ಕಲ್ಲು ಸಾಗಿಸುತ್ತಿದ್ದ ಮೂರು ಟಿಪ್ಪರ್ ವಶ

15-GPT-1A
ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಸಮೀಪ ಗಣಿ ಅಧಿಕಾರಿಗಳು ಪರ್ಮಿಟ್ ಇಲ್ಲದೆ ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ವಶಕ್ಕೆ ಪಡೆದುಕೊಂಡರು.
Published on

ಗುಂಡ್ಲುಪೇಟೆ: ನಿಯಮಬಾಹಿರವಾಗಿ ಕಲ್ಲು ಸಾಗಿಸುತ್ತಿದ್ದ ಲಾರಿಗಳನ್ನು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ದಂಡ ವಿಧಿಸಿದ್ದಾರೆ. ಭಾನುವಾರ ಸಂಜೆ ದಿಢೀರ್ ದಾಳಿ ಮಾಡಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪದ್ಮಜಾ ಅವರು ಹಿರೀಕಾಟಿ ಬಳಿ ಕಲ್ಲು ಸಾಗಿಸುತ್ತಿದ್ದ ಟಿಪ್ಪರ್‌ಗಳನ್ನು ತಪಾಸಣೆ ನಡೆಸಿದಾಗ ಪರ್ಮಿಟ್ ವಂಚಿಸಿರುವುದು ಪತ್ತೆಯಾಗಿದೆ. ಪರ್ಮಿಟ್ ಇಲ್ಲದೆ ಕಲ್ಲು ಸಾಗಣೆ ಮಾಡುತ್ತಿದ್ದ ರಾಜಪ್ಪ, ಪ್ರಭಾಕರ್, ಸೆಲ್ವಕುಮಾರ್‌ಗೆ ಸೇರಿದ ಮೂರು ಟಿಪ್ಪರ್‌ಗಳಿಗೆ ದಂಡ ವಿಧಿಸಿದರು. ರಾಜಪ್ಪ ಅವರ ಟಿಪ್ಪರ್‌ಗೆ 35,700 ಸಾವಿರ ರೂ., ಪ್ರಭಾಕರ್, ಸೆಲ್ವಕುಮಾರ್ ಅವರ ಟಿಪ್ಪರ್‌ಗಳಿಗೆ ತಲಾ 69,250 ಸಾವಿರ ರೂ. ದಂಡ ವಿಧಿಸಿದರು. ದಂಡವನ್ನು ಆನ್ ಲೈನ್‌ನಲ್ಲಿ ಕಟ್ಟಿದ ಬಳಿಕ ಟಿಪ್ಪರ್‌ಗಳನ್ನು ಬಿಡಲಾಯಿತು ಎಂದು ಪದ್ಮಜಾ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net