ಕಾರು-ಲಾರಿ ಡಿಕ್ಕಿಯಾಗಿ ಮೂವರು ಮೃತ್ಯು

accident
Published on

ಕಾಸರಗೋಡು: ನೀಲೇಶ್ವರ ಸನಿಹದ ಚೋಯಂಕೋಡ್ ಮಞಳಕ್ಕಾಡ್ ತಿರುವಿನಲ್ಲಿ ಕಲ್ಲು ಸಾಗಾಟದ ಲಾರಿ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಮೂವರು ಮೃತಪಟ್ಟಿದ್ದು, ಒಬ್ಬಾತ ಗಂಭೀರ ಗಾಯಗೊಂಡಿದ್ದಾನೆ.

ನೀಲೇಶ್ವರ ಕೊನ್ನಕ್ಕಾಡ್ ಕೋಟಂಬಳಿ ನಿವಾಸಿ ಗಣೇಶ್-ಉಷಾ ದಂಪತಿ ಪುತ್ರ ಅನುಷ್(26), ನೀಲೇಶ್ವರ ಕರಿಂದಳ ಚೆಮ್ಮಂತೋಡಿನ ರಮಾ ಎಂಬುವರ ಏಕ ಪುತ್ರ ಶ್ರೀರಾಗ್(18) ಹಾಗೂ ಪೆರಿಞೌನ ಮೀರ್‌ಕಾನ ನಿವಾಸಿ ಕುಞಿಕಣ್ಣನ್-ಬಿಂದು ದಂಪತಿ ಪುತ್ರ ಕೆ.ಕೆ.ಕಿಶೋರ್(20)ಮೃತಪಟ್ಟವರು. ಇನ್ನೊಬ್ಬ ಪ್ರಯಾಣಿಕ ಕಂಬಳಪಳ್ಳಿ ನಿವಾಸಿ ಬಿನು(24) ಗಂಭೀರ ಗಾಯಗೊಂಡಿದ್ದು, ಆತನನ್ನು ಕಣ್ಣೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತಪಟ್ಟ ಮೂವರೂ ವಿದ್ಯುತ್ ಇಲಾಖೆ ಗುತ್ತಿಗೆ ಕಾರ್ಮಿಕರಾಗಿದ್ದರು. ಇವರ ಜತೆಗಿದ್ದ ಸ್ನೇಹಿತನನ್ನು ಕಿನಾವೂರಿನಲ್ಲಿ ಇಳಿಸಿ ಅವರ ಮನೆಗೆ ತೆರಳುವ ಹಾದಿ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದಿಂದ ಕಾರು ಸಂಪೂರ್ಣ ಜಖಂಗೊಂಡಿದ್ದು, ಪೊಲೀಸರು ಹಾಗೂ ಊರವರು ಕಾರನ್ನು ಒಡೆದು ಒಳಗೆ ಸಿಲುಕಿಕೊಂಡವರನ್ನು ಹೊರತೆಗೆದರು. ಅಷ್ಟರಲ್ಲಿ ಮೂವರು ಮೃತಪಟ್ಟಿದ್ದರು. ಬಿನು ಗಂಭೀರ ಗಾಯಗೊಂಡಿದ್ದು, ಕಣ್ಣೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನೀಲೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net