ಸಿಂಧನೂರು ತಾಲೂಕಿನ ಗ್ರಾಪಂ ಚುನಾವಣೆ, ಮತಗಟ್ಟೆಗಳಿಗೆ ತೆರಳಿದ ಸ್ಬಿಬಂದಿ, ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್

261220 Sindhanuru Second Stafe GP election Prepation
ಎರಡನೇ ಹಂತದ ಮತದಾನ ಹಿನ್ನೆಲೆಯಲ್ಲಿ ಚುನಾವಣೆಗೆ ನೇಮಿಸಿದ ಪಿಆರ್‌ಒ, ಎಪಿಆರ್‌ಒ ಹಾಗೂ ಸಿಬ್ಬಂದಿ ಮತ ಪೆಟ್ಟಿಗೆ ಪಡೆಯಲು ಸಿಂಧನೂರಿನ ಸರ್ಕಾರಿ ಮಹಾವಿದ್ಯಾಲಯದ ಆವರಣದಲ್ಲಿ ಜಮಾಯಿಸಿರುವುದು.
Published on

ಸಿಂಧನೂರು: ಡಿ.27 ರಂದು ತಾಲೂಕಿನ 30 ಗ್ರಾಪಂಗಳಿಗೆ ಎರಡನೇ ಹಂತದ ಮತದಾನ ಹಿನ್ನೆಲೆಯಲ್ಲಿ ಚುನಾವಣೆಗೆ ನೇಮಿಸಿದ ಪಿಆರ್‌ಒ, ಎಪಿಆರ್‌ಒ ಹಾಗೂ ಸಿಬ್ಬಂದಿ ಮತ ಪೆಟ್ಟಿಗೆಗಳೊಂದಿಗೆ ಮತಗಟ್ಟೆಗಳಿಗೆ ಶನಿವಾರ ತೆರಳಿದರು.

ನಗರದ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಮಹಾವಿದ್ಯಾಲಯದಲ್ಲಿ ಚುನಾವಣೆಗೆ ನಿಯೋಜನೆಗೊಂಡ ಸಿಬ್ಬಂದಿಯನ್ನು ಆಯಾ ಗ್ರಾಪಂಗಳಿಗೆ ಮತ ಪೆಟ್ಟಿಗೆಯೊಂದಿಗೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಪಿಆರ್‌ಒ, ಎಪಿಆರ್‌ಒ, ಸಹಾಯಕ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಎಲ್ಲ ಸಿಬ್ಬಂದಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಕೋವಿಡ್ ಹಿನ್ನೆಲೆಯಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸುವಂತೆ ತಿಳಿಸಿದರು.

ಜಿಲ್ಲಾ ಚುನಾವಣೆ ವೀಕ್ಷಕ ಮೇಜರ್ ಸಿದ್ದಲಿಂಗಯ್ಯ, ರಾಯಚೂರು ಸಹಾಯಕ ಆಯುಕ್ತ ಸಂತೋಷ ಕಾಮಗೌಡ, ತಹಸೀಲ್ದಾರ್ ಯಲ್ಲಪ್ಪ ಸುಬೇದಾರ್, ನೋಡಲ್ ಅಧಿಕಾರಿ ಮಲ್ಲಿಕಾರ್ಜುನ, ತಾಪಂ ಇಒ ಬಾಬುರಾವ್ ರಾಠೋಡ್ ಮತ್ತಿತರ ಮೇಲಾಧಿಕಾರಿಗಳು ಚುನಾವಣೆಗೆ ನೇಮಿಸಿರುವ ಸಿಬ್ಬಂದಿ ಮತ ಪೆಟ್ಟಿಗೆಯೊಂದಿಗೆ ಮತಗಟ್ಟೆ ಕೇಂದ್ರಗಳಿಗೆ ತೆರಳುವುದನ್ನು ವೀಕ್ಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net