ಸಂಕಲ್ಪದಿಂದ ಪರಂಪರೆ ಹಸ್ತಾಂತರಿಸುವ ಕಾರ್ಯ

ಯಲ್ಲಾಪುರದ ಗಾಂಧಿ ಕುಟೀರದಲ್ಲಿ 39ನೇ ಸಂಕಲ್ಪ ಉತ್ಸವವನ್ನು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಉದ್ಘಾಟಿಸಿದರು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಪ್ರಸಾದ ಹೆಗಡೆ, ಪ್ರಶಾಂತ ಹೆಗಡೆ, ವೆಂಕಟೇಶ ಹೆಗಡೆ, ಬೀರಣ್ಣ ನಾಯಕ ಮೊಗಟಾ ಇತರರಿದ್ದರು.
ಯಲ್ಲಾಪುರದ ಗಾಂಧಿ ಕುಟೀರದಲ್ಲಿ 39ನೇ ಸಂಕಲ್ಪ ಉತ್ಸವವನ್ನು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಉದ್ಘಾಟಿಸಿದರು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಪ್ರಸಾದ ಹೆಗಡೆ, ಪ್ರಶಾಂತ ಹೆಗಡೆ, ವೆಂಕಟೇಶ ಹೆಗಡೆ, ಬೀರಣ್ಣ ನಾಯಕ ಮೊಗಟಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ
  • ಸಂಕಲ್ಪ ಉತ್ಸವ ಉದ್ಘಾಟನೆ
ಯಲ್ಲಾಪುರ: ಕೃಷಿ ಮತ್ತು ಸಂಸ್ಕೃತಿ ಉಳಿವಿಗೆ ಈಗ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಪರಿತಪಿಸುವ ಕಾಲ ಬರಬಹುದು ಎಂದು ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಗಾಂಧೀ ಕುಟೀರದಲ್ಲಿ ಶುಕ್ರವಾರ ರಾತ್ರಿ 39ನೇ ಸಂಕಲ್ಪ ಉತ್ಸವವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ನಮ್ಮ ಶ್ರೇಷ್ಠ ಪರಂಪರೆಯನ್ನು ಮಕ್ಕಳಿಗೆ ಹಸ್ತಾಂತರಿಸುವುದರಲ್ಲಿ ವಿಫಲರಾಗುತ್ತಿದ್ದೇವೆ. ಕೃಷಿ ಜಮೀನನ್ನು ಹಣದ ಆಸೆಗಾಗಿ ವಿದೇಶಿ ಹಿನ್ನೆಲೆ ಉಳ್ಳವರಿಗೆ ಮಾರಲಾಗುತ್ತಿದೆ. ಇದು ಆಘಾತಕಾರಿ ವಿಷಯ. ಕೃಷಿ ಮತ್ತು ನಮ್ಮ ಸಂಸ್ಕೃತಿಯ ಉಳಿವಿಗಾಗಿ ಪುನಃ ಇನ್ನೊಂದು ಸ್ವಾತಂತ್ರೃ ಸಂಗ್ರಾಮವನ್ನೇ ಮಾಡುವ ಕಾಲ ಬರಬಹುದು ಎಂದು ಎಚ್ಚರಿಸಿದರು.
ಯಕ್ಷಗಾನದ ಮೂಲಕ ಯುಗಗಳ ಪರಂಪರೆ ಸಾರುವ ಕಾರ್ಯವನ್ನು ಸಂಕಲ್ಪ ಮಾಡುತ್ತಿದೆ. ಇಂತಹ ಉತ್ಸವಗಳಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಎಡನೀರು ಮಹಾಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿ, ನಮ್ಮ ಪರಂಪರೆ ಮೌಲ್ಯ ಉಳಿಯಬೇಕಾದರೆ ಯಕ್ಷಗಾನ ಉಳಿಸಬೇಕು ಎಂದರು.
ಉದ್ಯಮಿ ರಾಮನಾಥ ಭಟ್ಟ, ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ ಅವರಿಗೆ ಸಂಕಲ್ಪ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಮಾಜಿಕ ಕಾರ್ಯಕರ್ತರಾದ ವೆಂಕಟೇಶ ಹೆಗಡೆ ಹೊಸಬಾಳೆ, ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಶಂಕರ ಭಟ್ಟ ತಾರೀಮಕ್ಕಿ, ಸುಬ್ರಹ್ಮಣ್ಯ ಹೆಗಡೆ, ವನರಾಗ ಶರ್ಮ, ಕಲಾವಿದ ಸುಬ್ರಹ್ಮಣ್ಯ ಚಿಟ್ಟಾಣಿ, ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಉಪಸ್ಥಿತರಿದ್ದರು.
ಸಂಕಲ್ಪದ ಸಂಚಾಲಕ ಪ್ರಸಾದ ಹೆಗಡೆ, ಉಪಾಧ್ಯಕ್ಷ ಪ್ರಶಾಂತ ಹೆಗಡೆ ಯತಿದ್ವಯರಿಗೆ ಫಲಪುಷ್ಪ ಸಮರ್ಪಿಸಿ, ಪ್ರಾಸ್ತಾವಿಕ ಮಾತನಾಡಿದರು. ವೇ.ಮೂ. ಶಶಿಕಾಂತ ಭಟ್ಟ ಸಂಗಡಿಗರು ವೇದಘೋಷ ಪಠಿಸಿದರು. ಪದ್ಮಾ ಪ್ರಮೋದ ಹೆಗಡೆ ಪ್ರಾರ್ಥಿಸಿದರು. ಸಂಘಟಕ ಸಿ.ಜಿ. ಹೆಗಡೆ ಸ್ವಾಗತಿಸಿದರು. ಚಂದ್ರಕಲಾ ಭಟ್ಟ ನಿರ್ವಹಿಸಿದರು. ಬಾಬು ಬಾಂದೇಕರ ವಂದಿಸಿದರು.
ಗೀತಾಜ್ಞಾನ ಯಜ್ಞ ಕೇಂದ್ರದವರಿಂದ ಭಗವದ್ಗೀತಾ ಪಠಣ, ಗಣಪತಿ ಕಟ್ಟೆಯ ಶ್ರೀ ಮಹಾಗಣಪತಿ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು. ಉಮ್ಮಚಗಿಯ ಸಂದರ್ಶನ ಯಕ್ಷಕಂಬ ಬಳಗದ ಪ್ರೀತಿ ಹೆಗಡೆ ಜಾಲೀಮನೆ ಹಾಗೂ ಪ್ರೀತಿ ಹೆಗಡೆ ತಟ್ಟೀಸರ ಇವರಿಂದ ಗೀತಾನುಸಂಧಾನ ಯಕ್ಷ ನೃತ್ಯ ಪ್ರದರ್ಶನ, ಪ್ರಸಿದ್ಧ ಕಲಾವಿದರಿಂದ ಬಬ್ರುವಾಹನ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net