

ಬೆಂಗಳೂರು: ಹೊಸ ವರ್ಷಾಚರಣೆ ಹಾಗೂ ಮದುವೆ ಸೀಸನ್ ಸಂಭ್ರಮ ಹೆಚ್ಚಿಸಲು ನ್ಯೂ ಕ್ರ್‌ಟಾ ಸಿಲ್ಕ್ ಇಂಡಿಯಾ ವತಿಯಿಂದ 29ರವರೆಗೆ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಭಾರತೀಯ ಸಾಂಪ್ರದಾಯಿಕ ರೇಷ್ಮೆ ಉತ್ಪನ್ನಗಳ ಅದ್ದೂರಿ ಪ್ರದರ್ಶನ ಆಯೋಜಿಸಲಾಗಿದೆ.
ಮದುವೆ ಹಾಗೂ ಹಬ್ಬಕ್ಕೆ ಖರೀದಿ ಮಾಡಲು ಯೋಜನೆ ಹಾಕಿಕೊಂಡಿದ್ದರೆ ರೇಷ್ಮೆ ಸೀರೆ ಸೇರಿ ವ್ಯಾಪಕ ಶ್ರೇಣಿಯ ರೇಷ್ಮೆ ಉತ್ಪನ್ನಗಳು ಲಭ್ಯವಿವೆ. ನೇಕಾರರಿಂದ ನೇರ ಮಾರಾಟ ಆಗುವುದರಿಂದ ಅತ್ಯುತ್ತಮ ಸೀರೆ ಹಾಗೂ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಪಡೆಯಬಹುದು. ದೇಶದ ಹಲವು ಕುಶಲಕರ್ಮಿಗಳು ತಮ್ಮ ಉತ್ಪನ್ನಗಳೊಂದಿಗೆ ಮಳಿಗೆ ತೆರೆದಿದ್ದಾರೆ. ಛತ್ತೀಸ್‌ಗಢದ ಕ್ರ್‌ಟಾ ಸೀರೆಗಳು, ಕಂತಾಸ್ಟಿಚ್ ರೇಷ್ಮೆ ಸೀರೆಗಳು, ಪಶ್ಚಿಮ ಬಂಗಾಳದ ತಂಗೈಲ್, ಲಕ್ನೋ ಚಿಕನ್ ವರ್ಕ್, ಬನಾರಸಿ ಸಿಲ್ಕ್, ಜಮ್ದಾನಿ ಮತ್ತು ಸಿಫ್ರಾನ್ ಸೇರಿ ವಿಭಿನ್ನ ವಿನ್ಯಾಸಗಳೊಂದಿಗೆ ಸೀರೆಗಳು, ಡ್ರೆಸ್ ಮೆಟೀರಿಯಲ್‌ಗಳ ವ್ಯಾಪಕ ಸಂಗ್ರಹಗಳಿವೆ.
ಬಂಧೇಜ್ ಬ್ಲಾಕ್ ಮತ್ತು ಸಂಗನೇರಿ ಪ್ರಿಂಟ್‌ನಿಂದ ಗಟ್ಜೋಡಾ, ಬಂಧಿನಿ ಮತ್ತು ಪಟೋಲಾ ಫ್ರೋ ಗುಜರಾತ್ ಮತ್ತು ಖಾದಿ ಸಿಲ್ಕ್, ಟುಸ್ಸಾರ್ ಸಿಲ್ಕ್ ಸೇರಿ ಬಹು ಆಯ್ಕೆಗಳಿಂದ ಕೂಡಿದ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯಲಿವೆ. ಸಾಂಪ್ರದಾಯಿಕ ಮೋಟಿಫ್‌ಗಳೊಂದಿಗೆ ಕಾಂಜೀವರಂ ಸೀರೆಗಳ ದೊಡ್ಡ ಶ್ರೇಣಿ ಪ್ರದರ್ಶನದಲ್ಲಿದೆ. ಧರ್ಮಾವರಂ ಶೈಲಿಯಲ್ಲಿ ನೇಯ್ದ ಸೂಟ್‌ಗಳು, ಚಿನ್ನದ ಝರಿ ಬಾರ್ಡರ್‌ಗಳ ಸೀರೆಗಳು ಮತ್ತು ಆಂಧ್ರಪ್ರದೇಶದ ಗದ್ವಾಲ್ ಸೀರೆಗಳು ನಿಮ್ಮ ವಾರ್ಡ್‌ರೋಬ್‌ಗೆ ಆಕರ್ಷಕ ಮೆರುಗು ನೀಡಲಿವೆ.
ವಿಳಾಸ:
ವೈಟ್ ಹೌಸ್, ಬಿಡಿಎ ಕಾಂಪ್ಲೆಕ್ಸ್ ಬಳಿ, ಸೆಕ್ಟರ್ 6, ಎಚ್‌ಎಸ್‌ಆರ್ ಲೇಔಟ್, ಬೆಂಗಳೂರು - 102. ಪ್ರದರ್ಶನದ ಸಮಯ: 29ರವರೆಗೆ ಬೆಳಗ್ಗೆ 11 ರಿಂದ ರಾತ್ರಿ 8 ಗಂಟೆವರೆಗೆ