ದೈನಂದಿನ ವ್ಯವಹಾರದಲ್ಲಿ ಇಂಗ್ಲಿಷ್ ಬಿಟ್ಟು ಕನ್ನಡ ಪದ ಬಳಕೆ ಹೆಚ್ಚಲಿ

ರಾಜ್ಯ ಕದಂಬ ಸೈನ್ಯ ಅಧ್ಯಕ್ಷ ಬೇಕ್ರಿ ರಮೇಶ ಅಭಿಪ್ರಾಯ ಕನ್ನಡ ರಾಜ್ಯೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ
H.R. Srisha, G.U. Bhat, Narasimha Sathoddi and Manjunatha Eragoppa were presented with the awards at a ceremony organized at the Patrika Bhavan in Sirsi on Monday. Shivarama Hebbar, Bhimanna Nayak and Srinivas Hebbar were present.
ಶಿರಸಿಯ ಪತ್ರಿಕಾ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಎಚ್.ಆರ್. ಶ್ರೀಶ, ಜಿ.ಯು.ಭಟ್, ನರಸಿಂಹ ಸಾತೊಡ್ಡಿ ಹಾಗೂ ಮಂಜುನಾಥ ಈರಗೊಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿವರಾಮ ಹೆಬ್ಬಾರ, ಭೀಮಣ್ಣ ನಾಯ್ಕ, ಶ್ರೀನಿವಾಸ ಹೆಬ್ಬಾರ ಇದ್ದರು.
Published on: 

ಸಿದ್ದಾಪುರ: ದೈನಂದಿನ ವ್ಯವಹಾರದಲ್ಲಿ ಇಂಗ್ಲಿಷ್ ಪದಗಳನ್ನು ಬಿಟ್ಟು ಕನ್ನಡ ಪದಗಳನ್ನು ಬಳಸುವ ಮೂಲಕ ನಮ್ಮ ಭಾಷೆೆಯನ್ನು ಉಳಿಸಿ ಬೆಳೆಸಬೇಕು. ಜಾತಿ-ಪಂಗಡಗಳ ಸಂಕೋಲೆಯಿಂದ ಹೊರಬಂದು, ಮೊದಲು ನಾವು ಕನ್ನಡಿಗರು ಎಂಬ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಾಗ ಮಾತ್ರ ಕನ್ನಡತನ ಜಾಗೃತವಾಗುತ್ತದೆ ಎಂದು ರಾಜ್ಯ ಕದಂಬ ಸೈನ್ಯ ಕನ್ನಡ ಸಂಘಟನೆ ಅಧ್ಯಕ್ಷ ಬೇಕ್ರಿ ರಮೇಶ ಹೇಳಿದರು.

