

ಮಳವಳ್ಳಿ: ತಾಲೂಕಿನ ತಳಗವಾದಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಎನ್. ಸುಮಿತ್ರಾ ಅಧ್ಯಕ್ಷೆಯಾಗಿ ಹಾಗೂ ಟಿ.ಆರ್.ಕುಮಾರ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.
ಗ್ರಾಮದ ಗ್ರಾಪಂ ಕಾರ್ಯಾಲಯದಲ್ಲಿ ನಿಗದಿಯಾಗಿದ್ದ ಚುನಾವಣಾ ಪ್ರಕ್ರಿಯೆಯಲ್ಲಿ ವರಿಬ್ಬರನ್ನು ಹೊರತುಪಡಿಸಿ ಇತರರು ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.
ಚುನಾವಣಾಧಿಕಾರಿಯಾಗಿ ಸಿಡಿಪಿಒ ದೀಪಾ ಕಾರ್ಯನಿರ್ವಹಿಸಿದರು. ಗ್ರಾಪಂ ಸದಸ್ಯರಾದ ಆರ್. ದಿವ್ಯಾ, ಟಿ.ಸಿ.ಸುಲೋಚನಾ, ಡಿ.ಬಿ. ಬಸವರಾಜು, ಜಯಲಕ್ಷ್ಮೀ, ಟಿ.ಪಿ. ಸೌಮ್ಯಾ, ಟಿ.ಎಸ್. ರೂಪಾ, ಸಿದ್ದರಾಜು, ಗುರುಸ್ವಾಮಿ, ಟಿ.ಎಚ್.ಆನಂದ, ಲೀಲಾವತಿ, ಶಿವಮ್ಮ, ಬಿ.ಶಂಕರಯ್ಯ, ನಾಗಮ್ಮ, ಲಕ್ಷ್ಮಮ್ಮ, ಸವಿತಾ, ಕೆ.ಎಂ. ಪ್ರಭುಸ್ವಾಮಿ, ಎ. ಮಹದೇವಸ್ವಾಮಿ, ಪಿಡಿಒ ರೇಣುಕಾ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.