ಗ್ರಾಮದಲ್ಲೇ ಉದ್ಯೋಗ ಪಡೆದುಕೊಳ್ಳಿ

ದೂಪದಹಳ್ಳಿ ತಾಂಡಾದಲ್ಲಿ ಜನರು ಗುಳೆ ಹೋಗದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ವಿಬಿ ಜಿ ರಾಮ್ ಜಿ ಯೋಜನೆ ಕುರಿತು ಕರಪತ್ರ ಹಂಚಿ ಜಾಗೃತಿ ಮೂಡಿಸಿದರು.
ದೂಪದಹಳ್ಳಿ ತಾಂಡಾದಲ್ಲಿ ಜನರು ಗುಳೆ ಹೋಗದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ವಿಬಿ ಜಿ ರಾಮ್ ಜಿ ಯೋಜನೆ ಕುರಿತು ಕರಪತ್ರ ಹಂಚಿ ಜಾಗೃತಿ ಮೂಡಿಸಿದರು.
Published on
ಕೊಟ್ಟೂರು: ದೂಪದಹಳ್ಳಿ ತಾಂಡಾ, ಮೋತಿಕಲ್ ತಾಂಡಾ ಹಾಗೂ ತಿಮ್ಮಲಾಪುರ ತಾಂಡಾ ಜನರು ಕೆಲಸ ಅರಸಿ ವಲಸೆ ಹೋಗದಂತೆ ತಡೆಯಲು ಗ್ರಾಮ ಪಂಚಾಯಿತಿ ಸಿಬ್ಬಂದಿ ಮನೆ ಮನೆ ಭೇಟಿ ಕೊಟ್ಟು ಗುರುವಾರ ಜಾಗೃತಿ ಮೂಡಿಸಿದರು.
ವಿಜಿ ಬಿ ರಾಮ್ ಜಿ ಯೋಜನೆಯಡಿ ಮಾನವ ದಿನಗಳನ್ನ 100 ರಿಂದ125 ಕ್ಕೆ ಹೆಚ್ಚಿಸಲಾಗಿದೆ. ಕೂಲಿ ಮೊತ್ತವನ್ನು 370 ರಿಂದ 382 ಕ್ಕೆ ಏರಿಸಲಾಗಿದೆ. ಗ್ರಾಮದಲ್ಲಿಯೇ ಉದ್ಯೋಗ ಪಡೆದು ಜೀವನ ರೂಪಿಸಿಕೊಳ್ಳುವಂತೆ ಮಾಹಿತಿ ನೀಡಿದರು. ಪಿಡಿಒ ಕೆಂಚಪ್ಪ, ಐಇಸಿ ಸಂಯೋಜಕ ಪ್ರಭುಕುಮಾರ ಉಪ್ಪಾರ, ತಾಂತ್ರಿಕ ಸಹಾಯಕ ರವಿಕುಮಾರ ನಾಯ್ಕ, ಕರವಸೂಲಿಗಾರ ಬಸಯ್ಯ, ಬಿಎಫ್‌ಟಿ ಲತಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net