ಗೋಕರ್ಣ ಸಮುದ್ರದಲ್ಲಿ ಎಂಟು ಪ್ರವಾಸಿಗರ ರಕ್ಷಣೆ tourists rescued
ಗೋಕರ್ಣದ ಮುಖ್ಯ ಸಮುದ್ರ ತೀರದಲ್ಲಿ( tourists rescued) ಶನಿವಾರ ಮಧ್ಯಾಹ್ನ ಜೀವ ರಕ್ಷಕ ಸಿಬ್ಬಂದಿಯಿಂದ ಉಳಿಸಲ್ಪಟ್ಟ ನಾಲ್ವರು ಚಿತ್ರದುರ್ಗದ ಪ್ರವಾಸಿಗರು.
Published on:
Copied
Follow Us
ಗೋಕರ್ಣ: ಇಲ್ಲಿನ ಮುಖ್ಯ ಸಮುದ್ರ ತೀರದಲ್ಲಿ ಶನಿವಾರ ಮಧ್ಯಾಹ್ನ ಹತ್ತು ನಿಮಿಷದ ಅಂತರದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಯಲ್ಲಿ ಸಮುದ್ರದಲ್ಲಿ ಈಜಲು ತೆರಳಿ ಅಪಾಯಕ್ಕೆ ಸಿಲುಕಿದ್ದ ಎಂಟು ಪ್ರವಾಸಿಗರನ್ನು( tourists rescued )ಕರ್ತವ್ಯದಲ್ಲಿದ್ದ ಜೀವ ರಕ್ಷಕ ಸಿಬ್ಬಂದಿ ಉಳಿಸಿ ಮೇಲಕ್ಕೆ ತಂದು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕೊಪ್ಪಳದವರು: ಮಧ್ಯಾಹ್ನ 3.20ಕ್ಕೆ ನಡೆದ ಮೊದಲ ಘಟನೆಯಲ್ಲಿ ಪ್ರವಾಸಕ್ಕೆ ಬಂದಿದ್ದ ಕೊಪ್ಪಳದ 12 ಜನರ ಪೈಕಿ ಅಭಿಷೇಕ ಹನುಮಂತ ವಳಗೇರಿ (21), ಹುಸೇನ್‌ಸಾಬ್ (18), ಶಿವರಾಜ ಮರಿಯಪ್ಪ ಯಾಟಿ (18) ಮತ್ತು ಮುತ್ತುರಾಜ ಮೈಲಾರಪ್ಪ ಕೊಡಲಗಿ (24) ಜೀವಾಪಾಯದಿಂದ ಪಾರಾಗಿದ್ದಾರೆ.
ಚಿತ್ರದುರ್ಗದವರು: ಮಧ್ಯಾಹ್ನ 3.30ರ ಸುಮಾರಿಗೆ ನಡೆದ ಘಟನೆಯಲ್ಲಿ ಚಿತ್ರದುರ್ಗದ 17 ಪ್ರವಾಸಿಗರ ಪೈಕಿ ಅವಿನಾಶ ತಿಪ್ಪೇಸ್ವಾಮಿ (20), ರಘು ಚಳ್ಳೆಕೆರೆ (21), ಅಜಯ್ ಗಂಗಪ್ಪ ಚಳ್ಳೆಕೆರೆ (26) ಮತ್ತು ಅಶ್ವತ್ಥ್ (14) ರಕ್ಷಿತರು.
ಬೀಚ್ ಕರ್ತವ್ಯದಲ್ಲಿದ್ದ ಮೋಹನ ಅಂಬಿಗ, ಶಿವಪ್ರಸಾದ ಅಂಬಿಗ, ರೋಷನ್ ಖಾರ್ವಿ, ಶೇಖರ ಹರಿಕಂತ್ರ, ಕಮಲಾಕರ ಹೊಸ್ಕಟ್ಟ, ದೀಪಕ ಗೌಡ, ಚಿದಾನಂದ ಲಕ್ಕುಮನೆ, ಮಹಾಬಲೇಶ್ವರ ಲಕ್ಕುಮನೆ, ಜಗ್ಗು ಹೊಸ್ಕಟ್ಟ ಮತ್ತು ದರ್ಶನ ಹರಿಕಂತ್ರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.