ವಿಜ್ಞಾನಿಯಾಗಿ ಶರತ್ ಕೊಠಾರಿ ಆಯ್ಕೆ

6-srs-shartha
Published on

ಶಿರಸಿ: ತಾಲೂಕಿನ ಕೊಡ್ನಗದ್ದೆಯ ಹೊನ್ನೆಹಕ್ಕಲಿನ ಶರತ್ ಮಂಜುನಾಥ ಕೊಠಾರಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದಡಿ ಇರುವ ರಾಜಸ್ತಾನ ಜೋಧಪುರ ಶುಷ್ಕ ಅರಣ್ಯ ಸಂಶೋಧನಾ ಸಂಸ್ಥೆಗೆ ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾರೆ.
ಕೃಷಿಕ ಮಂಜುನಾಥ ಕೊಠಾರಿ ಹಾಗೂ ಸಾವಿತ್ರಿ ದಂಪತಿಯ ಪುತ್ರನಾದ ಶರತ್, ಹಾಸನ ಕೃಷಿ ವಿದ್ಯಾಲಯದಿಂದ ಪದವಿ ಹಾಗೂ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ನವದೆಹಲಿಯಲ್ಲಿ ಕೃಷಿ ಮಣ್ಣು ಹಾಗೂ ಕೃಷಿ ರಸಾಯನ ಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಐಸಿಎಆರ್-ಜೆಆರ್‌ಎಫ್ ಪರೀಕ್ಷೆಯಲ್ಲಿ ದೇಶಕ್ಕೆ ನಾಲ್ಕನೇ ಸ್ಥಾನ ಗಳಿಸಿ ಶಿಷ್ಯವೇತನ ಪಡೆದಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ ನ್ಯಾನೋಕ್ಲೆಬಯೋಪಾಲಿಮರ್ ರಾಸಾಯನಿಕ ಗೊಬ್ಬರಗಳ ಮೇಲೆ ನಡೆಸಿದ ಸಂಶೋಧನೆಗೆ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಚಿನ್ನದ ಪದಕ ಹಾಗೂ ಭಾರತೀಯ ಮಣ್ಣು ಸಂಶೋಧನಾ ಸಂಸ್ಥೆಯ ಚಿನ್ನದ ಪದಕ ಪಡೆದಿದ್ದಾರೆ. ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿನ ಚಿನ್ನದ ಪದಕದ ಜತೆಗೆ ಒಟ್ಟು 13 ಚಿನ್ನದ ಪದಕಗಳೊಂದಿಗೆ 2019ರಲ್ಲಿ ಕೃಷಿ ಪದವಿ ಪಡೆದಿದ್ದಾರೆ. ಇದೀಗ ಭಾರತೀಯ ಅರಣ್ಯ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net