ತಾಲೂಕಿನ ಭುವನಗಿರಿಯ ಭುವನೇಶ್ವರಿ ದೇವಸ್ಥಾನದ ಆವರಣದಲ್ಲಿ ಮಂಡ್ಯದ ಕದಂಬ ಸೈನ್ಯ ಕನ್ನಡ ಸಂಘಟನೆಯಿಂದ ಶುಕ್ರವಾರ ಆಯೋಜಿಸಿದ್ದ 19ನೇ ವರ್ಷದ ಕನ್ನಡ ರಾಜ್ಯೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಟೆಲಿಕಾಂ ಎಂಪ್ಲಾಯೀಸ್ ವೆಲ್ಫೇರ್ ಅಸೋಸಿಯೇಷನ್ ಸಂಸ್ಥಾಪಕ ಅಧ್ಯಕ್ಷ ಡಾ. ಎನ್. ನರಸಿಂಹಮೂರ್ತಿ, ಪಾಲಕರು ಮಕ್ಕಳಿಗೆ ಅತಿಯಾದ ಆಸ್ತಿ ಮಾಡಿಕೊಡುವ ಬದಲು ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕು. ಇಂದಿನ ಮೊಬೈಲ್ ಯುಗದಲ್ಲಿ ಮನುಷ್ಯರ ನಡುವಿನ ಬಾಂಧವ್ಯ ಕಡಿಮೆಯಾಗುತ್ತಿದ್ದು, ಎಲ್ಲವನ್ನೂ ಬದಿಗಿಟ್ಟು ಕನ್ನಡದ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಮುಖ್ಯ ಎಂದರು. ಉದಯಕುಮಾರ್ ಕಾನಳ್ಳಿ ಮಾತನಾಡಿ, ಕದಂಬರ ರಾಜಧಾನಿ ಬನವಾಸಿ ಮತ್ತು ಭುವನಗಿರಿ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಬೆಳಗಾವಿ ಮಾತ್ರವಲ್ಲದೆ, ಇದೀಗ ಗೋವಾದವರು ಕಾರವಾರವನ್ನು ಕೇಳುವ ಮಟ್ಟಕ್ಕೆ ಬಂದಿದ್ದು, ಮಾಜಾಳಿ ಭಾಗ ಗೋವಾಮಯವಾಗುತ್ತಿದೆ. ಗಡಿ ಉಳಿವಿಗಾಗಿ ಹೋರಾಟ ಆರಂಭಿಸಬೇಕಿದೆ ಎಂದು ಎಚ್ಚರಿಸಿದರು.ಮೈಸೂರು ಎನ್‌ಐಇ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಕುಲಸಚಿವ ಡಾ. ಶಿವರುದ್ರಪ್ಪ, ಹಾವೇರಿಯ ನಿವೃತ್ತ ಪ್ರಾದೇಶಿಕ ಸಾರಿಗೆ ಅಧಿಕಾರಿ ಷಣ್ಮುಖಪ್ಪ ಹನುಮಂತಪ್ಪ ಹಡಗದ ಹಾದ್ರಿಹಳ್ಳಿ, ದೇವಸ್ಥಾನದ ಉಪಾಧ್ಯಕ್ಷ ಸಿ. ಎನ್. ಹೆಗಡೆ, ಗಂಗಾಧರ ಕೊಳಗಿ, ನಾಗರಾಜ ಭಟ್ಟ ಹಾಗೂ ಕನ್ನಡ ಸೈನ್ಯದ ವಿವಿಧ ಜಿಲ್ಲೆಯ ಪದಾಧಿಕಾರಿಗಳಿದ್ದರು.

ಪ್ರಶಸ್ತಿ ಪ್ರದಾನ: ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪತ್ರಕರ್ತರಾದ ನಿತಿನ್ ಹೆಗಡೆ ಮುತ್ತಿಗೆ, ಗಣೇಶಭಟ್ಟ ಹೊಸೂರು, ಸುಜಯ್ ಪಿ. ಭಟ್ ಮುತ್ತಿಗೆ, ನಾಟಕಕರ್ತ ಮಾಧವ ಶರ್ಮಾ ಕಲಗಾರು, ಆಶಾ ಕಾರ್ಯಕರ್ತೆ ಹಾಲಮ್ಮ ಪಾಂಡುರಂಗ ನಾಯ್ಕ, ಕಲಾವಿದ ಗಣಪತಿ ಹೆಗಡೆ ಗುಂಜಗೋಡ, ರಾಘವೇಂದ್ರ ನಾಯ್ಕ , ಯಕ್ಷಗಾನ ಕಲಾವಿದೆ ಶುಭಾ ರಮೇಶ ಲಕ್ಕಿಚಡ್ಡಿ, ಗಾಯಕರಾದ ಸುಧೀರ ಸುರೇಶ ನಾಯಕ ಬೇಂಗ್ರೆ, ಸುಮಿತ್ರಾ ಶೇಟ್, ವಾಜಗದ್ದೆಯ ದುರ್ಗಾ ವಿನಾಯಕ ಕೃಷಿಕ ಯುವಕ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಪ್ರಗತಿಪರ ರೈತ ತಿಮ್ಮೇಗೌಡ ಹುಲ್ಲಕೆರೆ, ಪುರುಷೋತ್ತಮ ರಾಗಿಮುದ್ದನಹಳ್ಳಿ, ಡಾ. ಸುರೇಶ ಕುಮಾರ ರಾಜಗುರು, ಅರ್ಜುನ ಜಿ. ಲಮಾಣಿ, ಚೆನ್ನು ಜಿ. ಕಟ್ಟಿಮನಿ, ಶಂಕರ ಎಂ. ಜಲ್ಲಿ, ಪ್ರಕೃತಿ ಪ್ರಿಯ ಡಾ. ಶ್ರೀನಿವಾಸಮೂರ್ತಿ, ವಿಜಯಕುಮಾರ್, ಆರ್. ಶಾಂತ ಹಾಗೂ ಬೆಟ್ಟ ಹಲಸೂರು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುಧೀರ ಬೇಂಗ್ರೆ ಪ್ರಾರ್ಥಿಸಿದರು. ಸುಧಾರಾಣಿ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.