

ವಿಜಯಪುರ: ಕರೊನಾ ಹಿನ್ನೆಲೆ ಇದೇ ಮೊದಲ ಬಾರಿಗೆ ಆನ್‌ಲೈನ್ ಮೂಲಕ ನಡೆಯುತ್ತಿರುವ 11ನೇ ಘಟಿಕೋತ್ಸವಕ್ಕೆ ಅಕ್ಕಮಹಾದೇವಿ ಮಹಿಳಾ ವಿವಿ ಸಜ್ಜಾಗಿದೆ.
ಸೆ. 19 ರಂದು ಬೆಳಗ್ಗೆ 11ಕ್ಕೆ ಜ್ಞಾನ ಶಕ್ತಿ ಆವರಣದ ಆಡಳಿತ ಭವನದ ಎದುರಿಗೆ ನಿರ್ಮಿಸಿರುವ ನೂತನ ಸಭಾಂಗಣದಲ್ಲಿ ಘಟಿಕೋತ್ಸವ ನಡೆಯಲಿದ್ದು, ನವದೆಹಲಿಯ ವಿಶ್ವವಿದ್ಯಾಲಯ ಅನುದಾನ ಆಯೋಗ ಸದಸ್ಯ ಪ್ರೊ.ಎಂ.ಕೆ. ಶ್ರೀಧರ್ ಅವರು ಆನ್‌ಲೈನ್ ಮೂಲಕವೇ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಪ್ರಭಾರ ಕುಲಪತಿ ಪ್ರೊ.ಓಂಕಾರ ಕಾಕಡೆ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಹಿಳಾ ವಿವಿಯಿಂದ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ತೇರ್ಗಡೆಯಾದ ಒಟ್ಟು 67 ವಿದ್ಯಾರ್ಥಿಗಳಿಗೆ 70 ಚಿನ್ನದ ಪದಕ ಹಾಗೂ ನಗದು ಬಹುಮಾನ ಮತ್ತು ಒಟ್ಟು 55 ವಿದ್ಯಾರ್ಥಿನಿಯರಿಗೆ ಪಿಎಚ್‌ಡಿ ಪ್ರದಾನ ಮಾಡಲಾಗುತ್ತಿದೆ. ಸ್ನಾತಕ, ಸ್ನಾತಕೋತ್ತರ ಮತ್ತು ಪಿಜಿ ಡಿಪ್ಲೊಮಾ ಸೇರಿ ಒಟ್ಟು 9,371 ವಿದ್ಯಾರ್ಥಿನಿಯರು ಪದವಿ ಪಡೆಯಲು ಅರ್ಹರಾಗಿದ್ದು, ಅದರಲ್ಲಿ ಒಟ್ಟು 1087 ವಿದ್ಯಾರ್ಥಿನಿಯರಿಗೆ ವಿವಿಧ ವಿಷಯಗಳಲ್ಲಿ ಎಂಎ- 415, ಎಂಕಾಂ- 271, ಎಂಬಿಎ- 45, ಎಂಎಸ್‌ಸಿ- 241, ಎಂಈಡಿ- 8, ಎಂಪಿಈಡಿ- 11, ಎಂಎಲ್‌ಐಎಸ್‌ಸಿ- 23, ಎಂಎಸ್‌ಡಬ್ಲೂ- 47 ಮತ್ತು ಎಂಸಿಎ- 16 ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗೆ ಅರ್ಹರಾಗಿದ್ದಾರೆ ಎಂದು ಪ್ರೊ.ಕಾಕಡೆ ತಿಳಿಸಿದರು.
