ದನದ ಕೊಟ್ಟಿಗೆ ಸಂಪೂರ್ಣ ಜಲಾವೃತ

26 TKE 4(2)
ಇಟ್ಟಿಗೆ ಗ್ರಾಮದಲ್ಲಿ ಮಳೆಯ ನೀರು ಕೊಟ್ಟಿಗೆಗೆ ನುಗ್ಗಿರುವುದು.
Published on

ತರೀಕೆರೆ: ಕಳೆದೆರಡು ವಾರಗಳಿಂದ ತಾಲೂಕಿನಲ್ಲಿ ಸತತ ಮಳೆಯಾಗುತ್ತಿರುವುದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಬುಧವಾರ ರಾತ್ರಿಯಿಂದ ಎಡೆ ಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಇಟ್ಟಿಗೆ ಗ್ರಾಮದಲ್ಲಿ ದನದ ಕೊಟ್ಟಿಗೆ ಜಲಾವೃತವಾಗಿ ಜಾನುವಾರುಗಳು ತೊಂದರೆ ಅನುಭವಿಸುವಂತಾಗಿದೆ.
ಇಟ್ಟಿಗೆ ಗ್ರಾಮದ ಅಜ್ಜಯ್ಯನ ಸ್ವಾಮಿ ದೇಗುಲ ಸಮೀಪ ಇರುವ ಚಂದ್ರಶೇಖರ ನಾಯ್ಕ ಎಂಬುವವರ ದನದ ಕೊಟ್ಟಿಗೆಗೆ ನೀರು ನುಗ್ಗಿದ್ದು, ಆವರಣ ಜಲಾವೃತವಾಗಿದೆ. ಇದರಿಂದ 4 ಎಮ್ಮೆ, 4 ಹಸು ಸೇರಿ ಒಟ್ಟು 8 ಜಾನುವಾರುಗಳು ತೊಂದರೆ ಅನುಭವಿಸುವಂತಾಗಿದೆ. ಮೇವಿಗಾಗಿ ಸಂಗ್ರಹಿಸಿದ್ದ ಒಣ ಹುಲ್ಲು ಕೊಳೆಯುವ ಸ್ಥಿತಿ ತಲುಪಿದೆ.
ಇಟ್ಟಿಗೆ ಗ್ರಾಮ ನಿವಾಸಿ ಎಸ್.ಚಂದ್ರಶೇಖರ ನಾಯ್ಕ ಮಾತನಾಡಿ, ನಕಾಶೆ ಕಂಡ ಕಾಲುವೆ ಮುಚ್ಚಿರುವ ಪರಿಣಾಮ ಮಳೆ ನೀರು ಕೊಟ್ಟಿಗೆಗೆ ನುಗ್ಗಿದೆ. ಅಧಿಕಾರಿಗಳು ಭೇಟಿ ನೀಡಿ ಮೂರು ದಿನದ ಬಳಿಕ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಅಲ್ಲಿಯವರೆಗೆ ಪ್ರತ್ಯೇಕ ಜಾಗವಿಲ್ಲದ ಕಾರಣ ಜಾನುವಾರುಗಳನ್ನು ನೀರು ನಿಂತಿರುವ ಆವರಣದಲ್ಲೇ ಕಟ್ಟಿಹಾಕುವ ದುಸ್ಥಿತಿ ಎದುರಾಗಿದೆ ಎಂದರು.
ತಹಸೀಲ್ದಾರ್ ವಿ.ಎಸ್.ರಾಜೀವ್, ಗ್ರಾಪಂ ಅಧ್ಯಕ್ಷ ಟಿ.ಕಾಂತ ಕುಮಾರನಾಯ್ಕ, ಪಿಡಿಒ ಎಲ್.ಆರ್.ಈಶ್ವರಯ್ಯ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net