ಸಮಾಜದಲ್ಲಿ ಸಾಮರಸ್ಯ ವೃದ್ಧಿಯಾಗಲಿ

HN 20-2
Published on

ವಿಜಯಪುರ: ಭಾರತ ವಿವಿಧತೆಯಲ್ಲಿ ಏಕತೆಯನ್ನು ಬಯಸುವ ರಾಷ್ಟ್ರ. ಹೀಗಾಗಿ ನಾವು ಜಾತಿ, ಲಿಂಗ, ಮತ ಮತ್ತು ಪ್ರಾದೇಶಿಕ ತಾರತಮ್ಯವನ್ನು ಮರೆತು ಕೂಡಿ ಬಾಳುವುದರೊಂದಿಗೆ ಸಮಾಜದಲ್ಲಿ ಸಾಮರಸ್ಯವನ್ನು ವೃದ್ಧಿಗೊಳಿಸಬೇಕು ಎಂದು ಮಹಿಳಾ ವಿವಿ ಪ್ರಭಾರ ಕುಲಪತಿ ಪ್ರೊ. ಓಂಕಾರ ಕಾಕಡೆ ಹೇಳಿದರು.
ನಗರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ಕೋಶದ ವತಿಯಿಂದ ಮಾಜಿ ಪ್ರಧಾನಿ ದಿ.ರಾಜೀವ ಗಾಂಧಿ ಅವರ ಜನ್ಮ ದಿನೋತ್ಸವದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಸದ್ಭಾವನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಸಮಾನತೆ ಮೂಲಕ ಸಹಬಾಳ್ವೆ, ಸಾಮರಸ್ಯ ಸಾಧಿಸಬೇಕಿದೆ ಎಂದರು.
ವಿವಿ ಕುಲಸಚಿವೆ ಪ್ರೊ. ಆರ್. ಸುನಂದಮ್ಮ ಅವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಮೌಲ್ಯಮಾಪನ ಕುಲಸಚಿವ ಪ್ರೊ. ಪಿ.ಜಿ. ತಡಸದ, ಪಿಎಂಇ ಬೋರ್ಡ್ ನಿರ್ದೇಶಕ ಪ್ರೊ. ಎಸ್.ಎ. ಖಾಜಿ, ಎನ್‌ಎಸ್‌ಎಸ್ ಕೋಶದ ಸಂಯೋಜನಾಧಿಕಾರಿ ಪ್ರೊ. ನಾಮದೇವ ಗೌಡ, ಡಾ. ಕಲಾವತಿ ಕಾಂಬಳೆ, ಡಾ. ಗುಲಾಬ ರಾಠೋಡ, ವಿಶ್ವವಿದ್ಯಾನಿಲಯದ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net