

ಕಾರವಾರ: ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಮತ್ತು ಬಲ ನೀಡಿ ಕಾಯ್ದೆಗೆ ತಿದ್ದುಪಡಿ ಮಾಡುವಂತೆ ನಾವು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದೇವೆ ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣಿಂದ್ರ ತಿಳಿಸಿದರು.
ಅವರು ಬುಧವಾರ ಕಾರವಾರ ನಗರಸಭೆ ತ್ಯಾಜ್ಯ ವಿಲೇವಾರಿ ಘಟ ಸೇರಿ ವಿವಿಧೆಡೆ ಭೇಟಿ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ತಮ್ಮ ವ್ಯಾಪ್ತಿಗೆ ಬರುವ ಬಾಕಿ ಪ್ರಕರಣಗಳ ವಿಚಾರಣೆ ನಡೆಸಿದರು.
ಲೋಕಾಯುಕ್ತ ಸರ್ಕಾರಕ್ಕೆ ಶಿಫಾರಸು ಮಾಡುವ ಒಂದು ಸಂಸ್ಥೆಯಾಗಿದೆ. ಅಽಕಾರಿಗಳು ತಪು÷್ಪ ಮಾಡಿರುವುದು ಗೊತ್ತಾದರೂ ಕ್ರಮ ವಹಿಸುವ ಅಽಕಾರ ನಮಗಿಲ್ಲ. ಅಽಕಾರಿಗಳ ಮೇಲೆ ವಿಚಾರಣೆಗೆ ನಾವು ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಸರ್ಕಾರ ಅನುಮತಿ ನೀಡಿದ ಮೇಲೆ ನಾವು ಮುಂದುವರಿಯಬೇಕು. ಹಾಗಾಗಿ ಸ್ವಾಯತ್ತ ಅಽಕಾರ ನೀಡಿ ಎಂದು ನಾವು ಕೇಳಿದ್ದೇವೆ ಎಂದರು.
ಲೋಕಾಯುಕ್ತದಲ್ಲಿ ರಾಜ್ಯದಲ್ಲಿ 300 ಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಈ ಸಂಸ್ಥೆಗೆ ತನ್ನದೇ ಆದ ಅಧಿಕಾರಿ, ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಅಧಿಕಾರವಿಲ್ಲ. ಪೊಲೀಸ್ ಇಲಾಖೆಯಿಂದ ನಿಯೋಜನೆಯ ಮೇಲೆ ಅಽಕಾರಿಗಳು ಬರಬೇಕಾಗಿದೆ. ನಮ್ಮ ಪೊಲೀಸ್, ತಾಂತ್ರಿಕ ಹಾಗೂ ಆಡಳಿತಾತ್ಮಕ ವಿಭಾಗಗಳು ಘಟ್ಟಿಯಾಗಿದ್ದರೆ ಇನ್ನಷ್ಟು ತೀಕ್ಷ್ಣವಾಗಿ ಕಾರ್ಯ ನಿರ್ವಹಿಸಬಹುದು. ನಮ್ಮಲ್ಲೇ ದೋಷವಿದ್ದರೆ ಕಾರ್ಯನಿರ್ವಹಣೆ ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಅಧಿಕಾರಿ, ಸಿಬ್ಬಂದಿ ನೇಮಕಾತಿ ಅಽಕಾರವನ್ನು ನಮಗೇ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದೇವೆ ಎಂದು ಹೇಳಿದರು.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ಅಽಕಾರ ವಹಿಸಿಕೊಂಡ ನಂತರ ಸರ್ಕಾರದ ಜೊತೆ ನಿರಂತರ ಪತ್ರ ವ್ಯವಹಾರ ನಡೆಸಿದ್ದಾರೆ. ಪರಿಣಾಮ ಲೋಕಾಯುಕ್ತ ಕಾರ್ಯ ನಿರ್ವಹಣೆಗೆ ಬೇಕಾದಷ್ಟು ಅನುದಾನ ಬರುತ್ತಿದೆ. ಎಂಟ್ಹತ್ತು ಜಿಲ್ಲೆಗಳಲ್ಲಿ ಸ್ವಂತ ನಿವೇಶನವನ್ನೂ ನೀಡಲಾಗಿದೆ. ಇನ್ನು ಕೆಲವೆಡೆ ಉತ್ತಮ ಕಚೇರಿಯನ್ನು ವ್ಯವಸ್ಥೆ ಮಾಡಿಕೊಡಲಾಗಿದೆ. ಎಸಿಬಿ ರದ್ದಾದ ನಂತರ ಭ್ರಷ್ಟಾಚಾರಿ ಅಽಕಾರಿಗಳ ಮೇಲೆ ದಾಳಿ ನಡೆಸುವ ಅಧಿಕಾರವೂ ಲೋಕಾಯುಕ್ತಕ್ಕೆ ಸಿಕ್ಕಿದ್ದು, ಸ್ವಲ್ಪ ಬಲ ಬಂದAತಾಗಿದೆ ಎಂದರು.
ಶೇ.10 ರಷ್ಟು ಮಾತ್ರ ಶಿಕ್ಷೆ
ಲೋಕಾಯುಕ್ತದಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಶೇ.10 ರಿಂದ 15 ರಷ್ಟಕ್ಕೆ ಮಾತ್ರ ಶಿಕ್ಷೆಯಾಗುತ್ತದೆ. ಅದಕ್ಕೆ ಹಲವು ಕಾರಣಗಳಿವೆ ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣಿಂದ್ರ ಹೇಳಿದರು.
ದೂರು ಕೊಡುವಾಗ ಇದ್ದ ಉತ್ಸಾಹ ವಿಚಾರಣೆಗೆ ಹಾಜರಾಗುವ ಹಂತದಲ್ಲಿ ದೂರುದಾರರಿಗೆ ಇರುವುದಿಲ್ಲ. ಹಾಗಾಗಿ ಜನರೂ ನಮ್ಮ ಜೊತೆ ಸಹಕಾರ ನೀಡಬೇಕು. ಕೆಲವು ಪ್ರಕರಣಗಳು ಸುಳ್ಳು ಆರೋಪಗಳಾಗಿರುತ್ತವೆ. ಅಲ್ಲದೇ (ಶಿಕ್ಷೆಯಾಗುವ ಪ್ರಮಾಣ) ಕನ್ವಿಕ್ಷನ್ ರೇಟ್ ಇನ್ನೂ ಹಲವು ಕಾರಣಗಳಿವೆ ಎಂದರು.