ತೋಟಗಾರಿಕೆ ಅಧಿಕಾರಿ ಕುಬೇರ ಆಚಾರಿ, 716 ಹೆಕ್ಟೇರ್ ತೋಟಗಾರಿಕೆ ಪ್ರದೇಶದ ಪೈಕಿ 315 ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆಯಲಾಗಿದೆ ಎಂದರು. ವಿದ್ಯುತ್ ವ್ಯತ್ಯಯ ಹೆಚ್ಚಿದ್ದು. ಇದರಿಂದ ಕುಡಿಯುವ ನೀರು, ನೀರಾವರಿಗೆ ಆಗುತ್ತಿರುವ ಸಮಸ್ಯೆ ಕುರಿತು ಶಾಸಕರ ಗಮನ ಸೆಳೆದಾಗ, ಜೆಸ್ಕಾಂ ಎಇಇ ಆರ್. ನಾಗರಾಜ್‌ಗೆ ಸೋಲಾರ್ ಅಳವಡಿಕೆ ಬಗ್ಗೆ ರೈತರಿಗೆ ಮನವರಿಕೆ ಮಾಡುವಂತೆ ಸೂಚಿಸಿದರು.