

ಕಾರವಾರ: ವಿಶ್ವ ಹಿಂದೂ ಪರಿಷತ್ ಕಾರವಾರ ಪ್ರಖಂಡದ ವತಿಯಿಂದ ಹಮ್ಮಿಕೊಳ್ಳಲಾದ ಹಿತಚಿಂತಕ ಅಭಿಯಾನಕ್ಕೆ ಚಾಲನೆ ದೊರೆತಿದೆ. ಕಾರವಾರದ ಪದ್ಮ ಪುಷ್ಪ ವೇದ ವೇದಾಂತ ಸಂಸ್ಕೃತ ಗುರುಕುಲದ ಸಂಸ್ಥಾಪಕ ಶಿವಮೂರ್ತಿ ಆರ್. ಜೋಯಿಸ್ ಅವರು ಭಾನುವಾರ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾರವಾರದ ಸಮಸ್ತ ಜನತೆ ವಿಶ್ವ ಹಿಂದೂ ಪರಿಷತ್ತಿನ ಹಿತಚಿಂತಕರಾಗಿ ಅಭಿಯಾನದಲ್ಲಿ ಕೈಜೋಡಿಸುವಂತೆ ಮನವಿ ಮಾಡಿದರು. ವಿಎಚ್ಪಿ ಜಿಲ್ಲಾ ಸಹ ಕಾರ್ಯದರ್ಶಿ ಸೂರಜ್ ನಾಯ್ಕ್ ಅವರು ಕಾರ್ಯಕರ್ತರಿಗೆ ಹಿತಚಿಂತಕರಾಗುವ ವಿಧಾನ, ಸಂಘಟನೆಯ ಕಾರ್ಯಕರ್ತರಾಗುವ ಪ್ರಕ್ರಿಯೆ ಹಾಗೂ ಪ್ರಖಂಡದ ಸದಸ್ಯರಾಗುವ ಕುರಿತು ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು.
ವಿಎಚ್ಪಿ ತಾಲೂಕು ಉಪಾಧ್ಯಕ್ಷೆ ಸುಷ್ಮಾ ವೆರ್ಣೇಕರ, ತಾಲೂಕು ಕಾರ್ಯದರ್ಶಿ ಮನೋಜ ಬಾಂದೇಕರ್, ಬಜರಂಗದಳ ತಾಲೂಕು ಸಂಯೋಜಕ ಅಜಿತ್ ಕೊಳಂಬ್ಕರ್, ಗ್ರಾಮೀಣ ಸಂಯೋಜಕ ಅಮೃತ, ಮಠಮಂದಿರ ಪ್ರಮುಖ್ ಸೋಹನ್ ಸಾಲಂಕೆ, ಸಾಮಾಜಿಕ ಸಾಮರಸ್ಯ ಪ್ರಮುಖ್ ಸಚಿನ್ ನಾಯಕ ಇದ್ದರು.