ಪ್ರೊ.ನಾಮದೇವಗೌಡ ಹಂಗಾಮಿ ಕುಲಪತಿ

HN 14-1
Published on

ವಿಜಯಪುರ: ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ನೂತನ ಹಂಗಾಮಿ ಕುಲಪತಿಯಾಗಿ ಕಲಾ ನಿಕಾಯದ ಡೀನ್ ಪ್ರೊ.ನಾಮದೇವಗೌಡ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

ನೂತನ ಹಂಗಾಮಿ ಕುಲಪತಿ ಪ್ರೊ.ನಾಮದೇವಗೌಡ ಅವರಿಗೆ ಪ್ರೊ.ಓಂಕಾರ ಕಾಕಡೆ ಸೋಮವಾರ ಬೆಳಗ್ಗೆ ಅಧಿಕಾರ ಹಸ್ತಾಂತರಿಸಿದರು. ಪ್ರೊ.ನಾಮದೇವಗೌಡ ಅವರ ಅಧಿಕಾರದ ಅವಧಿ ಜ.31ರ ವರೆಗೆ ಇರುತ್ತದೆ ಎಂದು ರಾಜ್ಯಪಾಲರ ಆದೇಶದಲ್ಲಿ ತಿಳಿಸಲಾಗಿದೆ.

ಕುಲಸಚಿವೆ ಪ್ರೊ.ಆರ್.ಸುನಂದಮ್ಮ, ಮೌಲ್ಯಮಾಪನ ಕುಲಸಚಿವ ಪ್ರೊ.ಪಿ.ಜಿ.ತಡಸದ, ಆರ್ಥಿಕ ಅಧಿಕಾರಿ ಪ್ರೊ.ವಿಜಯಾ ಕೋರಿಶೆಟ್ಟಿ. ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net