ಕಲಬುರಗಿ ಬಳಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ

Trainee Flight emergency landing in kalaburagi
Trainee Flight emergency landing in kalaburagi
Published on: 

ಕಲಬುರಗಿ: ನಗರ ಹೊರವಲಯದ ಏರ್​ಪೋರ್ಟ್​ನ ತರಬೇತಿ ಲು ವಿಮಾನವೊಂದು ತಾಂತ್ರಿಕ ದೋಷದಿಂದ ಶ್ರೀನಿವಾಸ ಸರಡಗಿ ಜಮೀನೊಂದರಲ್ಲಿ ಮಂಗಳವಾರ ಸಂಜೆ ತುರ್ತು ಭೂಸ್ಪರ್ಶ ಮಾಡಿದೆ. ರೆಡ್​ೋರ್ಡ್​ ಕಂಪನಿಯ ಲು ವಿಮಾನ ಹಾರಾಟದ ವೇಳೆ ತಾಂತ್ರಿಕ ದೋಷ ಕಂಡು ಬಂದಿದ್ದು, ತಕ್ಷಣ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ತೊಗರಿ ಬೆಳೆದಿದ್ದ ಜಮೀನಿನಲ್ಲಿ ಸುರತವಾಗಿ ಇಳಿಸಿದ್ದಾರೆ. ಜಮೀನಿನಲ್ಲಿ ಯಾರೂ ಇಲ್ಲದ್ದರಿಂದ ಗಂಭೀರ ಅಪಾಯ ತಪ್ಪಿದಂತಾಗಿದೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು, ಪೊಲೀಸರು, ವಿಮಾನ ನಿಲ್ದಾಣದ ತರಬೇತಿ ವಿಭಾಗದವರು ಸ್ಥಳಕ್ಕೆ ಧಾವಿಸಿದರು. ವಿಶ್ವವಿದ್ಯಾಲಯ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪಿಐ ಚಂದ್ರಶೇಖರ ತಿಗಡಿ ಸೇರಿ ಸಿಬ್ಬಂದಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net