ವಿದ್ಯಾರ್ಥಿಗಳ ಪ್ರೋತ್ಸಾಹಕ್ಕೆ ಪ್ರಶಸ್ತಿ ವಿತರಣೆ

10
ಮಲಾಬಾದ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ದಾನಿಗಳ ದಿನಾಚರಣೆಯನ್ನು ಬಿ.ಎಲ್.ಪಾಟೀಲ ಉದ್ಘಾಟಿಸಿದರು. ಸಿದ್ದರಾಜ ಪೂಜಾರಿ, ಬಾಳಸಾಹೇಬ ಲೋಕಾಪುರ, ಗೋಪಾಲ ಕುಲಕರ್ಣಿ ಇತರರಿದ್ದರು.
Published on

ಸಂಬರಗಿ: ವಿಮೋಚನೆ ಶಿಕ್ಷಣ ಸಂಸ್ಥೆ ದಾನಿಗಳ ಸಂಸ್ಥೆ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಬಿ.ಎಲ್.ಪಾಟೀಲ ಹೇಳಿದರು.

ಸಮೀಪದ ಮಲಾಬಾದ ಗ್ರಾಮದ ವಿಮೋಚನ ಶಿಕ್ಷಣ ಸಂಸ್ಥೆಯ ಚಂದ್ರಕಲಾ ರಣಮೋಡೆ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದಾನಿಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಲವಾರು ದೇವಸ್ಥಾನಕ್ಕೆ ದಾನ ಮಾಡುತ್ತಾರೆ. ಆದರೆ, ನಾವು ಐದು ದೇವಸ್ಥಾನದಿಂದ ಪ್ರತಿ ವರ್ಷ 5 ಲಕ್ಷ ರೂ. ಕಾಣಿಕೆ ತಂದಿದ್ದೇವೆ. ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದಿರುವ ವಿದ್ಯಾರ್ಥಿಗಳು ಕೂಡ ಸಂಸ್ಥೆಗೆ ದಾನ ರೂಪದಲ್ಲಿ ಸಹಾಯ ಮಾಡಿದ್ದಾರೆ. ಎಲ್ಲ ದಾನಿಗಳಿಂದ ಸಂಸ್ಥೆ ನಡೆಯುತ್ತಿದೆ. ಈ ಸಂಸ್ಥೆಯಲ್ಲಿ ಬಡಮಕ್ಕಳು ಶಿಕ್ಷಣ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದರು.

ನಿವೃತ್ತ ಪ್ರಾಚಾರ್ಯ ಸಿದ್ದರಾಜ ಪೂಜಾರಿ ಮಾತನಾಡಿದರು. ಸಾಹಿತಿ ಬಾಳಸಾಹೇಬ ಲೋಕಾಪುರ, ಗೋಪಾಲ ಕುಲಕರ್ಣಿ, ಪ್ರಕಾಶ ಪಾಟೀಲ, ಮಲ್ಲಿಕಾರ್ಜುನ ಕಣಶೆಟ್ಟಿ, ಮಂಜುನಾಥ ಪಾಟೀಲ, ಮುಖ್ಯಶಿಕ್ಷಕರಾದ ಪ್ರಕಾಶ ಕಾಂಬ್ಳೆ, ಐ.ಬಿ.ಪಾಟೀಲ ಹಾಗೂ ಬಸಗೌಡ ಪಾಟೀಲ, ಧರೆಪ್ಪ ಮಸಾಳೆ, ಹನುಮಂತ ಗೌರಾನಿ, ಎ.ಎಸ್.ಬೇಡರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net