ಅದರಂತೆ, ಪಿ.ಜಿ.ಡಿಪ್ಲೊಮಾ ಕೋರ್ಸ್‌ಗಳಾದ ಯೋಗ ಅಧ್ಯಯನದಲ್ಲಿ 10, ಡಿಎ್ಎಂನಲ್ಲಿ 23 ಹೀಗೆ ಒಟ್ಟು 54 ವಿದ್ಯಾರ್ಥಿನಿಯರು ಡಿಪ್ಲೊಮಾ ಪದವಿ ಪ್ರಮಾಣ ಪತ್ರ ಪಡೆಯಲಿದ್ದಾರೆ. ಜತೆಗೆ ಒಟ್ಟು 8230 ವಿದ್ಯಾರ್ಥಿನಿಯರು ಸ್ನಾತಕ ಪದವಿ ಪಡೆಯಲಿದ್ದು, ಈ ಪೈಕಿ ಬಿಎ- 3738, ಬಿಎಸ್‌ಡಬ್ಲೂ- 40, ಬಿಕಾಂ- 3040, ಬಿಬಿಎ- 158, ಬಿಎಸ್‌ಸಿ- 1133, ಬಿಎಚ್‌ಎಸ್‌ಸಿ- 9, ಬಿಸಿಎ- 79 ಮತ್ತು ಬಿಎ್ಟಿ- 24 ವಿದ್ಯಾರ್ಥಿನಿಯರು ಸ್ನಾತಕ ಪದವಿ ಪಡೆಯಲು ಅರ್ಹರಾಗಿದ್ದಾರೆ ಎಂದು ವಿವರಿಸಿದರು.
ಘಟಿಕೋತ್ಸವವನ್ನು ಯಶಸ್ವಿಯಾಗಿ ಸಂಘಟಿಸಲು ಈಗಾಗಲೇ ಹಲವಾರು ಸಮಿತಿಗಳನ್ನು ರಚಿಸಲಾಗಿದೆ. ಭರದಿಂದ ಸಿದ್ಧತೆಗಳು ನಡೆದಿವೆ. ಕರೊನಾ ಹಿನ್ನೆಲೆಯಲ್ಲಿ ಈ ಬಾರಿಯ ಘಟಿಕೋತ್ಸವದಲ್ಲಿ ಕೇವಲ ಚಿನ್ನದ ಪದಕ ಪಡೆದಿರುವ ವಿದ್ಯಾರ್ಥಿನಿಯರು ಹಾಗೂ ಪಿಎಚ್‌ಡಿ ಪದವಿಧರರಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಉಳಿದವರಿಗೆ ಆನ್‌ಲೈನ್ ಮೂಲಕವೇ ಘಟಿಕೋತ್ಸವ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಅಕ್ಕ ಟಿವಿ ಯುಟ್ಯೂಬ್ ನ್ಯೂಸ್ ಚಾನೆಲ್ ಲಿಂಕ್ ಮೂಲಕ ಮತ್ತು ಕೆಎಸ್‌ಡಬ್ಲುೃಯು ಮಿಡಿಯಾ ಸೆಲ್ ೇಸ್‌ಬುಕ್ ಲೈವ್ ಮೂಲಕ ವೀಕ್ಷಿಸಲು ಅವಕಾಶವಿದೆ ಎಂದರು.
ವಿದ್ಯಾರ್ಥಿನಿಯರು ಅಂತರ ಕಾಪಾಡಲು ಎರಡು ಉಪ ವೇದಿಕೆಗಳನ್ನು ರಚಿಸಲಾಗಿದ್ದು, ಪದಕ, ಪದವಿ ಪ್ರಮಾಣ ಪತ್ರಗಳನ್ನು ಸ್ವೀಕರಿಸಲು ಮಾತ್ರ ವಿದ್ಯಾರ್ಥಿನಿಯರು ಘಟಿಕೋತ್ಸವದ ಮುಖ್ಯ ವೇದಿಕೆಗೆ ಆಗಮಿಸಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ, ಆಹ್ವಾನಿತರು ಮತ್ತು ವಿದ್ಯಾರ್ಥಿನಿಯರಿಗೆ ಆವರಣ ಪ್ರವೇಶ ಮಾಡುವ ಮೊದಲು ಥರ್ಮಲ್ ಸ್ಕಾೃನಿಂಗ್ ಮಾಡಲಾಗುತ್ತದೆ. ಸಭೆ ಮುಗಿಯವವರೆಗೆ ಮಾಸ್ಕ್ ಧರಿಸುವಂತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುತ್ತದೆ ಎಂದರು.
