ಗಾಂಧೀಜಿ ವಿಚಾರಧಾರೆ ಕೊಲ್ಲುವ ಪ್ರಯತ್ನ

ತುಮಕೂರಿನಲ್ಲಿ ಗಾಂಧಿವಾದಿ ಎಂ.ಬಸವಯ್ಯ ವಿರಚಿತ "ನನ್ನ ಸತ್ಯಾನ್ವೇಷಣೆ' ಹಾಗೂ ಎಚ್​.ಎಸ್​.ಸುರೇಶ್​ ಅವರ "ಫಾತಕ ಲೋಕದಿಂದ ಗಾಂಧಿಯಾನದೆಡೆಗೆ' ಕೃತಿಗಳನ್ನು ನಾಡೋಜ ವೂಡೇ ಪಿ.ಕೃಷ್ಣ  ಬಿಡುಗಡೆಗೊಳಿಸಿದರು. ಎಂ.ಬಸವಯ್ಯ, ಪ್ರೊ.ಜಿ.ಬಿ.ಶಿವರಾಜು, ಮುರಳೀಧರಹಾಲಪ್ಪ, ಸಿ.ಯತಿರಾಜು, ಭಾಗ್ಯಮ್ಮ ಮತ್ತಿತರರು ಇದ್ದರು.
ತುಮಕೂರಿನಲ್ಲಿ ಗಾಂಧಿವಾದಿ ಎಂ.ಬಸವಯ್ಯ ವಿರಚಿತ "ನನ್ನ ಸತ್ಯಾನ್ವೇಷಣೆ' ಹಾಗೂ ಎಚ್​.ಎಸ್​.ಸುರೇಶ್​ ಅವರ "ಫಾತಕ ಲೋಕದಿಂದ ಗಾಂಧಿಯಾನದೆಡೆಗೆ' ಕೃತಿಗಳನ್ನು ನಾಡೋಜ ವೂಡೇ ಪಿ.ಕೃಷ್ಣ ಬಿಡುಗಡೆಗೊಳಿಸಿದರು. ಎಂ.ಬಸವಯ್ಯ, ಪ್ರೊ.ಜಿ.ಬಿ.ಶಿವರಾಜು, ಮುರಳೀಧರಹಾಲಪ್ಪ, ಸಿ.ಯತಿರಾಜು, ಭಾಗ್ಯಮ್ಮ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನನ್ನ ಸತ್ಯಾನ್ವೇಷಣೆ ಪುಸ್ತಕ ಬಿಡುಗಡೆ
  • ಮಹಾತ್ಮ ವಿರುದ್ಧ ನಿರಂತರ ಅಪಪ್ರಚಾರ
  • ನಾಡೋಜ ವೂಡೇ ಪಿ.ಕೃಷ್ಣ
ತುಮಕೂರು: ಮಹಾತ್ಮ ಗಾಂಧೀಜಿ ವಿರುದ್ಧ ನಿರಂತರ ಅಪಪ್ರಚಾರ ಮಾಡಲಾಗುತ್ತಿದ್ದು ಗಾಂಧಿಯನ್ನುಕೊಂದಂತೆ, ಗಾಂಧೀಜಿ ವಿಚಾರಧಾರೆಗಳನ್ನು ಕೊಲ್ಲುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಬೆಂಗಳೂರು ಗಾಂಧಿ ಭವನದ ಅಧ್ಯಕ್ಷ ನಾಡೋಜ ವೂಡೇ.ಪಿ.ಕೃಷ್ಣ ಬೇಸರ ವ್ಯಕ್ತಪಡಿಸಿದರು.
ನಗರದ ರವೀಂದ್ರಕಲಾನೀಕೇತನದಲ್ಲಿ ಆಯೋಜಿಸಿದ್ದ ಸವೋರ್ದಯ ದಿನಾಚರಣೆ, ಮಹಾತ್ಮಗಾಂಧಿ ಆತ್ಮಕಥನ ನನ್ನ ಸತ್ಯಾನ್ವೇಷಣೆ ಮಹಾಕೃತಿಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಗಾಂಧಿವಾದಿ ಎಂ.ಬಸವಯ್ಯ ವಿರಚಿತ "ನನ್ನ ಸತ್ಯಾನ್ವೇಷಣೆ' ಹಾಗೂ ಎಚ್​.ಎಸ್​.ಸುರೇಶ್​ ಅವರ "ಫಾತಕ ಲೋಕದಿಂದ ಗಾಂಧಿಯಾನದೆಡೆಗೆ' ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಇಡೀ ವಿಶ್ವ ಮಹಾತ್ಮ ಗಾಂಧಿಯವರನ್ನು ಸತ್ಯ ಮತ್ತು ಅಹಿಂಸೆಯ ಪ್ರತಿರೂಪವಾಗಿ ನೋಡುತ್ತಿದೆ ಎಂದರು.
