈ ರಸ್ತೆ ದೊಡ್ಡದಾಗುವುದನ್ನು ಗಮನದಲ್ಲಿ ಇಟ್ಟುಕೊಂಡು ಸುಮಾರು 40 ಕೋಟಿ ವೆಚ್ಚದಲ್ಲಿ 6 ಪಥದ ಸೇತುವೆ ಹಾಗೂ ಎರಡೂ ಬದಿಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.
ಜನಪ್ರತಿನಿಧಿಗಳು ಶೌಚಗೃಹ ಕಟ್ಟಿದರೂ ಫೋಟೋ ತೆಗೆಸಿಕೊಂಡು ಪೋಸ್ ಕೊಡುತ್ತಾರೆ. ನಾನು ಯಾವತ್ತೂ ತೋರಿಕೆಯ ಕೆಲಸ ಕಾರ್ಯಗಳನ್ನು ಮಾಡಿಲ್ಲ. ಜಿಲ್ಲೆಗೆ ಅತೀ ಹೆಚ್ಚು ಅನುದಾನ ತರುವ ಮೂಲಕ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇನೆ. ನಾನು ಮುಂದೆ ರಾಜಕಾರಣದಲ್ಲಿ ಇರಲಿ-ಬಿಡಲಿ ಜನ ಸೇವೆ ನನ್ನ ಉಸಿರು ಇರುವ ವರೆಗೂ ಮುಂದುವರೆಸುತ್ತೇನೆ. ರಾಜಕಾರಣ ಬಿಟ್ಟರೂ ನಿಮ್ಮ ಸೇವೆ ಮಾಡುವುದನ್ನು ಬಿಡುವುದಿಲ್ಲ ಎಂದರು.
ಪ್ರೊಜೆಕ್ಟ್ ಡೈರೆಕ್ಟರ್ ಅನಿಲ ಗೊರಡ್ ಮಾತನಾಡಿ, 1.16 ಕಿ.ಮೀ ಉದ್ದದ ಅಂಡರ್ ಪಾಸ್ ಸೇತುವೆ ನಿರ್ಮಾಣಕ್ಕೆ ಎನ್.ಎಸ್. ನಾಯಕ ಆಂ್ಯಡ್ ಸನ್ಸ್ ಕಂಪನಿಗೆ ಗುತ್ತಿಗೆ ನೀಡಲಾಗಿದ್ದು ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಜನವರಿ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ ಎಂದರು.
ಮಹಾನಗರ ಪಾಲಿಕೆ ಸದಸ್ಯ ಮಲ್ಲಿಕಾರ್ಜುನ(ಕುಮಾರ) ಗಡಗಿ, ಮಳುಗೌಡ ಪಾಟೀಲ, ಬಿಡಿಎ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರು, ಬಿಜೆಪಿ ಮುಖಂಡ ಉಮೇಶ ಕೋಳಕೂರ, ಸಂಜಯ ಐಹೊಳೆ, ಸೂರ್ಯಕಾಂತ ಗಡಗಿ, ಎಸ್.ಎಸ್. ಪಾಟೀಲ, ಪ್ರವೀಣ ಹಳ್ಳಿ, ಶಿವಾನಂದ ಗಡಗಿ, ರಮೇಶ ಭಾವಿಕಟ್ಟಿ, ಭೀಮನಗೌಡ ಲಿಂಗದಳ್ಳಿ, ಮಲ್ಲು ಮಲ್ಲಣ್ಣವರ, ಡಾ.ನಾಡಗೌಡ, ಶಾಂತವೀರ ಗಲಗಲಿ, ಸುನಿಲಗೌಡ ಬಿರಾದಾರ, ವಿಜಯ ಜೋಶಿ, ಸಂಪತ ಕುವಳ್ಳಿ, ಪಾಪು ರಜಪೂತ, ಸಿದ್ದನಗೌಡ ಬಿರಾದಾರ, ಉಪೇಂದ್ರ ದೇಸಾಯಿ, ವಿವೇಕ ಮಠ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net