

ಸಿರಿಗೇರಿ: ಮಕ್ಕಳು ಉತ್ತಮ ಪ್ರಜೆಗಳಾಗಿ ಕುಟುಂಬವನ್ನು ಉತ್ತಮ ಚಾರಿತ್ರೃದ ಕಡೆಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ಸುನ್ನಿ ಜಾಮೀಯಾ ಮಸೀದಿಯ ಕಮಿಟಿಯ ಅಧ್ಯಕ್ಷ ಅಲ್‌ಹಜ್ ಖಾದರ್ ಬಾಷಾ ಕಿವಿಮಾತು ಹೇಳಿದರು.
ಗ್ರಾಮದ ಶಾದಿಮಹಲ್‌ನ ಸಮುದಾಯ ಭವನದಲ್ಲಿ ಸುನ್ನಿ ಜಾಮೀಯಾ ಮಸೀದಿ ಕಮಿಟಿವತಿಯಿಂದ 120 ಮಕ್ಕಳಿಗೆ 40 ದಿನ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಗುರುವಾರ ಮಾತನಾಡಿದರು. ಗುರು ಹಿರಿಯರಿಗೆ ಗೌರವ ನೀಡುವುದನ್ನು ಕಲಿಯಬೇಕು. ಇಸ್ಲಾಂ ಸಂಪ್ರದಾಯ ಅನುಸರಿಸಿ ಶಿಕ್ಷಣವನ್ನು ಪಡೆದುಕೊಳ್ಳಿ ಎಂದರು. ಮುಸ್ಲಿಂ ಮುಖಂಡ ಜನಾಬ್ ಮುರ್ಷಿದ ಅಹ್ಮದ್ ಮಾತನಾಡಿ, ವಿದ್ಯೆ ಹಸಿವಾದರೆ ಅದನ್ನು ಕಲಿತರೆ ಕುಟುಂಬವೇ ಸುಭೀಕ್ಷೆವಾಗಿ ಇರಲಿದೆ ಎಂದರು.
ನಂತರ 40 ದಿನಗಳ ಕಾಲ ಉತ್ತಮ ಶಿಕ್ಷಣ ನೀಡಿದ ಮೌಲಾನ ಜನಾಬ್ ಆಸೀಫ್ ಸಾಬ್ ಅವರನ್ನು ಗೌರವಿಸಲಾಯಿತು.
ಪ್ರಮುಖರಾದ ಸಯ್ಯದ್ ನಸರುದ್ದೀನ್, ಕೊಲ್ಮಿ ನಬಿಸಾಬ್, ಡಾ.ಖಾದರಿ ಬಾಷಾ, ಬಿ. ಮಹಮ್ಮದ್ ಸಾಬ್, ಶಾನಾವಸಪುರ ಅನ್ವಬಾಷಾ, ಮಿಲ್ಕ್ ಚಾಂದ್ ಬಾಷಾ, ಟಿ.ಎಸ್ ಶಕ್ಷಾವಲಿ, ಬಿ.ಡಿ.ಎಂ ಜಿಲಾಮ್, ಗುಜರಿ ಮಾಬುಸಾಬ್, ಜಹೀರ್ ಆಫೀಸ್ ಸಾಬ್, ವಿ.ಹನುಮೇಶ್, ಶಿಕ್ಷಕ ಮಹಮ್ಮದ್ ರಫೀಕ್ ಇತರರಿದ್ದರು.