

ಕಡಬ: ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ತಾಲೂಕು ಯುವ ಸಂಸತ್ತು ಸ್ಪರ್ಧೆ ನಡೆಯಿತು. ವಿಶ್ರಾಂತ ಪ್ರಾಂಶುಪಾಲ, ಲೋಕಸಭೆ ಕನ್ಸಲ್ಟೆಂಟ್ ಇಂಟಪ್ರೆಟರ್ ಡಾ.ಎನ್.ಎಸ್. ಗೋವಿಂದ ಉದ್ಘಾಟನೆ ನೆರವೇರಿಸಿ, ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ಸರ್ಕಾರದ ವ್ಯವಸ್ಥೆ ಹಾಗೂ ಲೋಕಸಭೆಯ ಅಧಿವೇಶನದ ಚಿತ್ರಣ ಮೂಡಿಸಿದರು.
ರಾಮಕುಂಜ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಪ್ರಶಾಂತ್ ಆರ್.ಕೆ.ಅಧ್ಯಕ್ಷತೆ ವಹಿಸಿದರು. ಶಿಕ್ಷಣ ಸಂಯೋಜಕ ಹಾಗೂ ನೋಡಲ್ ಅಧಿಕಾರಿ ಹರಿಪ್ರಸಾದ್, ಜಿಲ್ಲಾ ಪ್ರಶಸ್ತಿ ವಿಜೇತರಾದ ಕಡಬ ತಾಲೂಕು ಸಹಶಿಕ್ಷಕ ಸಂಘದ ಉಪಾಧ್ಯಕ್ಷೆ ಲಲಿತಾ, ಸ್ಪರ್ಧೆಯ ತೀರ್ಪುಗಾರರಾದ ಗುಡ್ಡಪ್ಪ ಬಲ್ಯ ಹಾಗೂ ವಿಜಯಕುಮಾರ್, ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಕೆ.ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಸತೀಶ್ ಭಟ್ ಸ್ವಾಗತಿಸಿ, ಶಿಕ್ಷಕ ದಿನೇಶ್ ಬಿ. ವಂದಿಸಿದರು. ಶಿಕ್ಷಕ ಪ್ರವೀಣ್ ಕುಮಾರ್ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಉಪನ್ಯಾಸಕ ಗುಡ್ಡಪ್ಪ ಬಲ್ಯ ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ತೀರ್ಪುಗಾರರಾದ ವಿಜಯಕುಮಾರ್, ಲಲಿತಾ, ಮುಖ್ಯಶಿಕ್ಷಕ ಸತೀಶ್ ಭಟ್, ಹಿರಿಯ ವಿದ್ಯಾರ್ಥಿ ಪ್ರಜ್ವಲ್ ಕೃಷ್ಣ ಉಪಸ್ಥಿತರಿದ್ದರು. ಶಾಲಾ ನೋಡಲ್ ಅಧಿಕಾರಿ ದಿನೇಶ್ ಬಿ. ನಿರೂಪಿಸಿದರು. ಶಿಕ್ಷಕಿ ನಿಶ್ಚಿತ ಎಸ್.ಜಿ.ವಂದಿಸಿದರು.
ಉಪ್ಪಿನಂಗಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಮೀಕ್ಷಾ, ಕಾಂಚನ ಕೆವಿಎಸ್‌ಎಂ ಪ್ರೌಢಶಾಲೆಯ ರೂಪಶ್ರೀ ಬಿ., ಹಿರೆಬಂಡಾಡಿ ಸರ್ಕಾರಿ ಪ್ರೌಢಶಾಲೆಯ ಸಾಜಿದ, ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಪ್ರಣಮ್ಯ ಎಚ್.ಕೆ., ಕೆಯ್ಯೂರು ಕೆ.ಪಿ. ಎಸ್ ಶಾಲೆಯ ಆಸ್ಮಿತಾ ಎಸ್.ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.