ಪತ್ರಕರ್ತರ ಸಂಘಕ್ಕೆ ಶೃಂಗೇರಿ ಶ್ರೀಗಳಿಂದ ನೆರವು

26sri-2
Published on

ಶೃಂಗೇರಿ: ಶೃಂಗೇರಿ ಶ್ರೀ ಮಠದ ಸುವರ್ಣಭಾರತೀ ಮಹೋತ್ಸವದ ಯೋಜನೆಯಡಿ ಪತ್ರಕರ್ತರ ಸಂಘದ ಕಟ್ಟಡ ನಿರ್ಮಾಣಕ್ಕೆ ಜಗದ್ಗುರು ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಅವರು ಮಂಗಳವಾರ ಗುರು ನಿವಾಸದಲ್ಲಿ 5 ಲಕ್ಷದ ರೂ.ಚೆಕ್‌ನ್ನು ಸಂಘದ ಅಧ್ಯಕ್ಷೆ ಶೋಭಾ ಅನಂತಯ್ಯ ಅವರಿಗೆ ಹಸ್ತಾಂತರಿಸಿ, ಕಟ್ಟಡ ನಿರ್ಮಾಣ ಕಾರ್ಯ ಶೀಘ್ರದಲ್ಲಿ ನಿರ್ಮಾಣಗೊಂಡು ಪತ್ರಕರ್ತರಿಗೆ ಹೆಚ್ಚು ಸದುಪಯೋಗವಾಗಲಿ ಎಂದು ಅನುಗ್ರಹಿಸಿದರು.

ಜಗದ್ಗುರು ಭಾರತೀ ತೀರ್ಥ ಮಹಾ ಸ್ವಾಮೀಜಿ ಅವರು ಸನ್ಯಾಸ ಸ್ವೀಕರಿಸಿ 50 ವರ್ಷವಾದ ಹಿನ್ನೆಲೆಯಲ್ಲಿ ಸುವರ್ಣಭಾರತೀ ಯೋಜನೆಯಡಿ ಶೃಂಗೇರಿ ಶಾರದಾ ಪೀಠವು ಶೈಕ್ಷಣಿಕ, ವೈದ್ಯಕೀಯ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಿಗೆ ಹಾಗೂ ಸಂಘ-ಸಂಸ್ಥೆಗಳಿಗೆ ಸಾಕಷ್ಟು ನೆರವು ನೀಡುತ್ತಿದೆ.

ಪ್ರಧಾನ ಕಾರ್ಯದರ್ಶಿ ಸಸಿಮನೆ ಶಿವಶಂಕರ್, ಉಪಾಧ್ಯಕ್ಷ ರಂಜಿತ್, ಪದಾಧಿಕಾರಿಗಳಾದ ಹೆಚ್.ಎಸ್.ಸುಬ್ರಹ್ಮಣ್ಯ,ರಾಘವೇಂದ್ರ. ಎನ್.ಕೆ,ಸುಬ್ರಹ್ಮಣ್ಯ ಆಚಾರ್ಯ, ಅಭಿನವ್, ಕೆ.ವಿ.ರಮೇಶ್ ಹಾಗೂ ರಾಘವೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net