ಶ್ರೀದುರ್ಗಾ ದೀಪ ನಮಸ್ಕಾರ ವೈಭವ

ಸಹಸ್ರಚಂಡಿಕಾ ಮಹಾಯಾಗ ಶ್ರೀ ಭದ್ರಕಾಳಿದೇವಿ ರಥಯಾತ್ರೆ ಇಂದು
A rare Sri Durga Deepa Namaskar was performed by Vedic scholars led by priests on Friday night on the occasion of the ongoing Sahasrachandika Mahayaga in Gokarna.
ಗೋಕರ್ಣದಲ್ಲಿ ನಡೆಯುತ್ತಿರುವ ಸಹಸ್ರಚಂಡಿಕಾ ಮಹಾಯಾಗ ನಿಮಿತ್ತ ಶುಕ್ರವಾರ ರಾತ್ರಿ ಪುರೋಹಿತರ ನೇತೃತ್ವದಲ್ಲಿ ವೈದಿಕ ವಿದ್ವಾಂಸರಿಂದ ಅಪರೂಪದ ಶ್ರೀದುರ್ಗಾ ದೀಪ ನಮಸ್ಕಾರ ನಡೆಯಿತು.
Published on: 

ಗೋಕರ್ಣ: ಧಾರ್ಮಿಕ ಸೇವಾ ಸಮಿತಿ ಮೂರುದಿನ ಪರ್ಯಂತ ಏರ್ಪಡಿಸಿದ ವಿಶೇಷವಾದ ಧಾರ್ಮಿಕೋತ್ಸವ ಶ್ರೀ ಭದ್ರಕಾಳಿ ಸಹಸ್ರಚಂಡಿಕಾ ಮಹಾಯಾಗದ ಮೊದಲ ದಿನ ಶುಕ್ರವಾರ ರಾತ್ರಿ ಪ್ರಾರಂಭೋತ್ಸವ ನಿಮಿತ್ತ ಶ್ರೀದುರ್ಗಾ ದೀಪ ನಮಸ್ಕಾರ ಕ್ಷೇತ್ರದ ಪುರೋಹಿತರ ನೇತೃತ್ವದಲ್ಲಿ ವೈದಿಕ ವಿದ್ವಾಂಸರಿಂದ ವಿಧ್ಯುಕ್ತವಾಗಿ ನೆರವೇರಿತು.

ಕ್ಷೇತ್ರ ಪುರೋಹಿತ ವೇ.ವಿಶ್ವನಾಥ ಪ್ರಸಾದ ರಮಣಿ ಅವರ ನೇತೃತ್ವದಲ್ಲಿ ಸಮಿತಿಯ ಉಪಾಧ್ಯಕ್ಷ ವೇ.ಚಂದ್ರಶೇಖರ ಅಡಿ ದಂಪತಿಯಿಂದ ಕಲಶಪೂಜೆ ನಡೆಯಿತು. ಶ್ರೀದುರ್ಗಾ ದೀಪ ನಮಸ್ಕಾರ ಕಾರ್ಯಾಂಗವನ್ನು ಕ್ಷೇತ್ರ ಪುರೋಹಿತ ವೇ. ನಾಗರಾಜ ಉಪಾಧ್ಯ ಅವರ ನೇತೃತ್ವದಲ್ಲಿ ವೇ. ಗಜಾನನ ರಾಮಚಂದ್ರ ಉಪಾಧ್ಯ ದಂಪತಿ ನೆರವೇರಿಸಿದರು. ನಮ್ಮ ಜಿಲ್ಲೆಯಲ್ಲಿ ಅಪರೂಪವಾಗಿ ಆಚರಿಸಲಾಗುವ ಶಕ್ತ್ಯಾರಾಧನೆಯ ಪ್ರಧಾನ ಆಚರಣೆಗಳಲ್ಲಿ ವಿಶೇಷವಾದ ಶ್ರೀ ದುರ್ಗಾ ದೀಪ ನಮಸ್ಕಾರವನ್ನು ವೀಕ್ಷಿಸಲು ರಾತ್ರಿ ಸಮಯದಲ್ಲಿ ಕೂಡ ಅಪಾರ ಭಕ್ತರು ಉಪಸ್ಥಿತರಿದ್ದರು. ಕೊನೆಯಲ್ಲಿ ಸೇರಿದ ಭಕ್ತರಿಂದ ಆರಾಧಿತ ಶ್ರೀ ದುರ್ಗಾಮಾತೆಗೆ ಪ್ರದಕ್ಷಿಣೆಯೊಂದಿಗೆ ಸಾಮೂಹಿಕ ನಮಸ್ಕಾರ ಸಲ್ಲಿಸಲ್ಪಟ್ಟಿತು. ಇದಕ್ಕೂ ಮುನ್ನ ವಿದ್ವಾನ್ ಗಣೇಶ್ವರ ದೀಕ್ಷಿತ್ ಮತ್ತು ವಿದ್ವಾನ್ ಭಾರ್ಗವ ಹಿರೇ ನಿರ್ವಹಣೆಯಲ್ಲಿ ನಡೆದ ಅಷ್ಟಾವಧಾನ ಸೇವೆಯಲ್ಲಿ ಇಲ್ಲಿನ ನೂರಾರು ಯುವ ಮತ್ತು ಹಿರಿಯ ವೇದಜ್ಞರು ಭಾಗವಹಿಸಿದರು. ಹಿರಿಯ ವೇದ ವಿದ್ವಾಂಸರಾದ ವೇ. ಕೃಷ್ಣ ಜೋಗಭಟ್ಟ, ಪ್ರಧಾನ ಅರ್ಚಕ ವೇ. ಅನಂತರಾಜ ಅಡಿ ಇತರರು ಉಪಸ್ಥಿತರಿದ್ದರು. ಶ್ರೀ ಭದ್ರಕಾಳಿ ಮಂದಿರದಲ್ಲಿ ಮಹಾಯಾಗದ ಪ್ರಮುಖ ವಿಧಿಯಾದ ಕಲಾವೃದಿಟಛಿ ಹವನ ಹಿರಿಯ ಅಗ್ನಿಹೋತ್ರಿ ವೇ.ಬಾಲಚಂದ್ರ ದೀಕ್ಷಿತ್, ವೇ.ಪ್ರಭಾಕರ ದೀಕ್ಷಿತ್, ಮುಖ್ಯ ಅರ್ಚಕ ವೇ.ಅರುಣ ದೇವತೆ ಮತ್ತು ವೈದಿಕರಿಂದ ಆಯೋಜಿತವಾಯಿತು. ರಾತ್ರಿ ತಾಂತ್ರಿಕರಾದ ವೇ. ಶ್ರೀನಿವಾಸ ಅಡಿ ಅವರಿಂದ ಗ್ರಾಮಬಲಿ ಸಂಪನ್ನವಾಯಿತು.

