ಉದ್ಯಮ ನಡೆಸಲು ಕೌಶಲ ತರಬೇತಿ ಮುಖ್ಯ

ಮಹಿಳೆಯರು ಕೌಶಲ ತರಬೇತಿ ಪಡೆದುಕೊಂಡು ಉದ್ಯಮ ಪ್ರಾರಂಭಿಸಿದಾಗ ಯಶಸ್ಸು ಕಾಣಬಹುದು ಎಂದು ಕರ್ನಾಟಕ ರಾಜ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ್ ಹೇಳಿದ್ದಾರೆ.
Women's Entreprenuer Day
ನಗರದ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ಉದ್ದಿಮೆದಾರರ ಸಮ್ಮೇಳನವನ್ನು ಕಾಂತ ನಾಯಕ್ ಉದ್ಘಾಟಿಸಿದರು. ಇಂದಿರಾ, ಶಿವ ಶಂಕರಿ, ರೂಪ ರಾಣಿ ಇತರರಿದ್ದರು.folder
Published on: 

ಬೆಂಗಳೂರು: ಮಹಿಳೆಯರು ಕೌಶಲ ತರಬೇತಿ ಪಡೆದುಕೊಂಡು ಉದ್ಯಮ ಪ್ರಾರಂಭಿಸಿದಾಗ ಯಶಸ್ಸು ಕಾಣಬಹುದು ಎಂದು ಕರ್ನಾಟಕ ರಾಜ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ್ ಹೇಳಿದ್ದಾರೆ.

ನಗರದ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‌ಎಂಇ) ಮತ್ತು ಮಹಿಳಾ ಉದ್ಯಮಿಗಳ ವೇದಿಕೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ಉದ್ದಿಮೆದಾರರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಯಾವುದೇ ಉದ್ಯಮ ಪ್ರಾರಂಭಿಸು ಮುಂಚೆ ಎದುರಾಗುವ ಸಮಸ್ಯೆಗಳನ್ನು ನಿಭಾಸುವ ಕೌಶಲ ಇರಬೇಕು ಎಂದು ತಿಳಿಸಿದರು.

ಪ್ರತಿ ಸಾಧಕ ಮಹಿಳೆಯ ಬಳಿ ಕತೆ ಇರುತ್ತದೆ. ಮಾಡುವ ಕೆಲಸವನ್ನು ಅರ್ಧಕ್ಕೆ ಬಿಟ್ಟಾಗ ಮಾತ್ರ ಸೋಲಬಹುದು. ಅನಂತರವು ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋದರೆ ಯಶಸ್ಸು ಕಾಣಬಹುದು ಎಂದರು. ನಿರುದ್ಯೋಗ ನಿವಾರಿಸಲು ನಿಗಮದಿಂದ ವಿವಿಧ ಕೆಲಸಗಳ ಬಗ್ಗೆ ಕೌಶಲ ತರಬೇತಿ ನೀಡಲಾಗುತ್ತಿದೆ. ಇದರಲ್ಲಿ ಮಹಿಳೆಯರು ಹೆಚ್ಚಾಗಿ ಪಾಲ್ಗೊಂಡು ಸ್ವಯಂ ಉದ್ಯೋಗರಸ್ಥರಾಗಲು ಮುಂದೆ ಬರಬೇಕು. ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಹಿಳಾ ಉದ್ಯಮ ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ರೂಪ ರಾಣಿ ಮಾತನಾಡಿ, ಕುಟುಂಬದ ನಿರ್ವಹಣೆಗೆ ಸಿಮೀತರಾಗಿದ್ದ ಮಹಿಳೆಯರು ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದರು.

ಜೆಎಸ್‌ಡಬ್ಲ್ಯು ಸಹ ವ್ಯವಸ್ಥಾಪಕಿ ಇಂದಿರಾ, ಎಂಎಸ್‌ಎಂಇ ಅಧಿಕಾರಿ ಶಿವ ಶಂಕರಿ ಮತ್ತಿತರರು ಉಪಸ್ಥಿತರಿದ್ದರು.