ಎಲ್ಲ ಸಮುದಾಯದವರಿಗೂ ಯೋಜನೆ ವಿಸ್ತರಿಸಿ

Yatanal
Published on

ವಿಜಯಪುರ: ಕ್ಯಾನ್ಸರ್ ಪೀಡಿತ ಮುಸ್ಲಿಂ ಮಹಿಳೆಯರಿಗೆ ಸಹಾಯಧನ ನೀಡುವ ಸರ್ಕಾರದ ಯೋಜನೆಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರೋಧಿಸಿದ್ದು, ಎಲ್ಲ ಸಮುದಾಯದವರಿಗೂ ಯೋಜನೆ ವಿಸ್ತಿರುಸುವಂತೆ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.

ಕ್ಯಾನ್ಸರ್ ಪೀಡಿತ ಮುಸ್ಲಿಂ ಮಹಿಳೆಯರಿಗೆ ಲಕ್ಷ ರೂ.ಸಹಾಯ ಧನ ನೀಡುವ ಸರ್ಕಾರದ ನಿರ್ಧಾರಕ್ಕೆ ನಮ್ಮ ವಿರೋಧವಿದೆ. ಕ್ಯಾನ್ಸರ್ ಎಂಬುದು ಕೇವಲ ಒಂದು ಜಾತಿ ನೋಡಿ ಬರುವುದಿಲ್ಲ. ಎಲ್ಲ ಜಾತಿ, ಧರ್ಮ, ಜನಾಂಗದವರಿಗೂ ಬರುತ್ತದೆ. ಜಾತಿ, ಧರ್ಮದ ಬದಲಾಗಿ ಆರ್ಥಿಕತೆ ಆಧರಿಸಿ ಯೋಜನೆ ರೂಪಿಸಬೇಕಿದೆ ಎಂದಿದ್ದಾರೆ.

ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಯೋಜನೆ ಒದಗಿಸಬೇಕಿದೆ. ಬಡತನ ಕೇವಲ ಒಂದೇ ಜಾತಿ, ಧರ್ಮ ಮತ್ತು ಜನಾಂಗಕ್ಕೆ ಇರುವುದಿಲ್ಲ. ಹೀಗಾಗಿ ಬಡತನ ಆಧರಿಸಿ ಯೋಜನೆ ರೂಪಿಸಿದರೆ ಎಲ್ಲ ವರ್ಗದವರಿಗೂ ಅನುಕೂಲವಾಗಲಿದೆ. ಬಿಜೆಪಿ ಎಂದೂ ಮುಸ್ಲಿಂ ತುಷ್ಠೀಕರಣ ಮಾಡಿಲ್ಲ. ಹೀಗಾಗಿ ಹಾಲಿ ಸರ್ಕಾರ ತಾರತಮ್ಯ ಮಾಡುವುದು ಸರಿಯಲ್ಲ. ಸಬ್‌ಕಾ ಸಾಥ್ ಸಬ್‌ಕಾ ವಿಕಾಸ ಎಂಬ ಪ್ರಧಾನಿ ಮೋದಿ ಅವರ ಘೋಷಣೆ ಸಾಕಾರಗೊಳ್ಳಬೇಕಾದರೆ ಈ ಯೋಜನೆ ಎಲ್ಲ ವರ್ಗದವರಿಗೂ ವಿಸ್ತರಿಸಬೇಕಿದೆ. ಕ್ಯಾನ್ಸರ್ ಪೀಡಿತ ಎಲ್ಲ ಬಡವರಿಗೆ ಈ ಯೋಜನೆ ತಲುಪಬೇಕು. ಇಲ್ಲದಿದ್ದರೆ ಇತರೆ ಸರ್ಕಾರಕ್ಕೂ ನಮ್ಮ ಸರ್ಕಾರಕ್ಕೂ ಯಾವುದೇ ವ್ಯತ್ಯಾಸ ಇರಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net