ಬಿಜೆಪಿ ಸೇವಾ ಸಂಕಲ್ಪ ಅಭಿಯಾನ, ಬಬಲೇಶ್ವರದಲ್ಲಿ ವಿಶಿಷ್ಟವಾಗಿ ಆಚರಣೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ

ಪ್ರಧಾನಿ ಮೋದಿ ಜನ್ಮ ದಿನ ಆಚರಣೆ * ಕಾರ್ಯಕರ್ತರಿಂದ ವಿಶೇಷ ಕಾರ್ಯಕ್ರಮ
ಬಿಜೆಪಿಯ ಸೇವಾ ಸಂಕಲ್ಪ ಅಭಿಯಾನ
ಬಬಲೇಶ್ವರದಲ್ಲಿ ಬಿಜೆಪಿಯ ಸೇವಾ ಸಂಕಲ್ಪ ಅಭಿಯಾನದ ಹಿನ್ನೆಲೆ ಅಂಗನವಾಡಿ ಕಾರ್ಯಕರ್ತರಿಗೆ ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ ಕೋಳಕೂರ, ಮುಖಂಡರಾದ ಮಲ್ಲು ಕನ್ನೂರ, ಬಸವರಾಜ್ ಕುರುವಿನಶೆಟ್ಟಿ ಇತರರಿದ್ದಾರೆ.
Published on: 

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ ರಾಷ್ಟ್ರಾದ್ಯಂತ ನಡೆಯುತ್ತಿರುವ ‘ಬಿಜೆಪಿಯ ಸೇವಾ ಸಂಕಲ್ಪ ಅಭಿಯಾನ’ಕ್ಕೆ ಬಬಲೇಶ್ವರ ಕ್ಷೇತ್ರದಲ್ಲಿ ವಿಶಿಷ್ಟವಾಗಿ ಚಾಲನೆ ನೀಡಲಾಯಿತು.

ದೇಶಾದ್ಯಂತ ವಿಭಿನ್ನವಾಗಿ, ವಿಶಿಷ್ಟವಾಗಿ ಅತ್ಯಂತ ಅರ್ಥಪೂರ್ಣವಾಗಿ ಈ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ತನ್ನಿಮಿತ್ತ ಬಬಲೇಶ್ವರ ಕ್ಷೇತ್ರದಲ್ಲಿ ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಅಭಿಯಾನದ ಅರ್ಥಪೂರ್ಣತೆ ಹೆಚ್ಚಿಸಲಾಯಿತು. ಬಿಜೆಪಿ ಜಿಲ್ಲಾ ಮಾಜಿ ಉಪಾಧ್ಯಕ್ಷ ಹಾಗೂ ಜಿಪಂ ಮಾಜಿ ಅಧ್ಯಕ್ಷ ಉಮೇಶ ಕೋಳಕೂರ ನೇತೃತ್ವದಲ್ಲಿ ಹಲವು ಕಾರ್ಯಕರ್ತರು ಇಂಥದ್ದೊಂದು ಕಾರ್ಯಕ್ರಮಕ್ಕೆ ಮುನ್ನುಡಿ ಬರಿದಿರುವ ಬಗ್ಗೆ ಮುಖಂಡರು ಸಂತಸ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಲ್ಲು ಕನ್ನೂರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶ ಕಂಡ ಅಪ್ರತಿಮ ನಾಯಕ. ಇಂಥ ಪ್ರಧಾನಿಯನ್ನು ಕಂಡ ದೇಶದ ಜನರು ಸೌಭಾಗ್ಯವಂತರು. ಅಂಥ ಮಹಾನ್ ಚೇತನನ ಜನ್ಮ ದಿನವನ್ನು ವಿಶಿಷ್ಟವಾಗಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಜಿಲ್ಲಾ ಕಾರ್ಯದರ್ಶಿ ಮಾಜಿ ಬಸವರಾಜ್ ಕುರುವಿನಶೆಟ್ಟಿ, ಡಾ. ಪ್ರಕಾಶ ಬಿರಾದಾರ, ಸಂತೋಷ ತಮಗೊಂಡ, ರವಿಗೌಡ ಬಿರಾದಾರ, ರಮೇಶ ಬಿರಾದಾರ, ಪ್ರಕಾಶ ಗೌಡ ಬಿರಾದಾರ (ಕಡೇಮನಿ), ಶಂಕರಗೌಡ ಬಿರಾದಾರ, ಶಿವಗೊಂಡ ಬಿರಾದಾರ, ಶಾಂತವೀರ ಬಡಚಿ, ಸುರೇಶ ಬಿರಾದಾರ, ಜಗದೀಶ ಜಂಗಮಶೆಟ್ಟಿ, ಬಸಲಿಂಗಪ್ಪ ಬಾವಿಕಟ್ಟಿ, ಶಿವಲಿಂಗಪ್ಪ ಜಂಗಮಶೆಟ್ಟಿ, ಜಿ.ಎನ್. ಜಂಗಮಶೆಟ್ಟಿ, ಲಕ್ಷ್ಮಣ ಇಟಿ, ರಾಜು ಪೂಜಾರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net