

ಬೆಂಗಳೂರು: ಪ್ರಸ್ತುತ ಉನ್ನತ ಶಿಕ್ಷಣದಲ್ಲಿ ಬಹುತೇಕ ಸಂಸ್ಥೆಗಳಲ್ಲಿ ಉದ್ಯೋಗ ಆಧಾರಿತ ಶಿಕ್ಷಣ ನೀಡಲಾಗುತ್ತಿದೆ. ಸುಸ್ಥಿರ ಅಭಿವೃದ್ಧಿ ಶಿಕ್ಷಣ ನೀಡಿದರೆ ಉದ್ಯಮ ಆರಂಭಿಸಲು ಅನುಕೂಲವಾಗಲಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ವಿ. ಸುರೇಶ ಅಭಿಪ್ರಾಯ ವ್ಯಕ್ತಪಡಿಸಿದರು.
ಸೆಂಟ್ರಲ್ ಕಾಲೇಜು ಆರವಣರದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜು ‘ಜಾಗತಿಕ ಗುರಿಗಳಿಗೆ ಸ್ಥಳೀಯ ಪರಿಹಾರ - ದೈನಂದಿನ ಜೀವನದಲ್ಲಿ ಸುಸ್ಥಿರತೆ ಸಂಯೋಜನೆ’ ವಿಷಯ ಕುರಿತು ಹಮ್ಮಿಕೊಂಡಿದ್ದ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದಲ್ಲಿ ಕಳೆದ ಒಂದು ದಶಕದಲ್ಲಿ ಶಿಕ್ಷಣ ಮತ್ತು ಅಭಿವೃದ್ಧಿಯಲ್ಲಿ ತ್ವರಿತ ಬೆಳವಣಿಗೆಯಾಗುತ್ತಿದೆ. ಈ ನಿಟ್ಟಿನಲ್ಲಿ ಹವಾಮಾನ ಬದಲಾವಣೆ, ಪ್ಲಾಸ್ಟಿಕ್ ನಿರ್ಮೂಲನೆಯಂತಹ ವಿಷಯದಲ್ಲಿ ಯುವ ಸಮುದಾಯವು ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.
ಎ್ಕೆಸಿಸಿಐ ಉಪಾಧ್ಯಕ್ಷೆ ಉಮಾ ರೆಡ್ಡಿ ಮಾತನಾಡಿ, ಎಲ್ಲೆಲ್ಲಿ ಸಾಧ್ಯವಿದೆ ಅಲ್ಲಲ್ಲಿ ಸೋಲಾರ್ ವಿದ್ಯುತ್ ಬಳಸಿ. ಬೆಂಗಳೂರು ಜಲಮಂಡಳಿಯು 34 ಎಸ್‌ಟಿಪಿ ಇದೆ. ಸಾಧ್ಯವಾದರೆ ಕುಡಿಯಲು ಹೊರತುಪಡಿಸಿ ಉಳಿದ ಕೆಲಸಗಳಿಗೆ ಸಂಸ್ಕರಿಸಿದ ನೀರನ್ನು ಬಳಸಿ. ಕೈಗಾರಿಕಾ ಬಳಕೆಗೆ, ಉದ್ಯಾನವನಗಳಿಗೆ ಸಂಸ್ಕರಿಸಿದ ನೀರನ್ನು ಬಳಸುವುದರಿಂದ ನೀರನ್ನು ಉಳಿಸಬಹುದಾಗಿದೆ ಎಂದು ಸಲಹೆ ನೀಡಿದರು.
ಯುವ ಸಮುದಾಯದಲ್ಲಿ ಜ್ಞಾನ ಮತ್ತು ನಾವೀನ್ಯತೆಯು ಬಹಳ ಮುಖ್ಯವಾಗಿ ಬೇಕಿದೆ. ಮಹಿಳಾ ಉದ್ಯಮಿಗಳಿಗೆ ಎ್ಕೆಸಿಸಿಐ ಸಾಕಷ್ಟು ಅವಕಾಶಗಳನ್ನು ಕಲ್ಪಿಸುತ್ತಿದೆ. ತಮ್ಮದೇ ನೆಟ್‌ವರ್ಕ್‌ನಲ್ಲಿ ಕೊಡುಗೆ ನೀಡಲು ಸಹಕರಿಸಿ ಎಂದು ತಿಳಿಸಿದರು.
ಎ್ಕೆಸಿಸಿಐ ಮಂಥನ್ ಯೋಜನೆಯು ಶಿಕ್ಷಣ ಮತ್ತು ಉದ್ಯಮಕ್ಕೆ ಈ ಕಾರ್ಯಕ್ರಮವು ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. 17ನೇ ಆವೃತ್ತಿಯು ಇತ್ತೀಚೆಗಷ್ಟೇ ಪೂರ್ಣಗೊಂಡಿತು. ಇದನ್ನು ಬಳಸಿಕೊಳ್ಳುವಂತೆ ಹೇಳಿದರು.
ಇದೇ ವೇಳೆ ‘ಗ್ಲೋಬಲ್ ಗೋಲ್ಸ್, ಲೋಕಲ್ ಸಲ್ಯುಷನ್ - ಇಂಟರ್‌ಗ್ರೇಟೆಟ್ ಸಸ್ಟೈನೆಬಿಲಿಟಿ ಇನ್ ಎವೆರಿಡೇ’ ಎಂಬ ಪುಸ್ತಕ ಬಿಡುಗಡೆಗೊಳಿಸಲಾಯಿತು.
ಹೊಸ ಆಲೋಚನೆಗಳನ್ನು ಬೇರು ಮಟ್ಟದಲ್ಲಿ ಪೋಷಣೆ ಮಾಡಿದಾಗ ಸ್ಥಳೀಯವಾಗಿ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನವು ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಡಾ. ಶರಿಷ್ಮಾ ದತ್ತ, ಪ್ರಾಂಶುಪಾಲೆ