ಯುವಜನರು ಇತಿಹಾಸದ ಅರಿವಿನ ಕೊರತೆಯಿಂದ ಸತ್ಯ, ಸುಳ್ಳುಗಳ ವಿಮರ್ಶೆ ಮಾಡದೆ ನಡೆದು ಕೊಳ್ಳುತ್ತಿದ್ದಾರೆ. ಇಂತಹ ಯುವಜನರಿಗೆ ಎಂ.ಬಸವಯ್ಯಅವರು ಬರೆದಿರುವ ನನ್ನ ಸತ್ಯಾನ್ವೇಷಣೆ ಕೃತಿ ಗಾಂಧಿಜೀಯ ಬದುಕಿನ ವಿವಿಧ ಮಜಲುಗಳನ್ನು ತೋರಿಸಲಿದೆ. ಗಾಂಧೀಜಿಯ ಆತ್ಮಚರಿತ್ರೆ ಮೈ ಎಕ್ಸ್​ಪೆರಿಮೆಂಟ್​ ಆಫ್​ ಟ್ರೂಥ್​ ನಂತಹ ಮತ್ತೊಂದು ಕೃತಿ ಇದುವರೆಗೂ ಬಂದಿಲ್ಲ. ಡಾ.ಬಿ.ಆರ್​.ಅಂಬೇಡ್ಕರ್​ ಅವರು ಬರೆದ ಸಂವಿಧಾನ ಕಾನೂನಿನ ಪಾಠ ಮಾಡಿದರೆ, ಗಾಂಧೀಜಿ ಅವರ ಈ ಕೃತಿ ಜನರಿಗೆ ನೈತಿಕತೆಯ ಪಾಠ ಹೇಳಲಿದೆ ಎಂದು ತಿಳಿಸಿದರು.
ಗಾಂಧಿ ವಿಚಾರೆಧಾರೆಗಳಿಗೆ ಸಾವಿಲ್ಲ: ಗಾಂಧಿಯನ್ನು ದೈಹಿಕವಾಗಿ ಕೊಲ್ಲಲಾಗಿದೆಯೇ ಹೊರತು, ಗಾಂಧಿಯ ವಿಚಾರಧಾರೆಗಳಿಗೆ ಎಂದಿಗೂ ಸಾವಿಲ್ಲ. ಇಡೀ ಪ್ರಪಂಚವೇ ಗಾಂಧಿ ಮಾರ್ಗದಲ್ಲಿ ನಡೆಯಲು ಉತ್ಸುಕವಾಗಿದೆ. ಮೂಲಭೂತವಾದ, ಹಿಂಸಾವಾದ ಮತ್ತು ಕೋಮುವಾದ ಇವುಗಳ ವಿರುದ್ಧ ಭಾರತೀಯರು ಹೋರಾಟ ರೂಪಿಸಬೇಕಿದೆ. ವಿಜ್ಞಾನ ಮತ್ತು ಆಧ್ಯಾತ್ಮವನ್ನು ಒಗ್ಗೂಡಿಸುವ ಕೆಲಸ ಆಗಬೇಕಿದೆ. ಆಧ್ಯಾತ್ಮರಹಿತ ವಿಜ್ಞಾನ ಭೂಮಿಯ ನಾಶಕ್ಕೆ ಕಾರಣವಾಗಬಹುದು ಎಂಬ ಗಾಂಧಿಜೀಯ ಸಂದೇಶವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಸವೋರ್ದಯವೆಂದರೆ ಬಹುಜನ ಸುಖಿ@ನೋಭವಂತು ಅಲ್ಲ, ಸರ್ವೆಜನ ಸುಖಿನೋಭವಂತು ಎಂದು ಕೃಷ್ಣ ಹೇಳಿದರು.
ಗಾಂಧೀಜಿಯನ್ನು ಯುವಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಎಂ.ಬಸವಯ್ಯ ಅವರ ಬರೆದಿರುವ ಸತ್ಯಾನ್ವೇಷಣೆ ಹಾಗೂ ಎಚ್​.ಎಸ್​.ಸುರೇಶ್​ ಅವರು ಬರೆದಿರುವ ಘಾತಕ ಲೋಕದಿಂದ ಗಾಂಧಿಯಾನದೆಡೆಗೆ ಎರಡು ಪುಸ್ತಕಗಳನ್ನು ಜಿಲ್ಲೆಯ ಪ್ರತಿ ಶಾಲಾ,ಕಾಲೇಜುಗಳ ಗ್ರಂಥಾಲಯಗಳಲ್ಲಿ ದೊರೆಯುವಂತೆ ಮಾಡಲಿದ್ದೇವೆ. ಅಲ್ಲದೆ, ಜಿಲ್ಲಾ ಕಾರಾಗೃಹದ ಕೈದಿಗಳಿಗೂ ನೀಡಲಾಗುವುದು.ಇಂತಹ ಕಾರ್ಯಕ್ರಮದಲ್ಲಿ ಹೆಚ್ಚು ಯುವಜನರು ಪಾಲ್ಗೊಳ್ಳುವಂತೆ ಮಾಡಲಾಗುವುದು.ಯುವಜನರನ್ನು ಮಹಾತ್ಮಗಾಂಧಿಜೀ ಸಂದೇಶದ ರಾಯಭಾರಿಗಳಾಗಿ ಕೆಲಸ ಮಾಡಬೇಕಾಗಿದೆ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.
