ವಿದ್ಯುತ್​ ಪ್ರವಹಿಸಿ ಒಂಟಿ ಸಲಗ ಸಾವು

ಹೊಲಕ್ಕೆ ಅನಧಿಕೃತವಾಗಿ ಹಾಕಿದ್ದ ತಂತಿ ಸ್ಪಶಿರ್ಸಿದ ಗಂಡಾನೆ ಮಳಲಗಾಂವನಲ್ಲಿ ಘಟನೆ
A lone wolf died after being struck by an illegal electric wire in Malalgaon village, Sirsi.
ಶಿರಸಿ ಮಳಲಗಾಂವ ಗ್ರಾಮದಲ್ಲಿ ಅಕ್ರಮ ವಿದ್ಯುತ್​ ತಂತಿ ತಾಗಿ ಒಂಟಿ ಸಲಗ ಮೃತಪಟ್ಟಿರುವುದು.
Published on: 

ಶಿರಸಿ: ಹೊಲಕ್ಕೆ ಕಾಡು ಪ್ರಾಣಿಗಳಿಂದ ರಕ್ಷಣೆ ಪಡೆಯುವ ಸಲುವಾಗಿ ಅನಧಿಕೃತವಾಗಿ ಹಾಕಲಾಗಿದ್ದ ವಿದ್ಯುತ್​ ತಂತಿಯನ್ನು ಸ್ಪಶಿರ್ಸಿ ಒಂಟಿ ಸಲಗವೊಂದು ಮೃತಪಟ್ಟಿರುವ ಘಟನೆ ತಾಲೂಕಿನ ಮಳಲಗಾಂವನಲ್ಲಿ ಗ್ರಾಮದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.

ಮಳಲಗಾಂವ ಗ್ರಾಮದ ಮಾಲ್ಕಿ ಸರ್ವೇ ನಂ. 72/1 ರಲ್ಲಿ ಭತ್ತದ ಗದ್ದೆಯ ಸುತ್ತ ಹಾಕಲಾಗಿದ್ದ ತಂತಿ ಬೇಲಿಗೆ ಅನಧಿಕೃತವಾಗಿ ನೇರ ವಿದ್ಯುತ್​ ಸಂಪರ್ಕ ನೀಡಲಾಗಿತ್ತು. ಅಂದಾಜು 20ರಿಂದ 22 ವರ್ಷ ವಯಸ್ಸಿನ ಗಂಡಾನೆ ಸ್ಪಶಿರ್ಸಿ ಆಘಾತಕ್ಕೀಡಾಗಿ ಮೃತಪಟ್ಟಿದೆ. ಪ್ರಕರಣದಲ್ಲಿ ಅನುಮಾನಾಸ್ಪದ ವ್ಯಕ್ತಿಗಳಾದ ಮಳಲಗಾಂವನ ಶಿವಪ್ಪ ಬಂಗಾರ್ಯ ನಾಯ್ಕ (75) ಹಾಗೂ ನಾಗರಾಜ ಶಿವಪ್ಪ ನಾಯ್ಕ ಮಳಲಗಾಂವ (43) ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ವಿದ್ಯುತ್​ ಸಂಪರ್ಕಕ್ಕೆ ಬಳಸಿದ ವಿದ್ಯುತ್​ ತಂತಿಯನ್ನು ಅರಣ್ಯ ಇಲಾಖೆ ಜಪ್ತಿ ಮಾಡಿದೆ. ಕೆನರಾ ಮುಖ್ಯ ಅರಣ್ಯ ಸಂರಣಾಧಿಕಾರಿ ಟಿ. ಹೀರಾಲಾಲ, ಡಿಎಫ್​ಒ ಸಂದೀಪ ಸೂರ್ಯವಂಶಿ, ಸಹಾಯಕ ಅರಣ್ಯ ಸಂರಣಾಧಿಕಾರಿ ಅಮಿತ್​ ಚೌಹಾಣ, ವಲಯಾರಣ್ಯಾಧಿಕಾರಿ ಕಾತಿರ್ಕ ಕಂಬಳಿ, ಇತರರು ಸ್ಥಳಕ್ಕೆ ಆಗಮಿಸಿ ಪ್ರಕರಣದ ತನಿಖೆ ನಡೆಸಿದ್ದಾರೆ.

ಗುರಿ ಹಂದಿ, ಸತ್ತಿದ್ದು ಸಲಗ

ಬೆಳೆ ರಕ್ಷಣೆ, ವಿಶೇಷವಾಗಿ ಹಂದಿಗಳ ಕಾಟ ತಡೆಯಲು ರೈತರು ಐಬೆಕ್ಸ್​ ವಿದ್ಯುತ್​ ಬೇಲಿಗಳನ್ನು ನಿಮಿರ್ಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ, ಮಳಲಗಾಂವನಲ್ಲಿ ನಡೆದ ಆನೆ ಸಾವಿಗೆ ಮನೆ ಬಳಕೆಯ ವಿದ್ಯುತ್​ಅನ್ನು ನೇರವಾಗಿ ಬೆಳೆ ರಣೆಯ ಬೇಲಿಗೆ ಸಂಪಕಿರ್ಸಿದ್ದೇ ಕಾರಣ ಎಂಬ ಮಾತು ಕೇಳಿಬಂದಿದೆ.

ವನ್ಯಜಿವಿಗಳ ಸಂರಕ್ಷಣೆ ದೃಷ್ಟಿಯಿಂದ ಕೃಷಿ ಜಮೀನುಗಳಿಗೆ ಅಕ್ರಮವಾಗಿ ವಿದ್ಯುತ್​ ಸಂಪರ್ಕ ಜೋಡಿಸದಂತೆ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ. ಒಂದು ವೇಳೆ ಅಕ್ರಮವಾಗಿ ವಿದ್ಯುತ್​ ಸಂಪರ್ಕದಿಂದ ಕೃಷಿ ಜಮೀನಿನಲ್ಲಿ ವನ್ಯಜಿವಿಗಳು ಮೃತಪಟ್ಟಲ್ಲಿ ಸಂಬಂಧಪಟ್ಟವರನ್ನೇ ಜವಾಬ್ದಾರರನ್ನಾಗಿಸಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನುಗಳಡಿ ಕಠಿಣ ಕಾನೂನುಕ್ರಮ ಜರುಗಿಸಲಾಗುತ್ತದೆ ಎಂದು ಡಿಎ್​ಒ ಸಂದೀಪ ಸೂರ್ಯವಂಶಿ ತಿಳಿಸಿದ್ದಾರೆ.