ಘಟಿಕೋತ್ಸವದ ದಿನ ಇಡೀ ಆಡಳಿತ ಭವನ, ಮುಖ್ಯ ವೇದಿಕೆ ಹಾಗೂ ಉಪ ವೇದಿಕೆಗಳನ್ನು ಡಿಸ್‌ಇನ್ಪೆಕ್ಷನ್ ಮಾಡಿ ಶುಚಿಗೊಳಿಸಲಾಗುತ್ತದೆ. ಅಲ್ಲದೆ, ಸ್ಯಾನಿಟೈಸರ್ ವ್ಯವಸ್ಥೆ ಕೂಡಾ ಮಾಡಲಾಗಿದೆ. ಇದಕ್ಕಾಗಿ ನಮ್ಮ ಆರೋಗ್ಯ ಕೇಂದ್ರದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಘಟಿಕೋತ್ಸವದಲ್ಲಿ ಭಾಗವಹಿಸುವ ಪ್ರತಿಯೊಬ್ಬರ ಆರೋಗ್ಯ ಕಾಳಜಿಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಸಮಿತಿಗಳಿಗೆ ಸೂಚನೆ ನೀಡಲಾಗಿದೆ ಮತ್ತು ಘಟಿಕೋತ್ಸವ ಸಂದರ್ಭದಲ್ಲಿ ಮೊಬೈಲ್ ಫೋನ್, ವಿಡಿಯೋ, ಕ್ಯಾಮರಾ, ಸ್ಟಿಲ್ ಕ್ಯಾಮರಾಗಳನ್ನು ನಿಷೇಧಿಸಲಾಗಿದೆ ಎಂದು ಪ್ರೊ.ಕಾಕಡೆ ತಿಳಿಸಿದರು.
ಕುಲಸಚಿವೆ ಪ್ರೊ.ಆರ್.ಸುನಂದಮ್ಮ, ಮೌಲ್ಯಮಾಪನ ಕುಲಸಚಿವ ಪ್ರೊ.ಪಿ.ಜಿ. ತಡಸದ, ಆರ್ಥಿಕ ಅಧಿಕಾರಿ ಪ್ರೊ.ವಿಜಯಾ ಕೋರಿಶೆಟ್ಟಿ, ಘಟಿಕೋತ್ಸವದ ಸಂಯೋಜನಾಧಿಕಾರಿ ಪ್ರೊ.ಡಿ.ಎಂ. ಜ್ಯೋತಿ ಸುದ್ದಿಗೋಷ್ಠಿಯಲ್ಲಿದ್ದರು.
ಈ ಬಾರಿ ಗೌರವ ಡಾಕ್ಟರೇಟ್ ನೀಡಲಾಗುತ್ತಿಲ್ಲ ಎಂದ ಕುಲಪತಿ ಪ್ರೊ.ಓಂಕಾರ ಕಾಕಡೆ ಅವರು, ಮಹಿಳಾ ವಿವಿಯನ್ನು ರಾಜ್ಯವ್ಯಾಪಿ ವಿಸ್ತರಿಸುವ ನಿಟ್ಟಿನಲ್ಲಿ ಈಗಾಗಲೇ ಸಕಲ ಕ್ರಮ ಕೈಗೊಳ್ಳಲಾಗಿದೆ ಎಂದರು. ಮಂಡ್ಯ ಕೇಂದ್ರಕ್ಕೆ ಐದು ಕೋಟಿ ರೂ.ವೆಚ್ಚದ ಬೃಹತ್ ಕಟ್ಟಡ ಕೂಡ ನಿರ್ಮಿಸಲಾಗುತ್ತಿದೆ. ಬೆಂಗಳೂರು ಕೇಂದ್ರಕ್ಕೆ ನಾಲ್ಕು ಎಕರೆ ಜಾಗ ಮಂಜೂರಾಗಿದ್ದು, ಅಲ್ಲಿಯೇ ಐಎಎಸ್ ಹಾಗೂ ಕೆಎಎಸ್ ತರಬೇತಿ ಕೇಂದ್ರ ಸ್ಥಾಪಿಸಲಾಗುತ್ತಿದೆ. ಶಿವಮೊಗ್ಗದಲ್ಲಿ ಈಗಾಗಲೇ ವಿವಿ ಕೇಂದ್ರವಿದೆ. ಮಲೆನಾಡು ಮತ್ತು ಹೈ- ಕ ಭಾಗದ ಸಿಂಧನೂರನಲ್ಲಿ ಕೇಂದ್ರ ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು.