

ಹರಿಹರ: ಮಲೆನಾಡು ಸೇರಿದಂತೆ ಇತರೆಡೆ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಹರಿಹರದ ಜೀವ ನದಿ ತುಂಗಭದ್ರಾ ಮೈತುಂಬಿ ಹರಿಯುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.
ಕಳೆದೊಂದು ವರ್ಷದಿಂದ ಬಂಜರು ಭೂಮಿಯಂತಿದ್ದ ಇಲ್ಲಿನ ತುಂಗಭದ್ರಾ ನದಿ ಮುಂಗಾರು ಮಳೆಯ ಅಬ್ಬರಕ್ಕೆ ಶುಕ್ರವಾರ ಮೈದುಂಬಿ ಹರಿಯುವ ರಮಣೀಯ ದೃಶ್ಯ ನೋಡಲು ಆಕಷರ್ಣೀಯವಾಗಿದೆ.
ತುಂಗಭದ್ರಾ ಸೇತುವೆಯ 12 ಕಣ್ಣುಗಳು ತುಂಬಿಕೊಂಡು ಹರಿಯುತ್ತಿದ್ದು, ರಾಘವೇಂದ್ರ ಮಠ ಹಾಗೂ ಸ್ವಾಮಿ ಅಯ್ಯಪ್ಪ ದೇವಸ್ಥಾನದ ಸಮೀಪದಲ್ಲಿ ನದಿಯನ್ನು ನೋಡಲು ಕುಟುಂಬ ಸದಸ್ಯರೊಂದಿಗೆ ಆಗಮಿಸುತ್ತಿದ್ದಾರೆ.