ಸಂವಿಧಾನ ಉಳಿವಿಗಾಗಿ ಕಾಂಗ್ರೆಸ್‌ಗೆ ಬೆಂಬಲ

Support to the Congress for the survival of the Constitution
ಬಾಗಲಕೋಟೆ ನಗರದ ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ಚಲವಾದಿ ಸಮಾಜದ ಜಿಲ್ಲಾ ಮುಖಂಡ ಬಸವರಾಜ ಚಲವಾದಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡರಾದ ಪ್ರೇಮನಾಥ ಗರಸಂಗಿ, ಸದಾಶಿವ ಕೊಟಬಾಗಿ, ಪರಶುರಾಮ ನಾರಾಯಣಿ, ಮಹೇಶ ಬೀಳಗಿ, ಗ್ಯಾನಪ್ಪ ಛಲವಾದಿ ಇತರರಿದ್ದರು.
Published on

ಬಾಗಲಕೋಟೆ: ಸಂವಿಧಾನ ಬದಲಾವಣೆ ವಿಷಯದಲ್ಲಿ ಬಿಜೆಪಿ ನಿಲುವು ಒಪ್ಪಲು ಸಾಧ್ಯವಿಲ್ಲ. ಈ ಲೋಕಸಭೆ ಚುನಾವಣೆಯಲ್ಲಿ ಚಲವಾದಿ ಸಮುದಾಯ ಸಂವಿಧಾನ ಉಳಿವಿಗಾಗಿ ಕಾಂಗ್ರೆಸ್ ಬೆಂಬಲಿಸಲಿದೆ. ರಾಜ್ಯ, ರಾಷ್ಟ್ರದಲ್ಲಿ ಈ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಲಾಗಿದೆ ಎಂದು ಚಲವಾದಿ ಸಮಾಜದ ಜಿಲ್ಲಾ ಮುಖಂಡ ಬಸವರಾಜ ಚಲವಾದಿ ಹೇಳಿದರು.

ನಗರದರ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ಹೇಳಿಕೆ, ನಿಲವು ಅತ್ಯಂತ ಖಂಡನೀಯ. ಸಂವಿಧಾನ ಬದ್ಧತೆ ಕುರಿತು ಈಗಾಗಲೇ 6 ತಿಂಗಳಿನಿಂದ ಚಲವಾದಿ ಸಮಾಜದ ಬಾಂಧವರಿಗೆ ಅರಿವು ಮೂಡಿಸಲಾಗಿದೆ. ಮತಗಳು ಹರಿದು, ಹಂಚಿ ಹೋಗದಂತೆ ಸಂವಿಧಾನ ಕಾಪಾಡುವ ಪಕ್ಷಕ್ಕೆ ನಾವು ಮತ ಚಲಾಯಿಸಲು ನಿರ್ಧಾರ ಮಾಡಿದ್ದೇವೆ. ಖಾಸಗಿ ಹೊಟೇಲ್‌ನಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಮುಖಂಡರಾದ ಪ್ರೇಮನಾಥ ಗರಸಂಗಿ, ಸದಾಶಿವ ಕೊಟಬಾಗಿ, ಪರಶುರಾಮ ನಾರಾಯಣಿ, ಮಹೇಶ ಬೀಳಗಿ, ಗ್ಯಾನಪ್ಪ ಛಲವಾದಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net