

ಸಿರಗುಪ್ಪ: ತಾಲೂಕಿನ ಬೂದುಗುಪ್ಪ ಗ್ರಾಮ ಬಳಿ ಹರಿಯುವ ಹಿರೇಹಳ್ಳದಲ್ಲಿ ಮುಳುಗಿ ಬಾಲಕ ಅಮರನಾಥ ರೆಡ್ಡಿ (13) ಮತ್ತು ಆತನ ಮಾವ ಡಿ.ನಾರಾಯಣ ರೆಡ್ಡಿ (38) ಶುಕ್ರವಾರ ಮೃತಪಟ್ಟಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಳ್ಳಾರಿ ಮೂಲದ ಗೂಡದೂರು ಗ್ರಾಮದ ಅಮರನಾಥರೆಡ್ಡಿ, ತನ್ನ ಅಜ್ಜಿ ಗ್ರಾಮ ಬೂದಗುಪ್ಪಕ್ಕೆ ಬಂದಿದ್ದ. ದನಗಳನ್ನು ಕಾಯುವ ವೇಳೆ ಅವು ಹಳ್ಳವನ್ನು ದಾಟಿವೆ. ಅವನ್ನು ವಾಪಸ್ ಕರೆತರುವಾಗ ಹಳ್ಳದಲ್ಲಿನ ಆಳವಾದ ನೀರು ಇರುವಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಅಲ್ಲೇ ಇದ್ದ ಆತನ ಮಾವ ನಾರಾಯಣ ರೆಡ್ಡಿ, ಆತನನ್ನು ರಕ್ಷಿಸಲು ಹೋಗಿ ಅದೇ ಆಳದಲ್ಲಿ ಮುಳುಗಿ, ಇಬ್ಬರೂ ಮೃತಪಟ್ಟಿದ್ದಾರೆ.