ಎರಡನೆಯ ದಿನವಾದ ಶನಿವಾರ ಪುಣ್ಯಾಹ, ಗಣೇಶ ಪೂಜೆ, ಅಗ್ನಿಜನನ ಮತ್ತಿತರ ವೇದೋಕ್ತ ವಿಧಿಗಳೊಂದಿಗೆ ಕ್ಷೇತ್ರದ ಋತ್ವಿಜರ ಮಾರ್ಗದರ್ಶನದಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ವೇ.ಉದಯ ಮಯ್ಯರ್ ದಂಪತಿ ಮತ್ತಿತರ ವೈದಿಕರು ಸಹಸ್ರಚಂಡಿಕಾ ಮಹಾಯಾಗದ ಶುಭಾರಂಭಕ್ಕೆ ಚಾಲನೆ ನೀಡಿದರು.

ಚತುರ್ವೇದ ಪಾರಾಯಣ

ಮಹಾಯಾಗದ ಮೂರನೇ ದಿನವಾದ ಭಾನುವಾರ ಚತುರ್ವೇದ ಪಾರಾಯಣ ಮತ್ತಿತರ ಧಾರ್ಮಿಕ ಕಾರ್ಯಗಳೊಂದಿಗೆ ಮಧ್ಯಾಹ್ನ ಸಮಗ್ರ ಸಹಸ್ರಚಂಡಿಕಾ ಮಹಾಯಾಗದ ಪೂರ್ಣಾಹುತಿ ಸಮರ್ಪಿತವಾಗುವುದು. ನಂತರದಲ್ಲಿ ಮಹಾಮಂಗಳಾರತಿ, ಸಾಮೂಹಿಕ ಪ್ರಾರ್ಥನೆ ಮತ್ತು ಪ್ರಸಾದ ವಿತರಣೆ ನಡೆಯುವುದು. ಮಹಾಯಾಗದ ನಿಮಿತ್ತ ಏರ್ಪಡಿಸಲಾದ ಸಾರ್ವಜನಿಕ ಅನ್ನ ಸಂತರ್ಪಣೆಯಲ್ಲಿ ಸಮಸ್ತ ಭಕ್ತರು ಪ್ರಸಾದ ಭೋಜನದಲ್ಲಿ ಭಾಗಿಗಳಾಗುವರು. ಪ್ರಸಾದ ಭೋಜನದಲ್ಲಿ 25 ಸಾವಿರಕ್ಕೂ ಹೆಚ್ಚಿನ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಇದಕ್ಕೆ ಸಮಿತಿಯಿಂದ ಸಕಲ ಸಿದಟಛಿತೆ ಮಾಡಿಕೊಳ್ಳಲಾಗಿದೆ. ಸಂಜೆ 5 ಗಂಟೆಯಿಂದ ಚತುರ್ವೇದ ಘೋಷ, ಶ್ರೀಮದ್ಭಗವದ್ಗೀತಾ ಪಠಣ, ದೇವತಾ ಭಜನೆ ಮತ್ತು ವಿಶೇಷ ವಾದ್ಯ, ವೈವಿಧ್ಯಪೂರ್ಣ ಕಲಾಮೇಳ ಸಹಿತವಾದ ಶ್ರೀಭದ್ರಕಾಳಿ ದೇವಿಯ ಪ್ರಥಮ ರಥಯಾತ್ರೆ ನಡೆಯಲಿದೆ.

ಗೋಕರ್ಣದಲ್ಲಿ ನಡೆಯುತ್ತಿರುವ ಸಹಸ್ರಚಂಡಿಕಾ ಮಹಾಯಾಗ ನಿಮಿತ್ತ ಶುಕ್ರವಾರ ರಾತ್ರಿ ಪುರೋಹಿತರ ನೇತೃತ್ವದಲ್ಲಿ ವೈದಿಕ ವಿದ್ವಾಂಸರಿಂದ ಅಪರೂಪದ ಶ್ರೀದುರ್ಗಾ ದೀಪ ನಮಸ್ಕಾರ ನಡೆಯಿತು.