ಖಜಾನೆ ಇಲಾಖೆ ನೌಕರ ಬೈಕ್‌ನಿಂದ ಬಿದ್ದು ಸಾ*ವು

ಅಭಿಷೇಕ
ಅಭಿಷೇಕ
Published on: 

ಕಾರವಾರ: ಬೈಕ್ ಡಿವೈಡರ್‌ಗೆ ಗುದ್ದಿ ಸವಾರ ಮೃತಪಟ್ಟ ಘಟನೆ ಮಾಜಾಳಿ ವಿಠ್ಠಲ ರುಕ್ಮಿಣಿ ದೇವಸ್ಥಾನ ಬಳಿ ಶನಿವಾರ ರಾತ್ರಿ ನಡೆದಿದೆ.

ಹಳಿಯಾಳ ಮೂಲದ ಪ್ರಸ್ತುತ ಕಾರವಾರ ಖಜಾನೆ ಇಲಾಖೆಯಲ್ಲಿ ದ್ವಿತೀಯ ದರ್ಜೆ ಗುಮಾಸ್ತನಾಗಿದ್ದ ಅಭಿಷೇಕ ಪುರುಷೋತ್ತಮ ಹಳಿಯಾಳಕರ್(21) ಮೃತರು. ಮಾಜಾಳಿ ಬಾಬಾ ರಾಮದೇವ ಹೋಟೆಲ್ ಕಡೆಯಿಂದ ಕಾರವಾರ ಕಡೆಗೆ ರಾಯಲ್ ಎನ್‌ಪೀಲ್ಡ್ ಬೈಕ್‌ನಲ್ಲಿ ರಾತ್ರಿ ಬರುವಾಗ ಘಟನೆ ನಡೆದಿದೆ. ಈ ಸಂಬಂಧ ಚಿತ್ತಾಕುಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.