ಸಮಾಜಮುಖಿಯಾಗಿ ಚಿಂತಿಸದವ ಸದಗೃಹಸ್ಥನಾಗಿರಲು ಸಾಧ್ಯವಿಲ್ಲ ಎಂಬ ಗಾಂಧಿಯ ಮಾತುಗಳು ನಮಗೆಲ್ಲರಿಗೂ ಅನ್ವಯಿಸುತ್ತದೆ. ನಾನು ಈ ರಾಷ್ಟ್ರದ ಅಧ್ಯಕ್ಷನಾಗಿದ್ದೇನೆ. ಇದಕ್ಕೆ ಕಾರಣ ಮಹಾತ್ಮಗಾಂಧಿ ಎಂದ ಅಮೆರಿಕಾದ ಅಧ್ಯಕ್ಷನಾಗಿದ್ದ ಬರಾಕ್​ ಒಬಾಮ ಅವರ ಮಾತನ್ನು ನಾವೆಲ್ಲರೂ ಮತ್ತೊಮ್ಮೆ ಅವಲೋಕಿಸುವ ಅಗತ್ಯವಿದೆ. ಕೆಲವರು ಗಾಂಧಿ, ಅಂಬೇಡ್ಕರ್​, ಬುದ್ಧ, ಬಸವಣ್ಣ ನಂತಹ ದೊಡ್ಡವರನ್ನು ಅಪಹಾಸ್ಯ ಮಾಡಿ, ನಾವು ದೊಡ್ಡವರು ಎಂಬ ಭ್ರಮೆಯಲ್ಲಿ ಬದುಕುತಿದ್ದಾರೆ ಎಂದು ಗಾಂಧಿ ಸ್ಮಾರಕನಿಧಿ ನಿರ್ದೇಶಕ ಪ್ರೊ.ಜಿ.ಬಿ.ಶಿವರಾಜು ಹೇಳಿದರು
ಗಾಂಧಿ ಭವನದ ಕಾರ್ಯದರ್ಶಿ ನರೇಂದ್ರ ಮಾತನಾಡಿ, ಮೊಬೈಲ್​ನಲ್ಲಿ ಮುಳುಗಿರುವ ನಮ್ಮಯುವಜನರಿಗೆ ಗಾಂಧಿ ಜೀವನಚರಿತ್ರೆ ಓದಲು ಸಮಯ ಇಲ್ಲದಂತಾಗಿದೆ. ಎಐ ನಂತಹ ತಂತ್ರಜ್ಞಾನದಿಂದ ಕೃಷಿ ಕೆಲಸಕ್ಕೂ ರೋಬೋಟಿಕ್​ಗಳು ಬಂದಿರುವ ಕಾಲದಲ್ಲಿ, ವಿದ್ಯಾವಂತ ಯುವಜನರಿಗೆ ಕೆಲಸವಿಲ್ಲದೆ ಮನೆಯಲ್ಲಿಯೇ ಕುಳಿತಿರುವಾಗ ಗಾಂಧಿ ನೆನಪಾಗುತ್ತಾರೆಯೇ? ಇದು ಭವಿಷ್ಯದಲ್ಲಿ ಉಂಟಾಗಬಹುದಾದ ನಿರುದ್ಯೋಗ ಸಮಸ್ಯೆಯನ್ನು ಗಂಭೀರತೆ ತೋರುತ್ತದೆ ಎಚ್ಚರಿಸಿದರು.
ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಬಸವಯ್ಯ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಪರಿಸರವಾದಿ ಸಿ.ಯತಿರಾಜು, ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಭಾಗ್ಯಮ್ಮ ಬಸವಯ್ಯ, ಉಪನ್ಯಾಸಕರಾದ ಗೋವಿಂದಯ್ಯ, ಸುಮಂಗಲ ಜೇಮ್ಸ್​, ಪ್ರೊ.ಸಿದ್ದಿಬಾಬು, ಜಿ.ಚಿದಾನಂದಸ್ವಾಮಿ, ಬಿಂದುಶ್ರೀ, ಸುರೇಶ್​, ಆರ್​.ವಿ.ಪುಟ್ಟಕಾಮಣ್ಣ ಮತ್ತಿತರರು ಉಪಸ್ಥಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net