

ಸಿಂಧನೂರು: ತಾಲೂಕಿನ ಯದ್ದಲದೊಡ್ಡಿಯ ಸುವರ್ಣಗಿರಿ ವಿರಕ್ತಮಠದಲ್ಲಿ ಫೆ.24 ಮತ್ತು 25 ರಂದು ಶ್ರೀ ಸಿದ್ಧಲಿಂಗೇಶ್ವರ ಜಾತ್ರೋತ್ಸವ ಜರುಗಲಿದೆ ಎಂದು ಶ್ರೀಮಠದ ಮಹಾಲಿಂಗ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, 24ರ ಸಂಜೆ 7 ಗಂಟೆಗೆ ಹಾಲ್ವಿ ಮಹಾಂತ ಸ್ವಾಮೀಜಿ ನೇತೃತ್ವದಲ್ಲಿ ರೈತರ ಹಿತ-ಚಿಂತನಾ ಗೋಷ್ಠಿ ನಡೆಯಲಿದೆ. ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ, ಬಳ್ಳಾರಿಯ ಕಲ್ಯಾಣ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಶಹಪುರ ಗುರುಪಾದ ಸ್ವಾಮೀಜಿ, ಸವದತ್ತಿ ಮಹಾಂತ ಸ್ವಾಮೀಜಿ, ಚೀಕಲಪರ್ವಿ ಸದಾಶಿವ ಸ್ವಾಮೀಜಿ, ಕರೇಗುಡ್ಡದ ಮಹಾಂತಲಿಂಗ ಶಿವಾಚಾರ್ಯರು, ಕಲ್ಲೂರು ಶಂಭುಲಿಂಗೇಶ್ವರ ಸ್ವಾಮೀಜಿ, ಒಳಬಳ್ಳಾರಿಯ ಬಸವಲಿಂಗ ಸ್ವಾಮೀಜಿ, ಅಡವಿ ಅಮರೇಶ್ವರದ ತೋಂಟದಾರ್ಯ ಸ್ವಾಮೀಜಿ, ಚುಕ್ಕಿ ನಂಜುಂಡಸ್ವಾಮಿ, ಮಾಜಿ ಸಚಿವ ವೆಂಕಟರಾವ ನಾಡಗೌಡ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಕೃಷಿ ಬೆಲೆ ಆಯೋಗ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಪಾಲ್ಗೊಳ್ಳಲಿದ್ದಾರೆ ಎಂದರು.
ಫೆ.25ರಂದು ಕೋಡಿಮಠದ ಡಾ.ಶಿವಾನಂದ ರಾಜಯೋಗೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕರ್ತೃ ಗದ್ದುಗೆಯ ಶಿಲಾ ಮಂಟಪ ಲೋಕಾರ್ಪಣೆ ನೆರವೇರಲಿದೆ. ಸಂಜೆ ಅಪಾರ ಭಕ್ತರ ಮಧ್ಯೆ ಸಿದ್ಧಲಿಂಗೇಶ್ವರ ರಥೋತ್ಸವ ಜರುಗಲಿದೆ. ನಂತರ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕನಕಗಿರಿ ವಿರಕ್ತ ಮಠದ ಡಾ.ಚನ್ನಮಲ್ಲಸ್ವಾಮೀಜಿ ಸಾನ್ನಿಧ್ಯವಹಿಸುವರು. ಚೀಕಲಪರ್ವಿ ರುದ್ರಮುನಿ ಸ್ವಾಮೀಜಿ, ಅಮೀನಗಡದ ಶಂಕರರಾಜೇಂದ್ರ ಸ್ವಾಮೀಜಿ, ಇಂಡಿ ಶಿವಬಸವರಾಜೇಂದ್ರ ಸ್ವಾಮಿ, ಹಳೇಕೋಟೆ ಸಿದ್ಧಬಸವ ಸ್ವಾಮೀಜಿ, ತುರ್ವಿಹಾಳ ಅಮರಗುಂಡಯ್ಯ ಸ್ವಾಮೀಜಿ, ಗುಡಗುಂಟಿ ಸದಾನಂದ ಶಿವಾಚಾರ್ಯರು, ಉಟಕನೂರು ಮರಿಬಸವರಾಜ ದೇಶಿಕೇಂದ್ರ ಸ್ವಾಮೀಜಿ, ಸಿರಗುಪ್ಪ ಬಸವ ಭೂಷಣ ಸ್ವಾಮೀಜಿ, ಯದ್ದಲದೊಡ್ಡಿ ಸಂಜಯ್‌ಕುಮಾರ ಸ್ವಾಮೀಜಿ ಭಾಗವಹಿಸುವರು ಎಂದು ತಿಳಿಸಿದರು.