ಸಂಶೋಧಕ ಡಾ. ಗುರುಪಾದ ಮರಿಗುದ್ದಿ ಅವರು ಕಲಬುರ್ಗಿಯವರ ಸೃಜನ ಸಾಹಿತ್ಯ ಕುರಿತು ಮಾತನಾಡುತ್ತಾ, ಸ್ವಚಿಂತನೆ ಕವಿತೆಗಳು, ವ್ಯಕ್ತಿ ಚಿತ್ರಣ, ಸಾಂಸ್ಕೃತಿಕ, ಕನ್ನಡ, ವಚನಗಳ ಬಗ್ಗೆ ಕಲಬುರ್ಗಿ ಅವರು ಬರೆದಿದ್ದಾರೆ. ನಾಟಕ, ಗದ್ಯ ಮತ್ತು ಲೇಖನ ಸಾಹಿತ್ಯ ಚಾರಿತ್ರ್ಯದ ವಿಷಯವನ್ನು ವಿಶ್ಲೇಷಿಸಿದ್ದಾರೆ. ಅವರ ನಾಟಕಗಳು ಸಾಂಕೇತಿಕ ಅರ್ಥದಲ್ಲಿ ಪ್ರಾರಂಭವಾಗಿ ಬಸವಣ್ಣನವರ ತಾತ್ವಿಕತೆಯನ್ನು ಬಿಂಬಿಸುತ್ತವೆ. ಸಾಮಾಜಿಕ, ಧಾರ್ಮಿಕ ಪ್ರತಿಕ್ರಿಯೆಗಳ ಬಗ್ಗೆ ಪ್ರಸ್ತಾಪ ಹೊಂದಿವೆ. ಬರವಣಿಗೆ ಅಕ್ಷರವನ್ನು ಅಶುದ್ಧವಾಗಿಡಬೇಡಿ. ಸತ್ಯಕ್ಕಾಗಿ ಲೇಖನಿ ಬಳಸಬೇಕು ಎಂಬುದನ್ನು ಪಾಲಿಸುತ್ತ ಚರಿತ್ರೆಯನ್ನು ನಾಟಕಗಳ ರೂಪದಲ್ಲಿ ಪ್ರಕಟಿಸಿದ್ದಾರೆ. ಚರಿತ್ರೆಯನ್ನು ದುರ್ಬಳಕೆ ಮಾಡಿರುವ ಬಗ್ಗೆಯೂ ಸತ್ಯಾನ್ವೇಷಣೆ ಮಾಡಿದ್ದಾರೆ ಎಂದು ಹೇಳಿದರು.