ಭಾರತದ ಆತ್ಮ ಆಧ್ಯಾತ್ಮ

 "ಸಿದ್ದಗಂಗಾ ಹಿಂದೂ ಸಮಾಜೋತ್ಸವದಲ್ಲಿ  ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ,ಬಿ.ಎಲ್​.ಸಂತೋಷ್​, ಇಂದಿರಮ್ಮ, ಎಚ್​.ಜಿ.ಚಂದ್ರಶೇಖರ್​ ಉಪಸ್ಥಿತರಿದ್ದರು.
"ಸಿದ್ದಗಂಗಾ ಹಿಂದೂ ಸಮಾಜೋತ್ಸವದಲ್ಲಿ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ,ಬಿ.ಎಲ್​.ಸಂತೋಷ್​, ಇಂದಿರಮ್ಮ, ಎಚ್​.ಜಿ.ಚಂದ್ರಶೇಖರ್​ ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿದ್ದಗಂಗಾ ಹಿಂದೂ ಸಮಾಜೋತ್ಸವ
  • ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ
  • ಪ್ರತಿಯೊಬ್ಬರಲ್ಲು ಹಿಂದೂ ಎಂಬ ಭಾವನೆ ಮೂಡಬೇಕು
ತುಮಕೂರು: ಭಾರತದ ಆತ್ಮ ಅಧ್ಯಾತ್ಮ. ಆಧ್ಯಾತ್ಮದ ಗುರುಗಳು ನಮಗೆಲ್ಲರಿಗೂ ಜ್ಞಾನವನ್ನು ಉಣಬಡಿಸಿದ್ದಾರೆ ಎಂದು ಸಿದ್ದಗಂಗಾಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ನಗರದ ಎಸ್​ಐಟಿ ಬಿರ್ಲಾ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ "ಸಿದ್ದಗಂಗಾ ಹಿಂದೂ ಸಮಾಜೋತ್ಸವದಲ್ಲಿ ಮಾತನಾಡಿದ ಅವರು, ಭಾರತೀಯರ ಆತ್ಮವಾಗಿರುವ ಆಧ್ಯಾತ್ಮ ಜಗತ್ತಿಗೆ ಶಾಂತಿಯನ್ನು ನೀಡಿದೆ,. ಭಾರತೀಯರ ಜ್ಞಾನದ ಪರಂಪರೆಯ ತಳಹದಿ ವೇದ, ಉಪನಿಷತ್ತು, ಪುರಾಣಗಳು, ಶರಣರ ವಚನಗಳು, ದಾಸರ ವಾಣಿಗಳು ಸೇರಿದಂತೆ ಧರ್ಮಗ್ರಂಥಗಳಾಗಿವೆ. ಸಿಂಧೂ ನದಿಯ ನಾಗರೀಕತೆಯಲ್ಲಿ ಹಿಂದೂಗಳ ಆಚರಣೆ, ಪದ್ಧತಿ ಬಗ್ಗೆಯೂ ಉಲ್ಲೇಖವಿರುವುದು ಧರ್ಮದ ಇತಿಹಾಸವನ್ನು ತಿಳಿಸುತ್ತಿದೆ ಎಂದರು.
ಸ್ವಾಮಿ ವಿವೇಕಾನಂದರು, ಡಾ.ಶಿವಕುಮಾರಸ್ವಾಮೀಜಿಗಳು ಜಗತ್ತಿನ ನಾಗರೀಕತೆಗಳು ತೊದಲುತಿದ್ದಾಗ, ಸಂಸತಿ ಅಲ್ಲಲ್ಲಿ ಕಣ್ತೆರೆಯುತ್ತಿದ್ದಾಗ ಭಾರತದಲ್ಲಿ ನಾಗರಿಕತೆಯ ದಿವ್ಯ ಭಾಸ್ಕರ ಉದಯಿಸಿ ಜಗತ್ತಿಗೆ ಬೆಳಕು ನೀಡಿರುವ ಬಗ್ಗೆ ಸಾಕಷ್ಟು ಸಲ ಉಲ್ಲೇಖಿಸಿದ್ದು ಜಗತ್ತಿಗೆ ನಾಗರೀಕತೆ, ಸಂಸತಿ, ಜ್ಞಾನವನ್ನು ತಿಳಿಸಿದಂತಹ ಏಕೈಕ ರಾಷ್ಟ್ರ ಭಾರತ ಎಂದು ಹೇಳಿದರು.
ಹಿಂದೂ ಸಮಾಜದ ನಂಬಿಕೆ ಇರುವುದು ಮಾನವೀಯ ಧರ್ಮದಲಿ. ದೇಶದ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಲ್ಲಿ ನಾನು ಮೊದಲು ಭಾರತೀಯ, ನಾನು ಹಿಂದೂ ಎಂಬ ಭಾವನೆ ಮೂಡಬೇಕು. ನಾವು ಭಾರತೀಯರು ಎಲ್ಲರನ್ನೂ ಸಮಾನರೆಂದು ಕಾಣುತ್ತಿದ್ದೇವೆ. ಧರ್ಮದ ಅರ್ಥ ಬಹಳ ವಿಶಾಲವಾಗಿದೆ. ಯಾವುದು ಸಮಸ್ತ ಪ್ರಜೆಗಳನ್ನು ಧರಿಸಿ ಸಂರಕ್ಷಿಸುತ್ತದೋ ಅದೇ ಧರ್ಮ. ತಂದೆ, ತಾಯಿಯರನ್ನು, ಗುರು-ಹಿರಿಯರನ್ನು ಗೌರವಿಸುವುದು ಧರ್ಮ ಎಂದು ಶ್ರೀಗಳು ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್​.ಸಂತೋಷ್​, ಸಮಾಜ ಸೇವಕಿ ಇಂದಿರಮ್ಮ, ಎಚ್​.ಜಿ.ಚಂದ್ರಶೇಖರ್​ ಉಪಸ್ಥಿತರಿದ್ದರು.
ಹಿಂದೂಗಳು ಎಂದು ಅಭಿಮಾನದಿಂದ ಹೇಳಿಕೊಳ್ಳಬೇಕು, ಜನರ ಬದುಕಿನ ರೀತಿ, ನೀತಿಗಳೇ ಹಿಂದೂ ಎನ್ನಿಸಿಕೊಂಡಿದ್ದು ಜನರ ವೈವಿಧ್ಯಮಯ ಜೀವನ ಪದ್ಧತಿ, ನಂಬಿಕೆ, ಹಬ್ಬ, ಹರಿದಿನ, ಆಚರಣೆ, ವೇಷಭೂಷಣಗಳಾಗಿವೆ. ಧರ್ಮ ಎಂಬುದಕ್ಕೆ ಚೌಕಟ್ಟು ಹಾಕಿಕೊಳ್ಳುವುದು ಬೇಡ. ದೇಶದ ಸಕಲಚರಚರ, ಪ್ರಾಣಿಗಳು ಹಿಂದೂ ಆಚರಣೆಯಲ್ಲಿವೆ.
ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ
ಸಿದ್ದಗಂಗಾಮಠದ ಕಿರಿಯ ಶ್ರೀ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net